ಭಾರತದಿಂದ ಅಫ್ಘಾನಿಸ್ತಾನಕ್ಕೆ 5ಲಕ್ಷ ಡೋಸ್ ಲಸಿಕೆ ರವಾನೆ
ನವದೆಹಲಿ : ಭಾರತವು ಇಂದು ೫ಲಕ್ಷ ಡೋಸ್ ಕೊರೊನಾ ಲಸಿಕೆಯನ್ನು ಅಫ್ಘಾನಿಸ್ತಾನಕ್ಕೆ ರವಾನೆ ಮಾಡಲಾಗಿದೆ. ಅಫ್ಘಾನಿಸ್ತಾನದ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಲಸಿಕೆಗಳನ್ನು ಹಸ್ತಾಂತರಿಸಲಾಗಿದೆ. ಯುದ್ಧ ಪೀಡಿತ ದೇಶಕ್ಕೆ ಮುಂಬರುವ ವಾರಗಳಲ್ಲಿ ಮತ್ತೆ 5 ಲಕ್ಷ ಡೋಸ್ ಲಸಿಕೆಗಳನ್ನು ಪೂರೈಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಡಿಸೆಂಬರ್ 11ರಂದು, ಭಾರತವು ವಿಶ್ವ ಆರೋಗ್ಯ ಸಂಸ್ಥೆ (WHO) ಮೂಲಕ 1.6 ಮೆಟ್ರಿಕ್ ಟನ್ ಜೀವರಕ್ಷಕ ಔಷಧಗಳನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಿತ್ತು. ಔಷಧಿಗಳನ್ನು ದೆಹಲಿಯಿಂದ ರಿಟರ್ನ್ ಕಾಮ್ ಏರ್ ವಿಮಾನದ ಮೂಲಕ ಕಳುಹಿಸಲಾಯಿತು.