International

ಸೊಲೋಮನ್‌ ದ್ವೀಪದ ಬಳಿ ಚೀನಾ ಸೇನಾ ಸ್ಥಾವರ: ಕಳವಳ ವ್ಯಕ್ತಪಡಿಸಿದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ: ಡ್ರ್ಯಾಗನ್ ಪಡೆ ಭಾರತವಷ್ಟೇ ಅಲ್ಲದೆ ಬೇರೆ ದೇಶಗಳ ಕಡೆಯೂ ತನ್ನ ಸೇನೆಯನ್ನು ಕಳುಹಿಸುತ್ತಿದೆ. ಭಾರತದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಚೀನಾ ಪಡೆಗಳನ್ನು ನಿಯೋಜಿಸಿರುವುದು ಭಾರತ ಗಂಭೀರವಾಗಿ ಪರಿಗಣಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಕ್ರಮದಲ್ಲಿ ಮತ್ತೊಂದು ಸುದ್ದಿಇದೀಗ ಸದ್ದು ಮಾಡುತ್ತಿದೆ. ಆಸ್ಟ್ರೇಲಿಯಾಕ್ಕೆ ಅತಿ ಸಮೀಪದಲ್ಲಿ ಚೀನಾ ಸೇನಾ ನೆಲೆ ಸ್ಥಾಪಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಆಸ್ಟ್ರೇಲಿಯಾ ಆತಂಕ ವ್ಯಕ್ತಪಡಿಸಿದೆ. ಚೀನಾ ಮತ್ತು ಸೊಲೋಮನ್ ದ್ವೀಪಗಳ ನಡುವಿನ ಒಪ್ಪಂದದ ದಾಖಲೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಚೀನಾದ ಹಡಗೊಂದು ಆಸ್ಟ್ರೇಲಿಯಾದ ಉತ್ತರದಲ್ಲಿರುವ ವಿಶೇಷ ಆರ್ಥಿಕ ವಲಯಕ್ಕೆ ಪ್ರವೇಶಿಸಿರುವುದು ಸಂಚಲನ ಮೂಡಿಸಿದೆ. ಆಸ್ಟ್ರೇಲಿಯಾ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಆಸ್ಟ್ರೇಲಿಯದ ರಕ್ಷಣಾ ಸಚಿವ ಪೀಟರ್ ಡಟ್ಟನ್ ಅವರು ಸೇನಾ ನೆಲೆಯನ್ನು ಸ್ಥಾಪಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಈ ವಿಷಯವನ್ನು ಸೊಲೋಮನ್ ದ್ವೀಪಗಳಿಗೆ ವರದಿ ಮಾಡಲಾಗುವುದು ಎಂದು ಹೇಳಿದ್ದಾರೆ. ಅದರ ಜೊತೆ ದ್ವೀಪದ  ಭದ್ರತೆ ನನಗೆ ಸೇರಿದ್ದು ಎಂದು ಆಸ್ಟ್ರೇಲಿಯಾ ಹೇಳಿದೆ.

ಕ್ವಾಡ್ ಅಲೈಯನ್ಸ್‌ನಲ್ಲಿ ಆಸ್ಟ್ರೇಲಿಯಾ ಪ್ರಮುಖ ಪಾಲುದಾರನಾಗಿದ್ದು, ಚೈನಾ ಕ್ವಾಡ್ ಅಲೈಯನ್ಸ್‌ನಲ್ಲಿ ತನ್ನ ಉದ್ಧಟತನವನ್ನು ಮುಂದುವರಿಸಿದೆ. ಯುನೈಟೆಡ್ ಸ್ಟೇಟ್ಸ್, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ಕ್ವಾಡ್ ಮೈತ್ರಿ ಬಗ್ಗೆ ಚೀನಾಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ  ಏನೋ ಒಂದು ಕಿತಾಪತಿ ಮಾಡಲು ಮುಂದಾಗಿದೆ. ಸೊಲೋಮನ್ ದ್ವೀಪವನ್ನು 2019 ರಲ್ಲಿ ತೈವಾನ್‌ನಿಂದ ಬೇರ್ಪಡಿಸಿ ಚೀನಾ ತನ್ನಡೆಗೆ ಸೇರಿಸಿಕೊಂಡಿದೆ. ಪ್ರಸ್ತುತ ದ್ವೀಪದ ಕ್ಯಾಬಿನೆಟ್‌ ಮಂತ್ರಿಗಳು ಚೀನಾದೊಂದಿಗಿನ ಒಪ್ಪಂದದ ದಾಖಲೆ ಪರಿಶೀಲನೆ ನಡೆಸಲಿದೆ. ಈ ಒಪ್ಪಂದ ಓಕೆ ಆದರೆ  ಚೀನಾದ ಹಡಗುಗಳು ಆಸ್ಟ್ರೇಲಿಯದ ತೀರಕ್ಕೆ ಹೋಗಲು ಅವಕಾಶ ಸಿಗಲಿದೆ. ಚೀನಾ ಪೊಲೀಸರು ಮತ್ತು ಇತರ ಸಿಬ್ಬಂದಿಯನ್ನು ಕಳುಹಿಸುವ ಅವಕಾಶವೂ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಸದ್ಯ ಆಸ್ಟ್ರೇಲಿಯಾ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

Share Post