ಬಿಬಿಎಂಪಿ ಖಜಾನೆ ಭರ್ತಿ ಮಾಡಲು ಮತ್ತೆ ಜಾಹೀರಾತು ಫಲಕಗಳ ಮೊರೆ
ಬೆಂಗಳೂರು; ಬೆಂಗಳೂರನ್ನ ಆಳಿದ್ದ ಜಾಹೀರಾತು ಮಾಫಿಯಾಗೆ ಬಿಬಿಎಂಪಿ ಮತ್ತೆ ಮಣೆ ಹಾಕಲಿದೆ. ಬಿಬಿಎಂಪಿ ಖಜಾನೆ ಭರ್ತಿ ಮಾಡಲು ಮತ್ತೆ ಜಾಹೀರಾತು ಮೊರೆ.ಪಾಲಿಕೆ ಜಾಹೀರಾತು ಬೈಲಾಗೆ ತಿದ್ದುಪಡಿ ತರಲು ಮುಂದಾಗಿದ್ದು ಮುಂದಿನ ಬಜೆಟ್ ನಲ್ಲಿ ಹೊಸ ಜಾಹೀರಾತು ನಿಯಮ ಜಾರಿಗೆ ಬಿಬಿಎಂಪಿ ಚಿಂತನೆ ಮಾಡಿದೆ.ಈಗಾಗಲೇ ಸರ್ಕಾರಕ್ಕೆ ಈಬಗ್ಗೆ ವರದಿಯನ್ನ ಪಾಲಿಕೆ ಸಲ್ಲಿಸಿದೆ ಹಾಗೂ ಶೀಘ್ರದಲ್ಲಿ ಹೊಸ ರೂಪದಲ್ಲಿ ಜಾಹೀರಾತು ಬೈಲಾ ಜಾರಿ ತರಲು ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ ಕೋರ್ಟ್
ಬೆಂಗಳೂರಲ್ಲಿ ಫ್ಲೆಕ್ಸ್, ಬ್ಯಾನರ್ ಗೆ ನಿಷೇಧ ಹೇರಿತ್ತು.ಹೈಕೋರ್ಟ್ ನಿಷೇಧ ಹೇರಿದ್ರು ಹಲವೆಡೆ ಅನಧಿಕೃತ ಜಾಹೀರಾತು ರಾರಾಜಿಸುತ್ತಿತ್ತು.ಫ್ಲೆಕ್ಸ್ ಬ್ಯಾನರ್ ಹಾಕಿ ನಗರದಲ್ಲಿ ಹೈಕೋರ್ಟ್ ಆದೇಶ ಉಲ್ಲಂಘನೆ ಯಾಗುತಿದ್ದ ಹಿನ್ನಲೆಯಲ್ಲಿ.ಪಾಲಿಕ ಫ್ಲೆಕ್ಸ್, ಬ್ಯಾನರ್ ತೆರವಿಗಾಗಿ ಹಣ ವ್ಯಯಿಸುತ್ತಿತ್ತು.ಈಗ ಎಲ್ಲಾ ಸಮಸ್ಯೆ ನಿವಾರಣೆಗೆ ಹೊಸ ಜಾಹೀರಾತು ನೀತಿಗೆ ಮುಂದಾಗಿದೆ.ಚುನಾವಣೆ ಒಳಗೆ ಜಾಹೀರಾತು ನೀತಿಗೆ ಶಾಸಕರಿಂದಲೂ ಒತ್ತಡವಿದೆ ಹೀಗಾಗಿ ಹೊಸ ಜಾಹೀರಾತು ನೀತಿ ರೂಪಿಸಿ ಸರ್ಕಾರದ ಅನುಮತಿಗೆ ಪಾಲಿಕೆ ಕಾಯುತ್ತಿದೆ.
ಹೊಸ ಜಾಹೀರಾತು ನೀತಿಯ ಮಾನದಂಡಗಳು
– ನಗರದಲ್ಲಿ ಯಾವ ಯಾವ ಪ್ರದೇಶದಲ್ಲಿ ಅವಕಾಶ ನೀಡಬೇಕು ?
– ಎಷ್ಟು ದರ ನಿಗದಿ ಮಾಡಬೇಕು. ?
– ಸದ್ಯ ಇರೋ ಪಿಪಿಪಿ ಮಾಡೆಲ್ಗೆ ಯಾವ ನೀತಿ ಇರಬೇಕು ?
– ಹೋಲ್ಡಿಂಗ್ ಗಳಿಗೆ ಪ್ರತ್ಯೋಕ ನಿಯಮ ಜಾರಿ
– ಬಿಬಿಎಂಪಿಯಿಂದಲೇ ಜಾಹೀರಾತು ಸ್ಥಳ ನಿಗದಿ.
– ಪ್ರತಿ ಜಾಹೀರಾತು ಹೋರ್ಡಿಂಗ್‌ಗೂ ಪ್ರತ್ಯೇಕ ಆರ್‌ಎಫ್‌ಐಡಿ ಸಂಖ್ಯೆ ನಿಗದಿ
– ನಿಗದಿತ ಹೋರ್ಡಿಂಗ್ ಗೆ ಜಿಪಿಎಸ್ ಅಳವಡಿಕೆಗೆ ತೀರ್ಮಾನ
– ನಿರ್ದಿಷ್ಟ ಜಾಹೀರಾತು ಫಲಕಕ್ಕೆ ಮಾತ್ರ ಅನುಮತಿಗೆ ತೀರ್ಮಾನ
– ಹರಾಜಿನ ಮೂಲಕ ಜಾಹೀರಾತು ಪ್ರದರ್ಶಕರಿಗೆ ಅನುಮತಿ.
ಜಾಹೀರಾತು ಬಿಬಿಎಂಪಿಗೆ ಭರಪೂರ ಆದಾಯ ತರುವ ಮೂಲ.ಆದ್ರೆ ಮಾಫಿಯಾದಿಂದಾಗಿ ಜಾಹೀರಾತಿನಿಂದ ಪಾಲಿಕೆಗೆ ನಷ್ಟ ಉಂಟಾಗುತ್ತಿತ್ತು.ಈಹಿಂದೆ ಜಾಹೀರಾತಿನಿಂದ 40 ರಿಂದ 50 ಕೋಟಿ ವಾರ್ಷಿಕ ಆದಾಯ ಹೊಂದಿದ್ದ ಪಾಲಿಕೆ ಸದ್ಯ ಹೊಸ ನಿಯಮ ಜಾರಿಗೆ ತಂದು 300 ಕೋಟಿ ಆದಾಯದ ನಿರೀಕ್ಷೆಯಲ್ಲಿದೆ.