AstrologyEconomyLifestyle

ಈ ಗಿಡ ಹಣದ ಮ್ಯಾಗ್ನೆಟ್‌; ಮನೆಯಲ್ಲಿಟ್ಟರೆ ಹಣದ ಹರಿವು ಹೆಚ್ಚಳ!

ಬೆಂಗಳೂರು; ಮನೆಯ ಒಳಾಂಗಣದ ಅಲಂಕಾರಕ್ಕೆ ಹಲವು ಸಸ್ಯಗಳನ್ನು ಬೆಳೆಸಲಾಗುತ್ತದೆ.. ಇವು ಮನೆಯ ಅಂದಕ್ಕೆ ಅಷ್ಟೇ ಅಲ್ಲ.. ಮನೆಯಲ್ಲಿ ಸಂತೋಷ ತರಿಸುತ್ತವೆ.. ಕೆಲವು ಸಸ್ಯಗಳನ್ನು ಬೆಳೆಸುವುದರಿಂದ ಮನೆಗೆ ಸಂಪತ್ತು, ಹಣ, ಲಾಭಗಳನ್ನು ತಂದುಕೊಡುತ್ತವೆ.. ಮನೆಯಲ್ಲಿ ಕೆಲವರು ಮನಿ ಪ್ಲಾಂಟ್‌ಗಳನ್ನು ಬೆಳೆಸುತ್ತಾರೆ.. ಇದೊಂದೇ ಗಿಡ ಅಲ್ಲ, ಹಲವು ಇಂತಹ ಗಿಡಗಳನ್ನು ಬೆಳೆಸಿದರೆ ಮನೆಗೆ ಲಕ್ಷ್ಮೀ ಆಗಮನವಾಗುತ್ತದೆ ಎಂದು ನಂಬಲಾಗಿದೆ..
ಮನಿ ಪ್ಲಾಂಟ್ ಅಷ್ಟೇ ಅಲ್ಲ, ವಾಸ್ತು ಶಾಸ್ತ್ರದಲ್ಲಿ ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾದ ಮತ್ತೊಂದು ಸಸ್ಯವಿದೆ. ಈ ಗಿಡವನ್ನು ಮನೆಯಲ್ಲಿಟ್ಟರೆ ಸಂಪತ್ತು ಹೆಚ್ಚುತ್ತಾ ಹೋಗುತ್ತದೆ. ಸಾಕ್ಷಾತ್‌ ಲಕ್ಷ್ಮೀ ದೇವಿಯೇ ಅಲ್ಲಿ ನೆಲೆಸುತ್ತಾಳಂತೆ. ಆ ಗಿಡದ ಹೆಸರು ಕ್ರಾಸ್ಸುಲಾ ಜೇಡ್ ಪ್ಲಾಂಟ್ ಎಂದು ಕರೆಯಲಾಗುತ್ತದೆ. ಇದು ನಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
ಈ ಸಸ್ಯ ಮನೆಯಲ್ಲಿದ್ದರೆ ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ. ಈ ಸಸ್ಯವು ಹಣವನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಮನೆಯಲ್ಲಿ ಈ ಗಿಡ ಇಟ್ಟರೆ ಆದಾಯ ಹೆಚ್ಚುತ್ತದೆ. ಹಣಕಾಸಿನ ಸಮಸ್ಯೆಗಳೂ ನಿವಾರಣೆಯಾಗುತ್ತವೆ.
ಈ ಸಸ್ಯ ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದದ್ದು. ಲಕ್ಷ್ಮಿಯ ವಾಸಸ್ಥಾನ ಎಂದೂ ಕೆಲವರು ಕರೆಯುತ್ತಾರೆ.. ಹಾಗಾಗಿ ಈ ಗಿಡ ಯಾರ ಮನೆಯಲ್ಲಿದೆಯೋ ಅವರ ಮೇಲೆ ಲಕ್ಷ್ಮಿಯ ಕೃಪೆ ಸದಾ ಇರುತ್ತದೆ ಎಂದು ನಂಬಲಾಗಿದೆ. ಸಾಲದ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಸಸ್ಯವು ಪರಿಹಾರವನ್ನು ನೀಡುತ್ತದೆ. ಇದನ್ನು ಹಣದ ಮ್ಯಾಗ್ನೆಟ್ ಎಂದೂ ಕರೆಯುತ್ತಾರೆ. ಹಾಗಾಗಿ ಹೆಚ್ಚಿನವರು ಈ ಗಿಡವನ್ನು ಮನೆಯಲ್ಲಿಯೇ ಬೆಳೆಸುತ್ತಾರೆ.
ಈ ಸಸ್ಯವನ್ನು ಯಾವಾಗಲೂ ಮನೆಯ ಪ್ರವೇಶದ್ವಾರದಲ್ಲಿ ಇಡಬೇಕು. ಕ್ರಾಸ್ಸುಲಾ ಸಸ್ಯವನ್ನು ಮನೆಯಲ್ಲಿ ಮಾತ್ರವಲ್ಲದೆ ಕಚೇರಿಯಂತಹ ಇತರ ಸ್ಥಳಗಳಲ್ಲಿಯೂ ಬೆಳೆಯಬಹುದು. ಹೀಗೆ ಮಾಡುವುದರಿಂದ ಐಶ್ವರ್ಯ ಪ್ರಾಪ್ತಿಯಾಗುತ್ತದೆ.

Share Post