BengaluruHealthInternational

ರಾಜ್ಯಕ್ಕೆ ಒಮಿಕ್ರೋನ್‌ ಆತಂಕವಿಲ್ಲ ; ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ‌ಆಫ್ರಿಕನ್ ದೇಶಗಳಲ್ಲಿ ಕಂಡುಬಂದಿರುವ ಕೊರೋನಾ ಹೊಸ  ರೂಪಾಂತರಿ ತಳಿಯಿಂದ ಸದ್ಯಕ್ಕೆ ಕರ್ನಾಟಕ ರಾಜ್ಯಕ್ಕೆ ಯಾವುದೇ ಆತಂಕ ಇಲ್ಲ. ಹಾಗಂತ ನಿರ್ಲಕ್ಷ್ಯ ಮಾಡಬಾರದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೋವಿಡ್ 19 ರೂಪಾಂತರಿ ತಳಿ B.1.1529 ಒಮಿಕ್ರೋನ್ ಬಗ್ಗೆ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಮಾತನಾಡಿದ್ದಾರೆ.

  ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡೆಲ್ಟಾ ವೈರಸ್‌ಗಿಂತ ಈಗ ಆಫ್ರಿಕನ್ ದೇಶಗಳಲ್ಲಿ ಕಂಡುಬಂದಿರುವ ‘ಒಮಿಕ್ರಾನ್’ ಪರಿಣಾಮಕಾರಿಯೇ ಎಂಬುದರ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಒಮಿಕ್ರಾನ್ ಬಹಳ ಬೇಗ ಹರಡುತ್ತದೆ ಎಂದು  ತಜ್ಞರು ಹೇಳುತ್ತಿದ್ದಾರೆ. ಆದರೆ ಡೆಲ್ಟಾ ರೀತಿಯಲ್ಲಿ ಇದೂ ಮಾರಕವೇ ಎಂಬುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಜೊತೆಗೆ ಇದರ ಲಕ್ಷಣಗಳ ಬಗ್ಗೆ ಸಂಪೂರ್ಣ ವರದಿಗಾಗಿ ಕಾಯುತ್ತಿದ್ದೇವೆ ಎಂದು ಸುಧಾಕರ್‌ ಹೇಳಿದ್ದಾರೆ.
  ಒಮಿಕ್ರಾನ್ ತಳಿಯ ಬಗ್ಗೆ ಆರೋಗ್ಯಾಧಿಕಾರಿಗಳು ಈಗಾಗಲೇ ಚರ್ಚಿಸಿ, ರಾಜ್ಯದಲ್ಲಿ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ಸದ್ಯಕ್ಕೆ ಇರುವ ವರದಿಯ ಪ್ರಕಾರ ಜನರು ಯಾವುದೇ ಆತಂಕಪಡುವ ಅಗ್ಯವಿಲ್ಲ. ಆಫ್ರಿಕನ್ ದೇಶಗಳಿಂದ ಬರುವ ಎಲ್ಲ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಪ್ರತಿಯೊಬ್ಬ ಪ್ರಯಾಣಿಕರಿಗೂ ಪರೀಕ್ಷೆ ಮಾಡಲಾಗುತ್ತದೆ ಎಂದು ಸಚಿವ ಸುಧಾಕರ್‌ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
Share Post