ಖ್ಯಾತ ಗಾಯಕಿ ಉಷಾ ಉತ್ತುಪ್ ಪತಿ ಸಾವು!; ಟಿವಿ ನೋಡುತ್ತಿರುವಾಗಲೇ ಹೃದಯಾಘಾತ!
ಖ್ಯಾತ ಗಾಯಕಿ ಉಷಾ ಉತ್ತುಪ್ ಅವರ ಪತಿ ಜಾನಿ ಚಾಕೋ ಉತ್ತುಪ್ ಸಾವನ್ನಪ್ಪಿದ್ದಾರೆ.. ಕೋಲ್ಕತ್ತಾದ ಮನೆಯಲ್ಲಿ ಟಿವಿ ನೋಡುತ್ತಿದ್ದಾಗ ಅವರಿಗೆ ಹೃದಯಾಘಾತವಾಗಿದ್ದು, ಇಹಲೋಕ ತ್ಯಜಿಸಿದ್ದಾರೆ.. ಅವರಿಗೆ 78 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ..
ಟಿವಿ ನೋಡುತ್ತಿರುವಾಗ ಜಾನಿ ಚಾಕೋಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.. ಉಷಾ ಉತ್ತುಪ್ ಅವರಿಗೆ ಜಾನಿ ಚಾಕೋ ಅವರು ಎರಡನೇ ಪತಿ.. 70ರ ದಶಕದಲ್ಲಿ ಟೀ ತೋಟದಲ್ಲಿ ಜಾನಿ ಚಾಕೋ ಕೆಲಸ ಮಾಡುತ್ತಿದ್ದರು.. ಅಲ್ಲಿಯೇ ಉಷಾ ಉತ್ತುಪ್‌ಗೆ ಪರಿಚಯವಾಗಿ ಇಬ್ಬರೂ ಮದುವೆಯಾಗಿದ್ದರು..
ಉಷಾ ಉತ್ತುಪ್ ದಂಪತಿಗೆ ಸನ್ನಿ ಎಂಬ ಮಗ ಮತ್ತು ಅಂಜಲಿ ಎಂಬ ಮಗಳಿದ್ದಾರೆ.