Health

ವ್ಯಾಕ್ಸಿನ್‌ ಹಾಕಿಸದಿದ್ದರೆ ಹೊರಬರುವಂತೆಯೇ ಇಲ್ಲ; ಹರ್ಯಾಣ ಸರ್ಕಾರ

ಚಂಡಿಗಢ: ಕೊರೊನಾ ವ್ಯಾಕ್ಸಿನ್‌ ಎರಡೂ ಡೋಸ್‌ ಹಾಕಿಸಿಕೊಳ್ಳದವರು ಜನವರಿ ೧ರಿಂದ ಸಾರ್ವಜನಿಕ ಪ್ರದೇಶಗಳಲ್ಲಿ ತಿರುಗಾಡಲು ಅವಕಾಶ ನೀಡುವುದಿಲ್ಲ ಎಂದು ಹರ್ಯಾಣ ಸರ್ಕಾರ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಹರ್ಯಾಣ ಸರ್ಕಾರದ ಆರೋಗ್ಯ ಸಚಿವ ಅನಿಲ್‌ ವಿಜ್‌, ಜನವರಿ ೧ ರಿಂದ ಈ ನಿಯಮ ಜಾರಿಗೆ ಬರಲಿದೆ. ಎರಡೂ ಡೋಸ್‌ ವ್ಯಾಕ್ಸಿನ್‌ ಹಾಕಿಸಿಕೊಳ್ಳದವರಿಗೆ ಮದುವೆ ಮಂಟಪ, ಹೋಟೆಲ್‌, ಬ್ಯಾಂಕ್‌, ಮಾಲ್‌, ಸರ್ಕಾರಿ ಕಚೇರಿ, ಬಸ್‌ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶವೇ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಿದ್ದೇನೆ ಎಂದು ಸಚಿವರು ಹೇಳಿದ್ದಾರೆ. ಈ ನಿಯಮದಿಂದಾಗಿ ಜನರಿಗೆ ಲಸಿಕೆಯನ್ನು ಹಾಕಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರಗಳು ಎಷ್ಟೇ ಮನವಿ ಮಾಡಿದರೂ ಕೆಲವರು ಲಸಿಕೆ ಹಾಕಿಸಿಕೊಂಡಿಲ್ಲ. ಈ ಕಾರಣದಿಂದಾಗಿ ಹರ್ಯಾಣ ಈ ಕಠಿಣ ನಿಯಮ ಜಾರಿಗೆ ತರುತ್ತಿದೆ.

Share Post