Lifestyle

ದೇಹದಲ್ಲಿ ಕೆಟ್ಟ ಕೊಬ್ಬಿನ ಬೆಳವಣಿಗೆ ಆರೋಗ್ಯಕ್ಕೆ ಹಿತಕರವಲ್ಲ-ಹಲವಾರು ರೋಗಗಳಿಗೆ ನಾಂದಿ

ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡ, ಬೊಜ್ಜು, ಹೃದಯಾಘಾತ, ಕೀಲು ನೋವು, ಬೆನ್ನು ನೋವು, ಮೂತ್ರಪಿಂಡ ಮತ್ತು ಮಿದುಳಿನ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನ ಅಧಿಕ ಮಟ್ಟವು ರಕ್ತನಾಳಗಳ ಅಡಚಣೆ ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು.

ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನಿಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ನಾರಿನಾಂಶವುಳ್ಳ ತರಕಾರಿಗಳ ಸೇವನೆ, ನಾರಿನಂಶ ಹೆಚ್ಚಿರುವ ಓಟ್ಸ್, ಬಾರ್ಲಿ, ಕಾಳು,  ಉದ್ದಿನಬೇಳೆ, ರಾಜ್ಮಾ, ಕೊತ್ತಂಬರಿ ಸೊಪ್ಪು ಮತ್ತು ಬದನೆಕಾಯಿಗಳ ಸೇವನೆಯಿಂದ ಕೆಟ್ಟ ಕೊಬ್ಬನ್ನು ಕರಗಿಸಬಹುದು. ಇದರ ಜೊತೆಗೆ ಬಾದಾಮಿ, ವಾಲ್‌ನಟ್ಸ್, ಸೇಬು, ದ್ರಾಕ್ಷಿ ಮತ್ತು ಕಿತ್ತಳೆಯಂತಹ ಹಣ್ಣುಗಳನ್ನು ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ಅನ್ನು ಕಡಿಮೆ ಮಾಡಬಹುದು.

ಅದೇ ರೀತಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರಗಳನ್ನು ಸಹ ತ್ಯಜಿಸಬೇಕು. ಉಪ್ಪನ್ನು ಸೂಕ್ತ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಅದರಲ್ಲೂ ಟ್ರಾನ್ಸ್ ಫ್ಯಾಟ್ ಹೆಚ್ಚಿರುವ ಬೇಕರಿ ಆಹಾರಗಳು, ಫಾಸ್ಟ್ ಫುಡ್ ಗಳು, ಸ್ಯಾಚುರೇಟೆಡ್ ಕೊಬ್ಬಿನಂಶವಿರುವ ಮಾಂಸಾಹಾರಗಳು, ಫ್ರೈಗಳು, ಎಲ್ಲಾ ರೀತಿಯ ಸಿಹಿತಿಂಡಿಗಳು ಇತ್ಯಾದಿಗಳನ್ನು ತ್ಯಜಿಸಬೇಕು. ವಾರಕ್ಕೊಮ್ಮೆ ಕಡಿಮೆ ಎಣ್ಣೆಯಲ್ಲಿ ಬೇಯಿಸಿದ ಕೋಳಿ ಮತ್ತು ಮೀನುಗಳನ್ನು ತೆಗೆದುಕೊಳ್ಳುವುದು ಉತ್ತಮ. ಆಹಾರದ ಜೊತೆಗೆ ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಮಾಡುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.

Share Post