ಒಮಿಕ್ರಾನ್‌ಗೂ ಕ್ರಿಪ್ಟೋ ಕರೆನ್ಸಿಗೂ ಏನು ಸಂಬಂಧ..?; ದಿಢೀರ್ ಏರಿತು ಕ್ರಿಪ್ಟೋ ಬೆಲೆ..!
ನವದೆಹಲಿ: ಒಮಿಕ್ರಾನ್ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಒಮಿಕ್ರಾನ್ ಅಂದರೆ ಎಲ್ಲರಿಗೂ ಗೊತ್ತಿರೋದು ಕೊರೋನಾ ರೂಪಾಂತರಿ ತಳಿ ಅನ್ನೋದು. ಆದರೆ, ದಕ್ಷಿಣ ಆಫ್ರಿಕಾದ ಈ ರೂಪಾಂತರಿ ತಳಿಗೆ ಈ ಹೆಸರಿಡುವ ಮೊದಲೇ ಕ್ರಿಪ್ಟೋ ಕರೆನ್ಸಿಯೊಂದಕ್ಕೆ ಈ ಹೆಸರಿಡಲಾಗಿತ್ತು. ಮೊದಲು ಅಷ್ಟೊಂದು ಬೇಡಿಕೆ ಇರದ ಒಮಿಕ್ರಾಮ್ ಕ್ರಿಪ್ಟೋ ಕರೆನ್ಸಿಗೆ ಬಹು ಬೇಡಿಕೆ ಬಂದಿದೆ.
ಹೌದು, ಅಷ್ಟೇನೋ ಹೆಸರಿಲ್ಲದ ಒಮಿಕ್ರಾನ್ ಕ್ರಿಪ್ಟೋ ಕರೆನ್ಸಿ ಬೆಲೆ 900 ಪಟ್ಟು ಜಾಸ್ತಿಯಾಗಿದೆ. ನವೆಂಬರ್ 27 ರಂದು ಸುಮಾರು 65 ಡಾಲರ್ ಅಂದರೆ ಅಂದಾಜು 4,883 ರೂಪಾಯಿ ಆಗಿತ್ತು. ಆದರೆ ಕೊರೊನಾ ವೈರಸ್‌ನ ಹೊಸ ರೂಪಾಂತರಕ್ಕೆ ಒಮಿಕ್ರಾನ್ ಎಂದು ಹೆಸರಿಟ್ಟ ಬಳಿಕ ಈ ಒಮಿಕ್ರಾನ್ ಕ್ರಿಪ್ಟೋಕರೆನ್ಸಿ ಬೆಲೆ ನಿರಂತರ ಏರಿಕೆ ಕಂಡಿದೆ. ನವೆಂಬರ್ 29 ರಂದು,65 ಡಾಲರ್‌ನಿಂದ 689 ಡಾಲರ್‌ಗೆ ಏರಿಕೆ ಕಂಡಿದೆ.