BusinessCrime

ಅತ್ತಿಗುಪ್ಪೆಯಲ್ಲಿ ಮೆಟ್ರೋ ಟ್ರೈನಿಗೆ ಸಿಲುಕಿ ಯುವಕ ಸಾವು!

ಬೆಂಗಳೂರು; ನಮ್ಮ ಮೆಟ್ರೋದಲ್ಲಿ ದಿನವೂ ಒಂದಿಲ್ಲೊಂದು ಅವಾಂತರಗಳು ನಡೆಯುತ್ತಲೇ ಇವೆ.. ಇದೀಗ ಯುವಕನೊಬ್ಬ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ; Detox Water: ಡೆಟಾಕ್ಸ್‌ ವಾಟರ್‌ನಿಂದ ದೇಹದಲ್ಲಿನ ಮಲಿನಗಳೆಲ್ಲಾ ದೂರ!

ರೈಲು ಬರುತ್ತಿದ್ದಂತೆ ಅಡ್ಡ ಹಾರಿದ ಯುವಕ;

ರೈಲಿಗಾಗಿ ಕಾಯುತ್ತಿದ್ದ ಯುವಕನೊಬ್ಬ ಮೆಟ್ರೋ ರೈಲು ಬರುತ್ತಿದ್ದಂತೆ ಅಡ್ಡ ಹಾರಿದ್ದಾನೆ.. ಇದರಿಂದಾಗಿ ಮೆಟ್ರೋ ರೈಲಿಗೆ ಸಿಲುಕಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.. ಈ ಬಗ್ಗೆ ನಮ್ಮ ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದ್ರೆ ಆ ಯುವಕ ಯಾರು..? ಯಾಕೆ ಆತ್ಮಹತ್ಯೆ ಮಾಡಿಕೊ೦ಡಿದ್ದಾನೆ ಎಂಬುದರ ಬಗ್ಗೆ ಇನ್ನೂ ಮಾಹಿತಿ ತಿಳಿದುಬಂದಿಲ್ಲ. ಪ್ರಯಾಣಿಕನಂತೆ ಟಿಕೆಟ್‌ ತೆಗೆದುಕೊಂಡು ಒಳಬಂದಿದ್ದ ಯುವಕ ಇದ್ದಕ್ಕಿದ್ದಂತೆ ಮೆಟ್ರೋಗೆ ಅಡ್ಡಲಾಗಿ ಹಾರಿದ್ದಾನೆ. ಅಷ್ಟರಲ್ಲಿ ಮೆಟ್ರೋ ಟ್ರೈನ್‌ ಆತನ ಮೇಲೆ ಹರಿದಿದೆ.

ಇದನ್ನೂ ಓದಿ; ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ!

ಆತ್ಮಹತ್ಯೆ ಹಿನ್ನೆಲೆಯಲ್ಲಿ ಮೆಟ್ರೋ ಓಡಾಟದಲ್ಲಿ ವ್ಯತ್ಯಯ

ಯುವಕ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಹೀಗಾಗಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.. ಇಂದು ಮಧ್ಯಾಹ್ನ 2.10ರ ಸುಮಾರಿಗೆ ಈ ಘಟನೆ ನಡೆದಿದೆ.. ಇದರಿಂದಾಗಿ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.. ಈ ಬಗ್ಗೆ ಟ್ವಟಿರ್‌ ನಲ್ಲಿ ಮೆಟ್ರೋ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಸದ್ಯ ಅತ್ತಿಗುಪ್ಪೆ ನಿಲ್ದಾಣದಲ್ಲಿ ರೈಲು ಓಡಾಟ ಸ್ಥಗಿತವಾಗಿದೆ. ಮಾಗಡಿ ರೋಡ್‌ನಿಂದ ವೈಟ್ ಫೀಲ್ಡ್‌ವರೆಗೆ ಮಾತ್ರ ಮೆಟ್ರೋ ಸಂಚಾರ ಇದ್ದು, ಮಾಗಡಿ ರಸ್ತೆಯಿಂದ ಚಲ್ಲಘಟ್ಟದವರೆಗೆ ಸದ್ಯಕ್ಕೆ ತಾತ್ಕಾಲಿಕವಾಗಿ ಮೆಟ್ರೋ ಸಂಚಾರ ನಿಲ್ಲಿಸಲಾಗಿದೆ.. ಇದರಿಂದಾಗಿ ಈ ಭಾಗದಲ್ಲಿ ಓಡಾಡುವ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಇದನ್ನೂ ಓದಿ; ಜಪಾನ್‌ನಲ್ಲಿದ್ದ ರಾಜಮೌಳಿ ಕುಟುಂಬಕ್ಕೆ ಭೂಕಂಪನದ ಅನುಭನ; ಬೆಚ್ಚಿಬಿದ್ದ ಕುಟುಂಬ!

ಮೆಟ್ರೋ ಬರುತ್ತಿದ್ದುದನ್ನೇ ಗಮನಿಸುತ್ತಿದ್ದ ಯುವಕ ಇದ್ದಕ್ಕಿದ್ದಂತೆ ಹಾರಿದ್ದಾನೆ.. ಅಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳು ಇದ್ದರೂ ಅದನ್ನು ತಡೆಯಲು ಆಗಿಲ್ಲ. ರೈಲಿಗೆ ಸಿಲುಕಿಕೊಂಡಿದ್ದರಿಂದ ಆತ ಸಾವನ್ನಪ್ಪಿದ್ದಾನೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆತ ಯಾರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ; ಕುಮಾರಸ್ವಾಮಿ ಶಸ್ತ್ರಚಿಕಿತ್ಸೆ ಯಶಸ್ವಿ; ವಿಶ್ರಾಂತಿಯ ನಂತರ ಚುನಾವಣಾ ಪ್ರಚಾರ

 

Share Post