ನಿಮ್ಮ ಮನೆ ಹೀಗಿದ್ದರೆ ಲಕ್ಷ್ಮೀ ಖಂಡಿತವಾಗಿಯೂ ನೆಲೆಸುತ್ತಾಳೆ..!
ಕೆಲವು ಶ್ರೀಮಂತರು ಜಂಭ ಕೊಚ್ಚಿಕೊಳ್ಳುತ್ತಿರುತ್ತಾರೆ… ನನ್ನ ಬಳಿ ಸಾಕಷ್ಟು ಹಣವಿದೆ.. ನಾನು ಏನು ಬೇಕಾದರೂ ಮಾಡುತ್ತೇನೆ.. ಯಾರನ್ನು ಬೇಕಾದರೂ ಖರೀದಿ ಮಾಡುತ್ತೇನೆ ಎನ್ನುತ್ತಿರುತ್ತಾರೆ.. ಲಕ್ಷ್ಮೀ ನನಗೆ ಒಲಿದುಬಿಟ್ಟಿದ್ದಾಳೆ.. ಇನ್ನು ನನ್ನನ್ನು ಯಾರೂ ಏನೂ ಮಾಡೋದಕ್ಕೆ ಆಗೋದಿಲ್ಲ ಅಂತ ಬೀಗುವವರೂ ಇದ್ದಾರೆ.. ಆದ್ರೆ ಇಂತಹ ಶ್ರೀಮಂತರು ಲಕ್ಷ್ಮಿ ಕೋಪಕ್ಕೆ ತುತ್ತಾಗಿ ಬಹುಬೇಗ ಭಿಕ್ಷೆ ಬೇಡುವ ಸ್ಥಿತಿಗೂ ಬರಬಹುದು.. ಯಾಕಂದ್ರೆ, ಎಂತಹ ಶ್ರೀಮಂತನೇ ಆದ್ರೂ ಆತನನ್ನು ಬಹುಬೇಗ ಬಡವನನ್ನಾಗಿ ಮಾಡುವ ತಾಕತ್ತು ಲಕ್ಷ್ಮೀ ದೇವಿಗಿದೆ.. ನಿಷ್ಠೆಯಿಂದ ಇರುವ ಬಡವರು ಕೂಡಾ ಬಹುಬೇಗ ಲಕ್ಷ್ಮೀ ಕೃಪೆಯಿಂದ ಶ್ರೀಮಂತರಾಗಬಹುದು.. ಹೀಗಾಗಿ ಶ್ರೀಮಂತರಾದಾಗ ಹಿಗ್ಗಬಾರದು, ಬಡವರಾದಾಗ ಕುಗ್ಗಬಾರದು.. ಪ್ರತಿಯೊಬ್ಬರಿಗೂ ಒಂದು ಕಾಲ ಬಂದೇ ಬರುತ್ತದೆ..
ಅಷ್ಟಕ್ಕೂ ಯಾರಿಗೆ ಲಕ್ಷ್ಮೀ ಒಲಿಯುತ್ತಾಳೆ ಅನ್ನೋದನ್ನು ನೋಡೋಣ ಬನ್ನಿ..
ಇದನ್ನೂ ಓದಿ; ಪ್ರತಿ ತಿಂಗಳೂ 10 ಸಾವಿರ ಹೂಡಿಕೆ ಮಾಡಿ 12 ಕೋಟಿ ರೂ. ಗಳಿಸಿ!
ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ;
ಯಾರ ಮನೆ ಸ್ವಚ್ಛವಾಗಿರುತ್ತದೆಯೋ ಆ ಮನೆಗೆ ಲಕ್ಷ್ಮೀ ಕಾಲಿಡುತ್ತಾಳೆ ಎಂಬ ನಂಬಿಕೆ ಇದೆ.. ಮನೆಯಲ್ಲಿ ಗಲೀಜು ಹೆಚ್ಚಿದ್ದರೆ ಆ ಮನೆಗೆ ಎಂದಿಗೂ ಲಕ್ಷ್ಮೀ ಕಾಲಿಡುವುದಿಲ್ಲ.. ಹೀಗಾಗಿ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಬೇಕು.. ದಿನವೂ ಮನೆಯನ್ನು ಸ್ವಚ್ಛ ಮಾಡಬೇಕು.. ದಿನವೂ ಮನೆಯವರು ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು.. ಮನೆಯಲ್ಲಿ ಕಸ ತ್ಯಾಜ್ಯಗಳನ್ನು ದಿನಗಟ್ಟಲೆ ಸಂಗ್ರಹಿಸದೇ ದಿನವೂ ಅದನ್ನು ವಿಲೇವಾರಿ ಮಾಡಬೇಕು.. ಆಗ ಮಾತ್ರ ಲಕ್ಷ್ಮೀ ನಮಗೆ ಒಲಿಯುತ್ತಾಳೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ.. ಶಾಸ್ತ್ರಗಳು ಕೂಡಾ ಇದನ್ನೇ ಹೇಳುತ್ತವೆ..
ನೀರಿನಲ್ಲಿ ಸಂಗ್ರಹದ ಜಾಗ ಈ ಭಾಗದಲ್ಲೇ ಇರಲಿ;
ಮನೆಯಲ್ಲಿ ನೀರು ಸಂಗ್ರಹ ಟ್ಯಾಂಕ್ ವಾಸ್ತು ಪ್ರಕಾರವೇ ಇರಬೇಕು.. ಎಲ್ಲೆಂದರಲ್ಲಿ ನೀರಿನ ಟ್ಯಾಂಕ್ ಇದ್ದರೆ ನಿಮಗೆ ಎಲ್ಲಾ ವ್ಯವಹಾರದಲ್ಲೂ ಲಾಸ್ ಆಗುತ್ತದೆ.. ನಿಮ್ಮ ಮನೆಯ ದಕ್ಷಿಣ, ನೈಋತ್ಯ ಮತ್ತು ಪಶ್ಚಿಮದಲ್ಲಿ ಯಾವುದೇ ಹೊಂಡ, ಬೋರ್‌ವೆಲ್, ಟ್ಯಾಂಕ್, ಶೌಚಾಲಯ, ನೀರಿನ ಟ್ಯಾಂಕ್ ಇತ್ಯಾದಿಗಳು ಯಾವುದೇ ಕಾರಣಕ್ಕೂ ಇರಬಾರದು.. ಎಲ್ಲೆಲ್ಲಿ ವಾಸ್ತು ದೋಷವಿದೆಯೋ ಅಲ್ಲಿ ಸ್ವಸ್ತಿಕ ಚಿಹ್ನೆಯನ್ನು ಅಂಟಿಸಿದರೆ ನಿಮಗೆ ಒಳ್ಳೆಯದಾಗುತ್ತದೆ.. ಬಾತ್ ರೂಮ್ ನಲ್ಲಿ ನೀರು ತೊಟ್ಟಿಕ್ಕದಂತೆ ನೋಡಿಕೊಳ್ಳುವುದು ಒಳ್ಳೆಯದು..
ಇದನ್ನೂ ಓದಿ; ಬಂದೂಕಿನಿಂದ ಪತ್ನಿಯನ್ನು ಗುಂಡಿಕ್ಕಿ ಕೊಂದ ವಿರಾಜಪೇಟೆಯ ವ್ಯಕ್ತಿ!
ಮನೆಯಲ್ಲಿ ಪೊರಕೆ ಹೀಗೆ ಇಡಬೇಡಿ;
ಬೆಳಗಾಗುತ್ತಲೇ ಮನೆಯನ್ನು ಸ್ವಚ್ಛ ಮಾಡಬೇಕು.. ಪೊರಕೆಯಿಂದ ಕಸ ಗುಡಸಬೇಕು.. ಆ ಕಸವನ್ನು ಮನೆಯ ಹೊರಗೆಯೇ ಚೆಲ್ಲಾಡಬಾರದು.. ಇನ್ನು ಸಂಜೆ ಸೂರ್ಯಾಸ್ತಕ್ಕೆ ಮೊದಲೇ ಮನೆಯಲ್ಲಿ ಗುಡಸಬೇಕು.. ನಂತರ ಪೊರಕೆಯನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು.. ಅದನ್ನು ಯಾವ ಕಾರಣಕ್ಕೂ ನಿಲ್ಲಿಸಿ ಇಡಬಾರದು.. ಪೊರಕೆಯ ಮೇಲೆ ಎಂದಿಗೂ ನೀವು ಕಾಲುಗಳನ್ನಿಟ್ಟು ಕೂರಬಾರದು, ನಡೆಯಬಾರದು.
ಎಲ್ಲಾ ಸ್ತ್ರೀಯರನ್ನೂ ಗೌರವಿಸಿ;
ಎಲ್ಲಿ ಸ್ತ್ರೀಯರಿಗೆ ಗೌರವ ಸಿಗುತ್ತದೋ ಆ ಸ್ಥಳದಲ್ಲಿ ಲಕ್ಷ್ಮೀ ಇರುತ್ತಾಳೆ ಎಂಬ ನಂಬಿಕೆ ಹಲವಾರು ಮಂದಿಯಲ್ಲಿದೆ.. ಹೀಗಾಗಿ ಹೆಂಡತಿಯಿಂದ ಹಿಡಿದು ಎಲ್ಲಾ ಮಹಿಳೆಯರನ್ನೂ ಸಮಾನವಾಗಿ ಗೌರವಿಸಬೇಕು.. ಮಹಿಳೆಯರನ್ನು ನಾವು ಎಷ್ಟು ಗೌರವಿಸುತ್ತೇವೆಯೋ ಅಷ್ಟು ನಮಗೆ ಲಕ್ಷ್ಮೀ ಅನುಗ್ರಹ ಸಿಗಲಿದೆ.. ಇನ್ನು ಹಸುಗಳು, ನಾಯಿಗಳು, ಭಿಕ್ಷುಕರಿಗೆ ಆಹಾರ ನೀಡುವುದರಿಂದಲೂ ನಮಗೆ ಲಕ್ಷ್ಮೀ ಒಲಿಯುತ್ತಾಳೆ..
ಇದನ್ನೂ ಓದಿ; ಗಂಡನ ಜೊತೆ ಖುಷಿಯಾಗಿ ಹನಿಮೂನ್ ಮುಗಿಸಿದಳು!; ಎರಡೇ ತಿಂಗಳಿಗೆ ಪ್ರಿಯಕರ ಬಳಿಗೆ ಹೋದಳು!