100 ರೂಪಾಯಿಯಿಂದ ಹೂಡಿಕೆ ಆರಂಭಿಸಿ; ಕೊಟ್ಯಧಿಪತಿಗಳಾಗಿ..!
ನವದೆಹಲಿ; ದಶಕದ ಹಿಂದೆ ಹೋದರೆ ಹಣದ ಹೂಡಿಕೆಗೆ ಹೆಚ್ಚಿನ ಆಯ್ಕೆಗಳು ಇರಲಿಲ್ಲ.. ಆರ್‌ಡಿ, ಫಿಕ್ಸೆಡ್ ಡೆಪಾಸಿಟ್ ಸೇರಿ ನಾಲ್ಕೈದು ಪ್ಲಾನ್‌ಗಳಷ್ಟೇ ಸಿಗುತ್ತಿದ್ದರು.. ಆದ್ರೆ ಈಗ ಉಳಿತಾಯಕ್ಕೆ ಹಲವಾರು ದಾರಿಗಳಿವೆ.. ನಮ್ಮ ಜೊತೆಗೆ ಈಗ ಹಣವೂ ದೊಡ್ಡ ಮಟ್ಟದಲ್ಲಿ ದುಡಿಯಲಾರಂಭಿಸಿದೆ.. ನಾವು ಸರಿಯಾದ ಸಮಯದಲ್ಲಿ, ಸರಿಯಾದ ಯೋಜನೆಯಲ್ಲಿ ಹಣ ಹೂಡಿಕೆ ಮಾಡುತ್ತಾ ಹೋದರೆ, ಸಾಮಾನ್ಯ ಜನರೂ ಕೂಡಾ ಕೋಟ್ಯಧೀಶರಾಗುತ್ತಾರೆ.. ಸಣ್ಣ ಮಟ್ಟದಲ್ಲಿ ಉಳಿತಾಯ ಮಾಡಿ, ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಿದರೆ ಸಾಕು.. 100 ರೂಪಾಯಿಯಿಂದ ಹೂಡಿಕೆ ಶುರು ಮಾಡಿದರೂ ಒಂದು ಸರಿಯಾದ ಯೋಜನೆ ಹಾಕಿಕೊಂಡದರೆ ಮುಂದೊಂದು ದಿನ ಕೋಟ್ಯಧಿಪತಿ ಆಗಬಹುದು..
ಇದನ್ನೂ ಓದಿ; ನೀವು ಐಟಿ ರಿಟರ್ನ್ ಸಲ್ಲಿಸಿದ್ದೀರಾ..?; 10 ದಿನದಲ್ಲಿ ರೀಫಂಡ್ ಆಗಿಲ್ಲವಾ..?
ಈಗ ಹೆಚ್ಚು ಜನಪ್ರಿಯವಾಗಿರುವುದು ಸಿಸ್ಟಮೇಟಿಕ್ ಇನ್ವೆಸ್ಟ್‌ಮೆಂಟ್ ಪ್ಲ್ಯಾನ್.. ಹೊಸದಾಗಿ ಕೆಲಸಕ್ಕೆ ಸೇರಿದವರು, ಅವಿವಾಹಿತರು ಸಣ್ಣ ಮಟ್ಟದಲ್ಲಾದರೂ ಉಳಿತಾಯ ಮಾಡೋದಕ್ಕೆ ಅವಕಾಶವಿರುತ್ತದೆ.. ಕೆಲಸಕ್ಕೆ ಸೇರಿದ ಶುರುವಿನಿಂದ ಕನಿಷ್ಠ ನೂರು ರೂಪಾಯಿ ಉಳಿತಾಯ ಮಾಡುತ್ತಾ ಹೋದರೂ ಒಂದು ಹಂತದಲ್ಲು ಕೋಟ್ಯಧಿಪತಿಯಾಗಬಹುದು.. ಸಿಸ್ಟೆಮೇಟಿಕ್ ಇನ್ವೆಸ್ಟ್‌ಮೆಂಟ್ ಪ್ಲ್ಯಾನ್ ಅಂದರೆ ಎಸ್‌ಐಪಿಯಲ್ಲಿ ತಿಂಗಳಿಗೆ ನೂರು, ಐದು ನೂರು ರೂಪಾಯಿಯಿಂದ ಕೂಡಾ ಉಳಿತಾಯ ಮಾಡಬಹುದು.. ಹೀಗೆ ಹೂಡಿಕೆ ಮಾಡುತ್ತಾ, ಹೂಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದರೆ, 20-25 ವರ್ಷದಲ್ಲಿ ಕೋಟಿ ರೂಪಾಯಿ ಗಳಿಸುವ ಅವಕಾಶವಿದೆ..
ಇದನ್ನೂ ಓದಿ; ಆ.17ಕ್ಕೆ ಭೂಮಿಗೆ ಅಪ್ಪಳಿಸುತ್ತಾ ಕ್ಷುದ್ರಗ್ರಹ..?; ತಡೆಯೋ ಪ್ರಯತ್ನ ಯಾಕಿಲ್ಲ..?
ಮ್ಯೂಚ್ಯುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ವರ್ಷಕ್ಕೆ ಕನಿಷ್ಠ ಶೇಕಡಾ 12ರಷ್ಟು ಬಡ್ಡಿ ಸಿಗಲಿದೆ.. ಒಮ್ಮೊಮ್ಮೆ ಶೇಕಡಾ 15ರವರೆಗೂ ಸಿಗಲಿದೆ.. ಹೀಗಾಗಿ ನಾವು ಹೂಡಿಕೆ ಮಾಡಿದ ಹಣ ಬಹುಬೇಗ ಬೆಳೆಯುತ್ತಾ ಹೋಗುತ್ತದೆ.. ಕೊಂಚ ರಿಸ್ಕ್ ಇದ್ದರೂ ತಿಳಿದವರನ್ನು ಕೇಳಿ ಮ್ಯೂಚ್ಯೂಯಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ಅನುಕೂಲ ಅಂತೂ ಇದ್ದೇ ಇದೆ.. ಇದರಲ್ಲಿ ಬಡ್ಡಿಗೆ ಬಡ್ಡಿ ಸಿಗುವುದರಿಂದ ಸಾಕಷ್ಟು ಲಾಭವಾಗಲಿದೆ..