Crime

ಬ್ಲ್ಯಾಕ್‌ ಫಂಗಸ್‌ಗೆ ಔಷಧಿ ಆರ್ಡರ್‌; ಬಂದಿದ್ದು ಮಾತ್ರ ಚಪ್ಪಲಿ..!

ಬೆಂಗಳೂರು: ಬ್ಲ್ಯಾಕ್‌ ಫಂಗಸ್‌ಗೆ ಚುಚ್ಚುಮದ್ದು ಆರ್ಡರ್‌ ಮಾಡಿದ್ದ ಬೆಂಗಳೂರಿನ ವೈದ್ಯರಿಗೆ ಚಪ್ಪಲಿ ಪಾರ್ಸೆಲ್‌ ಬಂದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ವೈದ್ಯ ಮಹೇಶ್‌ ಎಂಬುವವರ ತಂದೆಗೆ ಬ್ಲ್ಯಾಕ್‌ ಫಂಗಸ್‌ ಕಾಣಿಸಿಕೊಂಡಿತ್ತು. ಹೀಗಾಗಿ ಅವರು, ಇದಕ್ಕೆ ಚುಚ್ಚುಮದ್ದು ಖರೀದಿಸಿ ಆನ್‌ಲೈನ್‌ ಮೊರೆಹೋಗಿದ್ದರು. ಈ ವೇಳೆ ಮಹೇಶ್‌ ಅವರಿಗೆ ಸೈಬರ್‌ ವಂಚನೆಯಾಗಿದ್ದು, ಸುಮಾರು 3.65 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

   ಆರು ತಿಂಗಳ ಹಿಂದೆ ವೈದ್ಯ ಮಹೇಶ್ ತನ್ನ ತಂದೆಗೆ ಬ್ಲ್ಯಾಕ್‌ ಫಂಗಸ್‌  ಕಾಣಿಸಿಕೊಂಡಿತ್ತು. ಹೀಗಾಗಿ ವೈದ್ಯ ಮಹೇಶ್ ಔಷಧವನ್ನು ಆನ್​ಲೈನ್​ನಲ್ಲಿ ಖರೀದಿಸಲು ಹುಡುಕಾಟ ನಡೆಸಿದ್ದರು. ಆಗ ಫೇಸ್​ಬುಕ್​ನಲ್ಲಿ ಪಂಜಾಬ್​ ಮೂಲದ ರೋಹನ್ ಚೌಹಾಣ್ ಎಂಬ ವ್ಯಕ್ತಿಯನ್ನು ಸಿಕ್ಕಿದ್ದಾನೆ. ಆತನೊಂದಿಗೆ ಚರ್ಚೆ ನಡೆಸಿದ ವೈದ್ಯ ಮಹೇಶ್‌, ೫೦ ಚುಚ್ಚುಮದ್ದಿಗೆ 3.65 ಲಕ್ಷ ರೂಪಾಯಿಗೆ ಮಾತನಾಡಿದ್ದಾರೆ.

  ಅದರಂತೆ ಹಣ ಪಾವತಿ ಮಾಡಿದ ನಂತರ ಮಹೇಶ್‌ ಅವರಿಗೆ ಪಾರ್ಸೆಲ್‌ ಬಂದಿತಾದರೂ ಅದರಲ್ಲಿ ಚಪ್ಪಲಿ ಇತ್ತು ಎಂದು ಮಹೇಶ್‌ ಹೇಳಿದ್ದಾರೆ. ಈ ವಂಚನೆಯಿಂದಾಗಿ ಸೂಕ್ತ ಚಿಕಿತ್ಸೆ ಸಿಗದೆ ಮಹೇಶ್‌ ತಂದೆ ಸಾವನ್ನಪ್ಪಿದರು ಎಂದು ತಿಳಿದುಬಂದಿದೆ. ಈ ಬಗ್ಗೆ ಮಹೇಶ್‌ ಸೈಬರ್‌ ಕ್ರೈಂನಲ್ಲಿ ಕೇಸ್‌ ದಾಖಲಿಸಿದ್ದಾರೆ.

Share Post