Economy

BUDGET LIVE UPDATES: ಬಜೆಟ್‌ ಅಧಿವೇಶನ; ಬಜೆಟ್‌ ಮಂಡನೆ ಮಾಡುತ್ತಿರುವ ನಿರ್ಮಲಾ ಸೀತಾರಾಮನ್‌

ನವದೆಹಲಿ: ಇಡೀ ದೇಶವೇ ಕುತೂಹಲದಿಂದ ನಿರೀಕ್ಷಿಸುತ್ತಿರುವ ಕೇಂದ್ರ ಬಜೆಟ್‌ ಮಂಡನೆ ಆರಂಭವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. 2022-23ನೇ ಸಾಳಿನ ಬಜೆಟ್‌ ಮುಖ್ಯಾಂಶಗಳು ಇಲ್ಲಿವೆ.

  1. ಕೊರೊನಾದಿಂದ ಸಂಕಷ್ಟ ಅನುಭವಿಸಿದವರಿಗೆ ನನ್ನ ಅನುಕಂಪವಿದೆ
  2. ಕೊರೊನಾದಿಂದಾಗಿ ದೇಶದ ಆರ್ಥಿಕತೆ ಹಾಗೂ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ
  3. 2014ರಿಂದ ಜನರ ಕಲ್ಯಾಣವೇ ನಮ್ಮ ಸರ್ಕಾರದ ಧ್ಯೇಯವಾಗಿದೆ
  4. 2022ರಲ್ಲಿ ದೇಶದ ಆರ್ಥಿಕತೆ ಶೇ.9.2ರಷ್ಟು ಚೇತರಿಗೆ ಗುರಿ
  5. ಡಿಜಿಟಲ್‌ ಆರ್ಥಿಕತೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತದೆ
  6. ಮುಂದಿನ 25 ವರ್ಷಗಳಿಗೆ ಸರ್ಕಾರದ ನೀಲನಕ್ಷೆ ರೆಡಿ ಮಾಡಿದ್ದೇವೆ
  7. ಬಡವರಿಗೆ ವಸತಿ ಸೌಲಭ್ಯ ಹಾಗೂ ಬಡವರ ಸರ್ವತೋಮುಖ ಅಭಿವೃದ್ಧಿಗೆ ಕ್ರಮ
  8. ಈ ವರ್ಷ 60 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಿದ್ದೇವೆ
  9. ಈ ಬಾರಿಯ ಬಜೆಟ್‌ನಲ್ಲಿ ಆತ್ಮನಿರ್ಬರತೆಗೆ ಒತ್ತು ನೀಡಲಾಗಿದೆ
  10. ಶೀಘ್ರದಲ್ಲೇ ಎಲ್‌ಐಸಿಯಿಂದ ಐಪಿಒ ಬಿಡುಗಡೆ ಮಾಡಲಾಗುತ್ತದೆ
  11. ಕಲ್ಲಿದ್ದಲು ಕ್ಷೇತ್ರದಲ್ಲಿ ನೂರು ವರ್ಷಗಳ ಅಭಿವೃದ್ಧ ಬಗ್ಗೆ ಗಮನ
  12. ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆಗೆ ಹೆಚ್ಚು ಒತ್ತು
  13. ಏರ್‌ ಇಂಡಿಯಾ ಮೇಲಿನ ಬಂಡವಾಳ ಹಿಂತೆಗೆತ ಪೂರ್ಣವಾಗಿದೆ
  14. ಪಿಎಂ ಗತಿ ಶಕ್ತಿ ಯೋಜನೆಗೆ ಏಳು ಎಂಜಿನ್‌ಗಳು
  15. ಎಲ್ಲರನ್ನೂ ವರ್ಗದವರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ಒತ್ತು ನೀಡಲಾಗಿದೆ
  16. ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ
  17. 25 ಸಾವಿರ ಕಿಲೋ ಮೀಟರ್‌ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುತ್ತದೆ
  18. ಉತ್ಪಾದನಾ ವಲಯಕ್ಕೆ ವೇಗ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ
  19. ರೈತರಿಗೆ ಒನ್‌ ಸ್ಟೇಷನ್‌, ಒನ್‌ ಪ್ರಾಡಕ್ಟ್‌ ಯೋಜನೆ
  20. 400 ಒಂದೇ ಮಾತರಂ ಹೊಸ ರೈಲುಗಳು
  21. ಮುಂದಿನ ಮೂರು ವರ್ಷಗಳಲ್ಲಿ 400 ಹೊಸ ರೈಲುಗಳು ಹಳಿಗೆ ಇಳಿಯಲಿವೆ
  22. ಮೂರು ವರ್ಷದಲ್ಲಿ ೧೦೦ ಕಾರ್ಗೊ ಟರ್ಮಿನಲ್‌ ಸ್ಥಾಪನೆ
  23. ಪರ್ವತ ಶ್ರೇಣಿಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ರಸ್ತೆಗಳ ಅಭಿವೃದ್ಧಿ
  24. ಸಾರಿಗೆ ಮೂಲ ಸೌಕರ್ಯಕ್ಕೆ 20 ಸಾವಿರ ಕೋಟಿ ರೂಪಾಯಿ
  25. ಹೊಸದಾಗಿ ರೋಪ್‌ ವೇಗಳ ನಿರ್ಮಾಣಕ್ಕೆ ಕ್ರಮ
  26. ಸದ್ಯದಲ್ಲೇ ಎಲ್‌ಐಸಿಯಿಂದ ಐಪಿಒ ಬಿಡುಗಡೆ ಮಾಡಲಾಗುತ್ತದೆ
  27. 2023 ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಣೆ
  28. ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಹೆಚ್ಚು ಪ್ರೋತ್ಸಾಹ
  29. ನದಿಗಳ ಜೋಡಣೆಗೆ ಬಜೆಟ್‌ನಲ್ಲಿ ಗ್ರೀನ್‌ ಸಿಗ್ನಲ್‌
  30. ಕಾವೇರಿ, ಪೆನ್ನಾರ್‌ ಹಾಗೂ ಕೃಷ್ಣಾ -ಪೆನ್ನಾರ್‌  ನದಿ ಜೋಡಣೆಗೆ ಸಮ್ಮತಿ
  31. ಗೋದಾವರಿ-ಕೃಷ್ಣಾ ನದಿ ಜೋಡಣೆಗೂ ಅನುಮತಿ
  32. ಹೊಸ ವಿಧಾನದಲ್ಲಿ ಮೆಟ್ರೋ ರೈಲಿಗೆ ಹಣ ಹೂಡಿಕೆ
  33.  ಕನಿಷ್ಟ ಬೆಂಬಲ ಬೆಲೊಎ ಘೋಷಣೆಗೆ 2.82 ಲಕ್ಷ ಕೋಟಿ ರೂ. ಮೀಸಲು
  34. ಖಾದ್ಯ ತೈಲ ಆಮದು ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರೋತ್ಸಾಹ
  35. ಭೂ ದಾಖಲೆಗಳ ಡಿಜಟಲೀಕರಣಕ್ಕೆ ಹೆಚ್ಚು ಒತ್ತು
  36. ನದಿ ಜೋಡಣೆಗೆ ರಾಜ್ಯ ಸರ್ಕಾರಗಳ ಅನುಮತಿ ಬೇಕಾಗುತ್ತದೆ
  37. ನಾಲ್ಕು ಕಡೆ  ಮಲ್ಟಿ ಮಾಡೆಲ್‌ ಲಾಜಿಸ್ಟಕ್‌ ಪಾರ್ಕ್‌ ನಿರ್ಮಾಣ
  38. ಒನ್‌ ಕ್ಲಾಸ್‌ ಒನ್‌ ಟಿವಿಗೆ ಚಾಲನೆ ನೀಡಲಾಗುತ್ತದೆ
  39. ಕೊರೊನಾದಿಂದಾಗಿ ಶಾಲೆಗಳು ಬಂದ್‌ ಆಗಿವೆ. ಹೀಗಾಗಿ ವಿದ್ಯಾರ್ಥಿಗಳಿಗೆ ಚಾಲನ್‌ ಸ್ಥಾಪನೆ
  40. ವಿಶ್ವ ಮಟ್ಟದ ಡಿಜಿಟಲ್‌ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುತ್ತದೆ
  41. 200 ಟಿವಿ ಚಾನಲ್‌ಗಳ ಮೂಲಕ ಶೈಕ್ಷಣಿಕ ಜಾರಿ ನಿರ್ಧಾರ
  42. ಹಳ್ಳಿ ಶಾಲೆಗಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಚಾನಲ್‌ ಸ್ಥಾಪನೆ
  43. ಎರಡು ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ
  44. ಅಂಗನವಾಡಿಗಳಿಗೆ ವಿಡಿಯೋ ಹಾಗೂ ಆಡಿಯೋ ವ್ಯವಸ್ಥೆ ಮಾಡಲಾಗುತ್ತದೆ
  45. ಹರ್‌ ಘರ್‌, ನಲ್‌ ಜಲ್‌ ಯೋಜನೆ ಜಾರಿ ಮಾಡಲಾಗುತ್ತದೆ
  46. 3.8 ಕೋಟಿ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಗುರಿ ಹೊಂದಲಾಗಿದೆ
  47. ಹರ್‌ ಘರ್‌, ನಲ್‌ ಜಲ್‌ ಯೋಜನೆಗಾಗಿ 60 ಸಾವಿರ ಕೋಟಿ ರೂ. ಮೀಸಲು
  48. ಪ್ರಧಾನಿ ಆವಾಸ್‌ ಯೋಜನೆಯಡಿಯಲ್ಲಿ 60 ಲಕ್ಷ ಮನೆಗಳ ನಿರ್ಮಾಣ ಗುರಿ
  49. ಮನೆಗಳ ನಿರ್ಮಾಣಕ್ಕೆ 48 ಸಾವಿರ ಕೋಟಿ ರೂಪಾಯಿ ಅನುದಾನ
  50. ಹೈಡ್ರೋ ಸೋಲಾರ್‌ ಪ್ರಾಜೆಕ್ಟ್‌ಗೆ 1400 ಕೋಟಿ ರೂಪಾಯಿ
  51. 112 ಆಕಾಂಕ್ಷೆಯ ಜಿಲ್ಲೆಗಳಲ್ಲಿ ಶೇ.95ರಷ್ಟು ಪ್ರಗತಿಯಾಗಿದೆ
  52. 75 ಜಿಲ್ಲೆಗಳಲ್ಲಿ 75 ಡಿಜಿಟಲ್‌ ಬ್ಯಾಂಕ್‌ ಸ್ಥಾಪನೆ ಮಾಡಲಾಗುತ್ತದೆ
  53. ಒಂದೂವರೆ ಲಕ್ಷ ಅಂಚೆ ಕಚೇರಿಗಳಿಗೆ ಬ್ಯಾಂಕ್‌ ಸ್ವರೂಪ ನೀಡಲಾಗುತ್ತದೆ
  54. 2023ರೊಳಗೆ 18 ಲಕ್ಷ ಮನೆಗಳ ನಿರ್ಮಾಣ ಗುರಿ ಹೊಂದಲಾಗಿದೆ
  55. 1483 ಅನವಶ್ಯಕ ಕೇಂದ್ರ ಕಾನೂನುಗಳನ್ನು ರದ್ದು ಮಾಡಲಾಗಿದೆ
  56. ಎಲ್ಲಾ ಪೋಸ್ಟ್‌ ಆಫೀಸ್‌ಗಳಲ್ಲೂ ಬ್ಯಾಂಕಿಂಗ್‌ ವ್ಯವಸ್ಥೆಗೆ ಅನುಕೂಲ
  57. ಈಸ್‌ ಆಫ್‌ ಡೂಯಿಂಗ್‌ ಬ್ಯುಸಿನೆಸ್‌ಗೂ ಹೆಚ್ಚಿನ ಉತ್ತೇಜನ
  58. ಗಡಿ ಪ್ರದೇಶಗಳ ಅಭಿವೃದ್ಧಿ ಹಾಗೂ ಗ್ರಾಮೀಣ ಅಭಿವೃದ್ಧಿಗೆ ವಿಶೇಷ ಆರ್ಥಿಕ ನೆರವು
  59. ಗ್ರಾಮಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಕೇಂದ್ರದಿಂದ ವಿಶೇಷ ಪ್ಯಾಕೇಜ್‌
  60. ಚಿಪ್‌ ಒಳಗೊಂಡ ಇ-ಪಾಸ್‌ ಪೋರ್ಟ್‌ ವ್ಯವಸ್ಥೆಯನ್ನು 2023ರಲ್ಲಿ ಜಾರಿಗೆ ತರಲಾಗುತ್ತದೆ
  61. ಹೊಸ ತಂತ್ರಜ್ಞಾನವುಳ್ಳ ಇ-ಪಾಸ್‌ಪೋರ್ಟ್‌ ವಿತರಣೆ ಮಾಡಲಾಗುತ್ತದೆ
  62. ಉದ್ಯಮ ಕ್ಷೇತ್ರದಲ್ಲಿ ಸರಳೀಕರಣಕ್ಕೆ ಏಕ ಗವಾಕ್ಷಿ ಯೋಜನೆ ಜಾರಿ ಮಾಡಲಾಗುತ್ತದೆ
  63. ಎಲೆಕ್ಟ್ರಿಕ್‌ ವಾಹನ ಬ್ಯಾಟರಿ ಬದಲಾವಣೆಗೆ ವಿಶೇಷ ವ್ಯವಸ್ಥೆ, ಇದಕ್ಕಾಗಿ ಕೇಂದ್ರ ಸ್ಥಾಪನೆ
  64. ಗೂಡ್ಸ್ ವಾಹನಗಳಲ್ಲೂ ಎಲೆಕ್ಟ್ರಿಲ್‌ ವ್ಯವಸ್ಥೆ ಬಳಕೆಗೆ ಉತ್ತೇಜನ
  65. ಸಣ್ಣ ಸಣ್ಣ ಪಟ್ಟಣಗಳ ಅಭಿವೃದ್ಧಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ
  66. ಒನ್‌ ನೇಷನ್‌ ಒನ್‌ ರಿಜಿಸ್ಟ್ರೇಷನ್‌ ವ್ಯವಸ್ಥೆ ಮಾಡಲಾಗುತ್ತದೆ
  67. ಆಸ್ತಿ ನೋಂದಣಿಗೆ ಒಂದು ದೇಶ, ಒಂದು ನೋಂದಣಿ ವ್ಯವಸ್ಥೆ ಜಾರಿ
  68. ದೇಶಾದ್ಯಂತ ಆಸ್ತಿ ನೋಂದಣಿ ಸಂಪೂರ್ಣ ಡಿಜಿಟಲೀಕರಣ ಮಾಡಲಾಗುತ್ತದೆ
  69. ಶೂನ್ಯ ಬಂಡವಾಳ ಕೃಷಿಯ ಉತ್ತೇಜನಕ್ಕೆ ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ನೆರವು
  70. ಎಂಟು ಭಾಷೆಗಳಲ್ಲಿ ಆಸ್ತಿಗಳ ನೋಂದಣಿಗೆ ಏಕರೂಪ ವ್ಯವಸ್ಥೆ ಮಾಡಲಾಗುತ್ತದೆ
  71. ನಗರಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗುತ್ತದೆ
  72. ದೂರ ಸಂಪರ್ಕ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ
  73. 5G ತರಂಗಾಂತರ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ
  74. 2022ರಲ್ಲೇ 5G ತರಂಗಾಂತರ ಸೇವೆ ಲಭ್ಯವಾಗಲಿದೆ
  75. ದೇಶದಲ್ಲಿ ಪ್ರತಿ ಹಳ್ಳಿಗೂ ಆಪ್ಟಿಕಲ್‌ ಫೈಬರ್‌ ಕೇಬಲ್‌ ಅಳವಡಿಕೆ ಮಾಡಲಾಗುತ್ತದೆ
  76. ವಿಶೇಷ ಕೈಗಾರಿಕಾ ವಲಯಗಳ ಸ್ಥಾಪನೆಗೆ ರಾಜ್ಯ ಸರ್ಕಾರಗಳ ಸಹಭಾಗಿತ್ವ ಪಡೆಯಲಾಗುತ್ತದೆ
  77. 2025ರೊಳಗೆ ಎಲ್ಲಾ ಹಳ್ಳಿಗಳಿಗೂ ಆಪ್ಟಿಕಲ್‌ ಫೈಬರ್‌ ಕೇಬಲ್‌ ಅಳವಡಿಸಲಾಗುತ್ತದೆ
  78. ರಕ್ಷಣಾ ಇಲಾಖೆಯಲ್ಲಿ ಶೇ.68ರಷ್ಟನ್ನು ಸ್ಥಳೀಯವಾಗಿ ಖರೀದಿಗೆ ಒತ್ತು
  79. ಡಿಆರ್‌ಡಿಒ ಜೊತೆ ಖಾಸಗಿ ಕಂಪನಿಗಳ ಸಹಭಾಗಿತ್ವಕ್ಕೆ ಅನುಮತಿ
  80. ರಕ್ಷಣಾ ವಲಯದ ಯೋಜನೆಗೆ ಶೇ.೨೫ರಷ್ಟು ಅನುದಾನ ಕೇಂದ್ರದಿಂದ ನೀಡಿಕೆ
  81. ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ 19,500 ಕೋಟಿ ರೂಪಾಯಿ ಮೀಸಲು
  82. 10 ವಲಯಗಳಲ್ಲಿ ಗ್ರೀನ್‌ ಎನರ್ಜಿ ಯೋಜನೆ ಜಾರಿ ಮಾಡಲಾಗುತ್ತದೆ
  83. 2030ರೊಳಗೆ 280 ಗಿಗಾವ್ಯಾಟ್‌ ಸೋಲಾರ್‌ ವಿದ್ಯುತ್‌ ಉತ್ಪಾದನೆ ಗುರಿ
  84. ಎಸ್‌ಸಿ.ಎಸ್‌ಟಿ ರೈತರಿಗೆ ಆರ್ಥಿಕ ನೆರವು ನೀಡಲು ಯೋಜನೆ
  85. ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಎಸ್‌ಸಿ, ಎಸ್‌ಟಿ ರೈತರಿಗೆ ಉತ್ತೇಜನ
  86. ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮೂಲಕ ದೇಶದ ಆರ್ಥಿಕ ಪ್ರಗತಿಗೆ ಒತ್ತು
  87. ಅರಣ್ಯ ಕೃಷಿ ಮಾಡುವವರಿಗೆ ಹೆಚ್ಚಿನ ಆದ್ಯತೆ, ಅಂತಹವರಿಗೆ ಆರ್ಥಿಕ ನೆರವು ನೀಡಲಾಗುತ್ತದೆ
  88. ಇಂಧನ ಕ್ಷೇತ್ರದಲ್ಲಿ ಖಾಸಗಿಯವರ ಹೂಡಿಕೆಗೆ ಅವಕಾಶ ನೀಡಲಾಗಿದೆ
  89. 7.5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ನಿರ್ಧಾರ
  90. ಶೇ.35.4ರಷ್ಟು ಬಂಡವಾಳ ವೆಚ್ಚ ಹೆಚ್ಚಳವಾಗಿದೆ
  91. ಮೂಲ ಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲಾಗುತ್ತದೆ
  92. ಬಂಡವಾಳ ಹೂಡಿಕೆಗೆ ಸಾವರಿನ್‌ ಗ್ರೀನ್‌ ಬಾಂಡ್‌ಗಳ ಪರಿಚಯ
  93. 2023ರ ವೇಳೆಗೆ 10.9 ಲಕ್ಷ ಕೋಟಿ ರೂಪಾಯಿ ಬಂಡವಾಳ ವೆಚ್ಚ ಮಾಡಲಾಗುತ್ತದೆ
  94. ಆರ್‌ಬಿಐನಿಂದಲೇ ಡಿಜಿಟಲ್‌ ಕರೆನ್ಸಿ ಆರಂಭ ಮಾಡಲಾಗುತ್ತದೆ
  95. ಬ್ಲ್ಯಾಕ್‌ ಚೈನ್‌ ಟೆಕ್ನಾಲಜಿ ಮೂಲಕ ಡಿಜಿಟಲ್‌ ಕರೆನ್ಸಿ ಪರಿಚಯ
  96. ಇದೇ ವರ್ಷದಲ್ಲಿ ಆರ್‌ಬಿಐ ಡಿಜಿಟಲ್‌ ಕರೆನ್ಸಿ ಪರಿಚಯಿಸುತ್ತದೆ
  97. ಬಂಡವಾಳ ಹೂಡಲು ರಾಜ್ಯಗಳಿಗೆ 1 ಲಕ್ಷ ಕೋಟಿ ರೂಪಾಯಿ ಅನುದಾನ ನೀಡಲಾಗುತ್ತದೆ
  98. ರಾಜ್ಯ ಸರ್ಕಾರಗಳಿಗೆ 50 ವರ್ಷ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ
  99. ಈ ಬಾರಿಯ ಬಜೆಟ್‌ ಗಾತ್ರ 39.54 ಲಕ್ಷ ಕೋಟಿ ರೂಪಾಯಿ
  100. ರಾಜ್ಯಗಳ ವಿತ್ತೀಯ ಕೊರತೆ ಶೇ.4ರಷ್ಟಿರಲು ಅವಕಾಶ ನೀಡಲಾಗಿದೆ
  101. ತೆರಿಗೆ ಪಾವತಿ ರಿಟರ್ನ್ಸ್‌ ಸಲ್ಲಿಕೆಗೆ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತದೆ
  102. ತೆರಿಗೆ ಪಾವತಿಯಲ್ಲಾದ ತಪ್ಪುಗಳನ್ನು ಸರಿಪಡಿಸಲು ಎರಡು ವರ್ಷಗಳ ಅವಕಾಶ ನೀಡಲಾಗಿದೆ
  103. ಸಹಕಾರಿ ಸಂಘಗಳ ಮೇಲಿನ ಸರ್‌ ಚಾರ್ಜ್‌ ಶೇ.12ರಿಂದ ಶೇ.7ಕ್ಕೆ ಇಳಿಕೆ ಮಾಡಲಾಗಿದೆ
  104. 10 ಕೋಟಿ ರೂಪಾಯಿ ಒಳಗಿನ ಆದಾಯದ ಸಹಕಾರಿ ಸಂಘಗಳ ಸರ್‌ ಚಾರ್ಜ್‌ ಇಳಿಕೆ
  105. ವಿಶೇಷ ಚೇತನರು ವಿಮೆ ಹಣ ಪಡೆಯುವುದಕ್ಕೆ ಅವಕಾಶ ನೀಡಲಾಗಿದೆ
  106. ಸ್ಟಾರ್ಟಪ್‌ಗಳಿಗೆ ಇನ್ನೂ ಒಂದು ವರ್ಷ ತೆರಿಗೆ ವಿನಾಯಿತಿ ನೀಡಲಾಗಿದೆ
  107. ಅರ್ಹ ಸ್ಟಾರ್ಟಪ್‌ಗಳಿಗೆ ಮೂರು ವರ್ಷ ತೆರಿಗೆ ವಿನಾಯಿತಿ ಇತ್ತು
  108. ಡಿಜಿಟಲ್‌ ಆಸ್ತಿ ಮೇಲೆ ಶೇ.30 ರಷ್ಟು ತೆರಿಗೆ ವಿಧಿಸಲಾಗುತ್ತದೆ
  109. ವರ್ಚುಯಲ್‌ ಡಿಜಿಟಲ್‌ ಕರೆನ್ಸಿ ಮೇಲೆ ತೆರಿಗೆ ವಿಧಿಸಲಾಗುತ್ತದೆ
  110. ಡಿಜಿಟಲ್‌ ಆಸ್ತಿ ವರ್ಗಾವಣೆ ಮೇಲೆ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತದೆ
  111. ವರ್ಚುಯಲ್‌ ಕರೆನ್ಸಿ ಮೇಲೆ ಶೇ.1 ರಷ್ಟು ಟಿಡಿಎಸ್‌ ವಿಧಿಸಲಾಗುತ್ತದೆ
  112. ಕ್ರಿಪ್ಟೋ ಕರೆನ್ಸಿ ಆದಾಯದ ಮೇಲೆ ಶೇ.1 ರಷ್ಟು ಟಿಡಿಎಸ್‌ ಹಾಕಲಾಗುತ್ತದೆ
  113. ವ್ಯಾವಹಾರಿಕ ವೆಚ್ಚಕ್ಕೆ ಶಿಕ್ಷಣ ಹಾಗೂ ಆರೋಗ್ಯ ಸೆಸ್‌ ಇರುವುದಿಲ್ಲ
  114. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರಿಗೆ ಟಿಡಿಎಸ್‌ ಶೇ.10 ರಿಂದ ಶೇ.14ಕ್ಕೆ ಏರಿಕೆ
  115. ಒಂದು ಮಾರುಕಟ್ಟೆ ಒಂದು ತೆರಿಗೆ ಯೋಜನೆ ಜಾರಿ
  116. ಸಂಕಷ್ಟ ಕಾಲದಲ್ಲೂ ಜಿಎಸ್‌ಟಿ ಅತಿ ಹೆಚ್ಚು ಸಂಗ್ರಹವಾಗುತ್ತಿದೆ
  117. ಜನವರಿಯಲ್ಲಿ 1 ಲಕ್ಷ 46 ಸಾವಿರ ಕೋಟಿ ರೂಪಾಯಿ ಸಂಗ್ರಹ
  118. ಬಟ್ಟೆ ಹಾಗೂ ಚರ್ಮದ ಉತ್ಪನ್ನಗಳ ಬೆಲೆ ಇಳಿಕೆ ಮಾಡಲಾಗಿದೆ
  119. ನೇರ ತೆರಿಗೆಯಲ್ಲಿ ಈ ವರ್ಷ ಯಾವುದೇ ಬದಲಾವಣೆ ಮಾಡುತ್ತಿಲ್ಲ
  120. ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ
  121. ಕೃಷಿ ಉಪಕರಣ ಹಾಗೂ ವಿದೇಶಿ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ
  122. ಚಿನ್ನ, ವಜ್ರಾಭರಣಗಳ ಮೇಲಿನ ತೆರಿಗೆ ಇಳಿಕೆ
  123. ಮೊಬೈಲ್‌ ಹಾಗೂ ಮೊಬೈಲ್‌ ಚಾರ್ಜರ್‌ಗಳ ಬೆಲೆ ಇಳಿಕೆ
  124. ಕಾರ್ಪೊರೇಟ್‌ ಸರ್‌ ಚಾರ್ಜ್‌ ಕೂಡಾ ಇಳಿಕೆ ಂಆಡಲಾಗಿದೆ
  125. ವಜ್ರಾಭರಣಗಳ ಮೇಲಿನ ಅಬಕಾರಿ ಸುಂಕ ಶೇ.5 ರಷ್ಟು ಇಳಿಕೆ
  126. ಚಪ್ಪಲಿ, ಬಟ್ಟೆ, ಮೊಬೈಲ್‌, ಕೃಷಿ ಉಪಕರಣಗಳು ಅಗ್ಗವಾಗಲಿವೆ
Share Post