Money Mindset; 15-15-15 ರೂಲ್ ಅನುಸರಿಸಿದರೆ ನೀವೂ ಕೋಟ್ಯಧೀಶರಾಗಬಹುದು!
ಬೆಂಗಳೂರು; ನೀವು ನೋಡಿರಬಹುದು. ಕೋಟ್ಯಂಧೀಶರು, ಶ್ರೀಮಂತರು ಯಾವತ್ತೂ ಕೆಲಸ ಮಾಡೋದಿಲ್ಲ. ಕೆಲಸ ಮಾಡಿಸುತ್ತಾರೆ. ಅವರ ಕೆಲಸಗಾರರಿಂದ ಕೆಲಸ ಮಾಡಿಸುತ್ತಾರೆ, ಜೊತೆಗೆ ಅವರ ಬಳಿ ಇರುವ ಹಣದ ಕೈಯಲ್ಲೂ ಕೆಲಸ ಮಾಡಿಸುತ್ತಾರೆ. ಹಣವನ್ನು ದುಡಿಯಲು ಬಿಟ್ಟವನು ಮಾತ್ರ ಶ್ರೀಮಂತನಾಗುತ್ತಾನೆ. Money Mindset ಮೈಗೂಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ.
ನೀವು ಸಂಪಾದಿಸುವ ಹಣವನ್ನು ಸಂಪ್ರದಾಯಿಕ ರೀತಿಯಲ್ಲಿ ಉಳಿತಾಯ ಮಾಡುತ್ತಾ ಹೋದರೆ ನಿಗೆ ಯಾವುದೇ ಲಾಭ ಬರೋದಿಲ್ಲ. ನಿಮ್ಮ ಬಳಿ ಇರುವ ಹಣವನ್ನು ದುಡಿಯಲು ಬಿಡಬೇಕು. ಹೆಚ್ಚಿನ ಬಡ್ಡಿ ತಂದುಕೊಡುವ ಕಡೆ ನಿಮ್ಮ ಹಣವನ್ನು ಡೆಪಾಸಿಟ್ ಇಡಬೇಕು. ಬಹುತೇಕ ಫಿಕ್ಸ್ಟ್ ಡೆಪಾಸಿಟ್, ರೆಕರಿಂಗ್ ಡಿಪಾಸಿಟ್ ಮುಂದಾತದ ಸ್ಕೀಂಗಳಲ್ಲಿ ಮಾತ್ರ ಹಣ ತೊಡಗಿಸುತ್ತಾರೆ. ಆದ್ರೆ ಚಕ್ರಬಡ್ಡಿ ಬರುವಂತಹ, ಹೆಚ್ಚು ಬಡ್ಡಿ ಬರುವಂತಹ ಕಡೆ ನಿಮ್ಮ ಹಣವನ್ನು ತೊಡಗಿಸಿದರೆ ನೀವು ಬಹುಬೇಗ ಶ್ರೀಮಂತರಾಗೋದು ಗ್ಯಾರೆಂಟಿ.
ಒಂದು ಬೀಜ ಬಿತ್ತನೆ ಮಾಡಿದರೆ ಅದು ಗಿಡ ಅಥವಾ ಮರವಾಗಿ ಅಂತಹ ಸಾವಿರಾರು ಬೀಜಗಳನ್ನು ನೀಡುತ್ತದೆ. ಆದ್ರೆ ಬಿತ್ತನೆ ಮಾಡುವ ಸಮಯ ಹಾಗೂ ಬಿತ್ತನೆ ಬೇಕಾದ ಸಿದ್ಧತೆ ಇಲ್ಲಿ ಮುಖ್ಯವಾಗುತ್ತದೆ. ಅದೇ ರೀತಿ ನೀವು ಸರಿಯಾದ ಸಮಯದಲ್ಲಿ ಸರಿಯಾದ ಕಡೆ ನೀವು ದುಡಿದ ಹಣವನ್ನು ಹೂಡಿಕೆ ಮಾಡುತ್ತಾ ಬಂದರೆ ನೀವು ಶ್ರೀಮಂತರಾಗುತ್ತೀರಿ. ಕೋಟಿಗಳ ಒಡೆಯರೂ ಆಗುತ್ತೀರಿ.
15-15-15 ರೂಲ್ಸ್ ಫಾಲೋ ಮಾಡಿ ಕೋಟ್ಯಧೀಶರಾಗಿ!
ನೀವು ತಿಂಗಳಿಗೆ 15 ಸಾವಿರ ರೂಪಾಯಿ ಉಳಿತಾಯ ಮಾಡಿ ಹೂಡಿಕೆ ಮಾಡುವ ಶಕ್ತಿ ಇದ್ದರೆ ಈ ನಿಯಮವನ್ನು ನೀವು ಆರಾಮಾಗಿ ಫಾಲೋ ಮಾಡಬಹುದು. ನೀವು ಮ್ಯೂಚ್ಯುಯಲ್, ಎಸ್‌ಐಪಿಯಲ್ಲಿ (mutual funds, SIPs) ಹೂಡಿಕೆ ಮಾಡಿದರೆ ನಿಮಗೆ ವಾರ್ಷಿಕ 15 ಪರ್ಸೆಂಟ್ ಲಾಭ ತಂದುಕೊಡುವ ಸಾಧ್ಯತೆಯೇ ಹೆಚ್ಚಿರುತ್ತದೆ. ಹೀಗೆ ಪ್ರತಿ ತಿಂಗಳು 15 ಸಾವಿರ ರೂಪಾಯಿಯಂತೆ 15 ವರ್ಷ ಹೂಡಿಕೆ ಮಾಡಿದರೆ, ನಿಮಗೆ 15 ಪರ್ಸೆಂಟ್ ರಿಟರ್ನ್ಸ್ ಬಂದರೆ ನೀವು 15 ವರ್ಷದಲ್ಲಿ 1 ಕೋಟಿ ರೂಪಾಯಿ ಪಡೆಯಬಹುದು.
20-12-15 Rule ಫಾಲೋ ಮಾಡಿದರೂ ಕೋಟ್ಯಧಿಪತಿಗಳಾಗುತ್ತೀರಿ!
ನಿಮಗೆ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡುವ ಶಕ್ತಿ ಇದ್ದರೆ ಈ ರೂಲ್ ಅನ್ನು ನೀವು ಫಾಲೋ ಮಾಡಬಹುದು. ಯಾವಾಗಲೂ ವಾರ್ಷಿಕ 15 ಪರ್ಸೆಂಟ್ ರಿಟರ್ನ್ಸ್ expect ಮಾಡೋದಕ್ಕೆ ಆಗೋದಿಲ್ಲ. ಆದ್ರೆ ಯಾವುದೇ Mutual Fundನಲ್ಲಿ ಹೂಡಿಕೆ ಮಾಡಿದರೂ ವಾರ್ಷಿಕ 12 ಪರ್ಸೆಂಟ್ ರಿಟರ್ನ್ಸ್ ಅಂತೂ Expect ಮಾಡಬಹುದು.
ನೀವು ತಿಂಗಳಿಗೆ 20 ಸಾವಿರದಂತೆ 15 ವರ್ಷ ಹೂಡಿಕೆ ಮಾಡಿದರೆ, 12 ಪರ್ಸೆಂಟ್ Returns ಬಂದರೆ 15 ವರ್ಷದಲ್ಲಿ ನೀವು ಕೋಟ್ಯಧೀಶರಾಗುತ್ತೀರಿ.
10-12-20 Rule ಕೂಡಾ ನಿಮಗೆ ಕೋಟಿ ತಂದುಕೊಡುತ್ತೆ..!
ಹದಿನೈದು, ಇಪ್ಪತ್ತು ಸಾವಿರ ರೂಪಾಯಿ ಎಲ್ಲರಿಗೂ ಹೂಡಿಕೆ ಮಾಡೋದಕ್ಕೆ ಸಾಧ್ಯವಾಗೋದಿಲ್ಲ. ನಿಮಗೆ ತಿಂಗಳಿಗೆ 10 ಸಾವಿರ ರೂಪಾಯಿ ಹೂಡಿಕೆ ಮಾಡೋದಕ್ಕೆ ಸಾಧ್ಯವಾದರೂ ಸಾಕು ನೀವು ಕೋಟ್ಯಧಿಪತಿಗಳಾಗಬಹುದು. ನೀವು ಸೈಲೆಂಟಾಗಿ ಈ ರೂಲ್ ಫಾಲೋ ಮಾಡುತ್ತಾ ಹೋದರೆ 20 ವರ್ಷದಲ್ಲಿ ನೀವು ಕೋಟ್ಯಧಿಪತಿಗಳಾಗಿರುತ್ತೀರಿ.
ಪ್ರತಿ ತಿಂಗಳು ನೀವು 10 ಸಾವಿರ ರೂಪಾಯಿ ಹೂಡಿಕೆ ಮಾಡಿ. 20 ವರ್ಷದ ಕಾಲ ಹಾಗೆ ಹೂಡಿಕೆ ಮಾಡುತ್ತಾ ಹೋದರೆ 12 ಪರ್ಸೆಂಟ್ Returns ಬಂದರೂ ಕೂಡಾ ನೀವು 20 ನೇ ವರ್ಷ ಕೋಟಿ ರೂಪಾಯಿಯನ್ನು ನಿಮ್ಮದಾಗಿಸಿಕೊಳ್ಳುತ್ತೀರಿ.