NEET PG 2021 ಕೌನ್ಸೆಲಿಂಗ್ ಪ್ರಕ್ರಿಯೆಯ ಪುನರಾವರ್ತಿತ ವಿಳಂಬದ ಬಗ್ಗೆ ನಿವಾಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ (ಫೋರ್ಡಾ) ಈ ಪ್ರತಿಭಟನೆಯಲ್ಲಿ ಭಾಗವಹಿಸಿದೆ. ಕೇಂದ್ರವು ಗುರುವಾರ ಮತ್ತೊಮ್ಮೆ NEET PG 2021 ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಮುಂದೂಡಿದೆ ಮತ್ತು EWS ವರ್ಗಕ್ಕೆ ರೂ 8 ಲಕ್ಷ ವಾರ್ಷಿಕ ಆದಾಯ ಮಿತಿಯ ಮಾನದಂಡವನ್ನು ಮರುಪರಿಶೀಲಿಸುವುದಾಗಿ ಹೇಳಿದೆ. ಈ ಬಾರಿ ಕೌನ್ಸೆಲಿಂಗ್ ಪ್ರಕ್ರಿಯೆ ಒಂದು ತಿಂಗಳಿಗೂ ಹೆಚ್ಚು ವಿಳಂಬವಾಗಿದೆ. ಮುಂದಿನ ನ್ಯಾಯಾಲಯದ ವಿಚಾರಣೆಯನ್ನು ಜನವರಿ 6, 2022 ಕ್ಕೆ ನಿಗದಿಪಡಿಸಲಾಗಿದೆ.
ಆದರಿಂದ ರಾಷ್ಟ್ರದ ಹಲವು ಕಡೆ ಡಾಕ್ಟರ್ಸ್‌ಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಆಸ್ಪತ್ರೆ ಸೇವೆಗಳನ್ನೂ ಸಹ ಹಿಂಪಡೆದಿದ್ದಾರೆ.