National

ಭೂಕುಸಿತದಲ್ಲಿ ಮೃತರ ಸಂಖ್ಯೆ 143ಕ್ಕೆ ಏರಿಕೆ!; ರಾಜ್ಯದ ನಾಲ್ವರ ದುರ್ಮರಣ!

ವಯನಾಡು; ಕೇರಳದ ವಯನಾಡಿನಲ್ಲಿ ನಡೆದ ಭಯಾನಕ ಪ್ರಕೃತಿ ವಿಕೋಪದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.. ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 143ಕ್ಕೇರಿದೆ.. ದುರಂತದಲ್ಲಿ ಕರ್ನಾಟಕದ ನಾಲ್ವರು ಕೂಡಾ ಸಾವನ್ನಪ್ಪಿದ್ದಾರೆ.. ಹಲವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಇರಸವಾಡಿ ಗ್ರಾಮದ ರಾಜೇಂದ್ರ (50), ರತ್ನಮ್ಮ (45), ಪುಟ್ಟಸಿದ್ದಶೆಟ್ಟಿ (62), ರಾಣಿ (50 ಮೃತಪಟ್ಟಿದ್ದಾರೆ.

ಇದನ್ನೂ ಓದಿ; ಟೆಕ್ಕಿ ಯುವತಿ ಮೇಲೆ ದೇವಸ್ಥಾನವೊಂದರ ಪೂಜಾರಿಯಿಂದ ಅತ್ಯಾಚಾರ!

ವಯನಾಡಿನ ಮೆಪ್ಪಾಡಿಯ ನಾಲ್ಕು ಗ್ರಾಮಗಳಲ್ಲಿ ಭೂಕುಸಿತದಿಂದ ಈವರೆಗೆ 143 ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಸೇನೆ ಮತ್ತು ಎನ್‌ಡಿಆರ್‌ಎಫ್ ಸೇರಿದಂತೆ ರಾಜ್ಯದ ಆಡಳಿತವು ಈ ಸಂತ್ರಸ್ತರನ್ನು ರಕ್ಷಿಸುವ ಕಾರ್ಯವನ್ನು ಮುಂದುವರೆಸಿದೆ. ಪ್ರವಾಹ ಹಾಗೂ ಕೆಸರಿನ ಹರಿವಿಗೆ ಕೆಲವರು ಕೊಚ್ಚಿ ಹೋಗಿದ್ದರೆ, ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಾಪತ್ತೆಯಾದವರಿಗಾಗಿ ಡ್ರೋನ್ ಮತ್ತು ಇತರೆ ಉಪಕರಣಗಳ ಮೂಲಕ ಶೋಧ ನಡೆಸುತ್ತಿದ್ದಾರೆ. ಈ ಕ್ರಮದಲ್ಲಿ ತರಬೇತಿ ಪಡೆದ ಸೇನಾ ಶ್ವಾನಗಳನ್ನೂ ಮೈದಾನಕ್ಕೆ ತರಲಾಯಿತು.

ಇದನ್ನೂ ಓದಿ; ಚೀನಾದಲ್ಲಿ ಸ್ಟ್ರೀಟ್‌ ಗರ್ಲ್‌ಫ್ರೆಂಡ್‌ ಟ್ರೆಂಡ್‌!; HUGಗೆ 11 ರೂಪಾಯಿ, KISSಗೆ 110 ರೂಪಾಯಿ!

ಬೆಲ್ಜಿಯನ್ ಮಾಲಿನೋಯಿಸ್, ಲ್ಯಾಬ್ರಡಾರ್ ಮತ್ತು ಜರ್ಮನ್ ಶೆಫರ್ಡ್ ತಳಿಯ ಸ್ನಿಫರ್ ನಾಯಿಗಳನ್ನು ತರಲಾಗಿತ್ತು. ಅವು ಮಾನವ ಅವಶೇಷಗಳ ಜೊತೆಗೆ ಮಣ್ಣಿನಲ್ಲಿ ಹುದುಗಿರುವವರ ಉಸಿರಾಟದ ವಾಸನೆಯನ್ನು ಕಂಡು ಹಿಡಿಯುತ್ತವೆ.

Share Post