ಬಿಬಿಎಂಪಿ ಬೆಂಕಿ ಅವಘಢ ಪ್ರಕರಣ; ಮುಖ್ಯ ಎಂಜಿನಿಯರ್ ಶಿವಕುಮಾರ್ ಸಾವು
ಬೆಂಗಳೂರು; ಕೆಲ ದಿನಗಳ ಹಿಂದೆ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ನಡೆದ ಬೆಂಕಿ ಅವಘಡ ಪ್ರಕರಣದಲ್ಲಿ ಸುಟ್ಟು ಗಾಯಗೊಂಡಿದ್ದ ಮುಖ್ಯ ಎಂಜಿನಿಯರ್ ಶಿವಕುಮಾರ್ ಸಾವನ್ನಪ್ಪಿದ್ದಾರೆ. ಹಲವು ದಿನಗಳಿಂದ ಅವರು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಶಿವಕುಮಾರ್ ಸೇರಿ ಹಲವು ಬಿಬಿಎಂಪಿ ಸಿಬ್ಬಂದಿ ಘಟನೆ ದಿನ ಗಾಯಗೊಂಡಿದ್ದರು. ಮುಖ್ಯ ಎಂಜಿನಿಯರ್ ಶಿವಕುಮಾರ್ ಅವರು ಶೇ.25ರಷ್ಟು ಸುಟ್ಟು ಗಾಯಗೊಂಡಿದ್ದರು.