DistrictsHealth

ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ವಿದ್ಯಾರ್ಥಿನಿಗೆ ಹೃದಯಾಘಾತ!

ಮಂಗಳೂರು; ಖಾಸಗಿ ಬಸ್‌ನಲ್ಲಿ ಹೋಗುತ್ತಿದ್ದಾಗ ವಿದ್ಯಾರ್ಥಿನಿಗೆ ಹೃದಯಾಘಾತವಾಗಿದ್ದು, ಕಂಡಕ್ಟರ್‌ ಹಾಗೂ ಚಾಲಕನ ಸಮಯಪ್ರಜ್ಞೆಯಿಂದ ವಿದ್ಯಾರ್ಥಿನಿಯ ಜೀವ ಉಳಿದಿದೆ.. ಮಂಗಳೂರಿನ ಕೂಳೂರು ಮಾರ್ಗದಲ್ಲಿ ಈ ಘಟನೆ ನಡೆದಿದೆ.. ವಿದ್ಯಾರ್ಥಿನಿಗೆ ಎದೆನೋವು ಕಾಣಿಸಿಕೊಂಡಿದ್ದು ಗೊತ್ತಾಗುತ್ತಿದ್ದಂತೆ, ಬಸ್‌ನಲ್ಲಿದ್ದ ಸೈರನ್‌ ಆನ್‌ ಮಾಡಿಕೊಂಡ ಬಸ್‌ ಟ್ರೈವರ್‌ ವೇಗವಾಗಿ ಓಡಿಸಿ ಆಸ್ಪತ್ರೆ ತಲುಪಿದ್ದಾರೆ.. ಇದರಿಂದಾಗಿ ವಿದ್ಯಾರ್ಥಿನಿಯ ಜೀವ ಉಳಿದಿದೆ..

ಇದನ್ನೂ ಓದಿ; ಭೂಕುಸಿತದಲ್ಲಿ ಮೃತರ ಸಂಖ್ಯೆ 143ಕ್ಕೆ ಏರಿಕೆ!; ರಾಜ್ಯದ ನಾಲ್ವರ ದುರ್ಮರಣ!

ಮಂಗಳೂರಿನ ಕೂಳೂರು ಮಾರ್ಗ 13ಎಫ್‌ನಲ್ಲಿ ಕೃಷ್ಣ ಪ್ರಸಾದ್‌ ಬಸ್‌ನಲ್ಲಿ ಈ ಘಟನೆ ನಡೆದಿದೆ.. ಬಸ್‌ನಲ್ಲಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಎದೆನೋವು ಕಾಣಿಸಿಕೊಂಡಿದೆ.. ಈ ವಿಷಯ ತಿಳಿಯುತ್ತಿದ್ದಂತೆ ಚಾಲಕ ಗಜೇಂದ್ರ ಕುಂದರ್‌ ಹಾಗೂ ಕಂಡಕ್ಟರ್‌ ಮಹೇಶ್‌ ಪೂಜಾರಿ ವಿದ್ಯಾರ್ಥಿನಿಯನ್ನು ಉಳಿಸುವ ಸಾಹಸ ಮಾಡಿದ್ದಾರೆ. ಸೈರನ್‌ ಆನ್‌ ಮಾಡಿಕೊಂಡು ಕೇವಲ 6 ನಿಮಿಷಗಳಲ್ಲಿ 6 ಕಿಲೋ ಮೀಟರ್‌ ದೂರದ ಕಂಕನಾಡಿ ಫಾದರ್‌ ಮುಲ್ಲರ್‌ ಆಸ್ಪತ್ರೆ ತಲುಪಿದ್ದಾರೆ..
ಕೂಡಲೇ ವಿದ್ಯಾರ್ಥಿನಿಗೆ ಚಿಕಿತ್ಸೆ ಸಿಕ್ಕಿದ್ದರಿಂದ ಆಕೆ ಉಳಿದಿದ್ದಾಳೆ.. ಬಸ್‌ ಸಿಬ್ಬಂದಿಯ ಈ ಸಾಹಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.. ವಿದ್ಯಾರ್ಥಿನಿಯ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ..

ಇದನ್ನೂ ಓದಿ; ಟೆಕ್ಕಿ ಯುವತಿ ಮೇಲೆ ದೇವಸ್ಥಾನವೊಂದರ ಪೂಜಾರಿಯಿಂದ ಅತ್ಯಾಚಾರ!

Share Post