Millionaires Mindset; ದೇಶದ 79ರಷ್ಟು ಕೋಟ್ಯಧೀಶರು Zero ಇಂದ Hero ಆದವರು..!
ಬೆಂಗಳೂರು; ದೇಶದ ಶೇಕಡಾ 90ರಷ್ಟು ಆಸ್ತಿ ಶೇಕಡಾ 1ರಷ್ಟು ಮಂದಿಯ ಬಳಿ ಇದೆ ಎನ್ನುವ ವರದಿ ಇದೆ. ಇದು ಸತ್ಯ ಕೂಡಾ. ಆದ್ರೆ ಇವರೆಲ್ಲಾ, ಮೊದಲಿನಿಂದಲೂ ಕೋಟ್ಯಧೀಶರಾ..?, ಅವರ ತಂದೆ, ತಾತ, ಮುತ್ತಾತಂದಿರು ಸಂಪಾದಿಸಿದ ಆಸ್ತಿಯನ್ನು ಬೆಳೆಸುತ್ತಾ ಹೋಗಿದ್ದಾರಾ..? ಖಂಡಿತ ಇಲ್ಲ. ಬಹುತೇಕ ಹಾಗೆಯೇ ಅಂದುಕೊಳ್ಳೋದು.. ಯಾರೋ ಅವರ ಅಪ್ಪನೋ, ತಾತನೂ ಸಂಪಾದಿಸಿರುತ್ತಾರೆ. ಇವರು ಅದನ್ನು ಬೆಳೆಸಿದ್ದಾರೆ ಅಷ್ಟೇ ಎಂದು ಮಾತನಾಡುವವರೇ ಜಾಸ್ತಿ.. ಆದ್ರೆ ಅಧ್ಯಯನಗಳ ಪ್ರಕಾರ, ಏನೂ ಇಲ್ಲದ ಸ್ಥಿತಿಯಿಂದ ಮಿಲಿಯನೇರ್‌ಗಳಾದವರೇ ನಮ್ಮ ದೇಶದಲ್ಲಿ ಹೆಚ್ಚಿದ್ದಾರೆ (Millionaires Mindset). ಹೌದು, ಬಹುಪಾಲು ಮಿಲಿಯನೇರ್‌ಗಳು ಜೀರೋ ಇಂದ ಹೀರೋಗಳಾಗಿದ್ದಾರೆ.
ಇದನ್ನೂ ಓದಿ; Lazy Rich; ಶ್ರೀಮಂತರಾಗಬೇಕೆ..?, ಹಾಗಾದ್ರೆ ಈ 10 ವರ್ಷ ಶತ ಸೋಮಾರಿಗಳಾಗಿಬಿಡಿ!
ದೇಶದ 79ರಷ್ಟು ಕೋಟ್ಯಧೀಶರು Zero ಇಂದ Hero ಆದವರು..!
ದೇಶದ 79ರಷ್ಟು ಕೋಟ್ಯಧೀಶರು Zero ಇಂದ Hero ಆದವರು..!; ವರದಿಯೊಂದರ ಪ್ರಕಾರ ದೇಶದ ಬಹುಪಾಲರು ಮಿಲಿಯನೇರ್ಸ್ ಸ್ವಂತವಾಗಿ ದುಡಿದು ದೊಡ್ಡವರಾದವರು. ದೇಶದ ಬಿಲಿಯನೇರ್‌ಗಳಲ್ಲಿ ಶೇಕಡಾ 79ರಷ್ಟು ಮಂದಿ (79 percent of Millionaires are Self-Made) ಸ್ವಂತವಾಗಿ ದುಡಿದು ಸಂಪಾದನೆ ಮಾಡಿ ಈ ಮಟ್ಟಕ್ಕೆ ಬಂದಿದ್ದಾರೆ. ಸಾವಿರಾರು ಮಂದಿಗೆ ಉದ್ಯೋಗ ಕೊಡುವಷ್ಟು ದೊಡ್ಡವರಾಗಿದ್ದಾರೆ. ಶೇಕಡಾ 21 ಮಂದಿ ಮಾತ್ರ ಅವರ ತಂದೆಯೋ, ತಾತನೋ ಸಂಪಾದಿಸಿರುವ ಆಸ್ತಿಯನ್ನು ಹೆಚ್ಚು ಮಾಡುತ್ತಾ ಹೋಗುತ್ತಿದ್ದಾರೆ ಅಷ್ಟೇ. ಉಳಿದವರು, ತನ್ನ ಸ್ವಂತ ಶಕ್ತಿಯಿಂದ, ತಮ್ಮ ಸ್ವಂತ ಬುದ್ಧಿವಂತಿಕೆಯಿಂದ, ತಮ್ಮ ಸ್ವಂತ ಪರಿಶ್ರಮದಿಂದ ಬೆಳೆಯುತ್ತಾ ಹೋಗುತ್ತಿದ್ದಾರೆ.
ಇದನ್ನೂ ಓದಿ; Money Mindset; ನಾವೇ ಸೃಷ್ಟಿಸಿದ ಹಣ ಪಳಗಿಸೋದು ಹೇಗೆ..?
ತಮ್ಮನ್ನು ತಾವು ನಂಬುವವರು ಮಾತ್ರ ಶ್ರೀಮಂತರಾಗ್ತಾರೆ;
ತಮ್ಮನ್ನು ತಾವು ನಂಬುವವರು ಮಾತ್ರ ಶ್ರೀಮಂತರಾಗ್ತಾರೆ; ಎಲ್ಲರಿಗೂ ಕೂಡಾ ಶ್ರೀಮಂತರಾಗುವ ಶಕ್ತಿ ಇರುತ್ತದೆ. ಮೇಲಿನ ವರದಿಯಿಂದಲೇ ಇದು ಗೊತ್ತಾಗುತ್ತದೆ. ಶೇ.79 ಮಂದಿ ಏನೂ ಇಲ್ಲದ ಸ್ಥಿತಿಯಿಂದ ಬಿಲಿಯನೇರ್‌ಗಳಾಗಿದ್ದಾರೆ. ಅವರೆಲ್ಲಾ ನನ್ನ ಕೈಯಲ್ಲಿ ಆಗುತ್ತದೆ. ನಾನು ದೊಡ್ಡ ಮಟ್ಟದಲ್ಲಿ ಬೆಳೆಯುತ್ತೇನೆ ಎಂದು ನಂಬಿದ್ದರು. ಜೊತೆಗೆ ದೊಡ್ಡ ಮಟ್ಟದಲ್ಲಿ ಬೆಳೆಯೋದಕ್ಕೆ ಏನೆಲ್ಲಾ ಪರಿಶ್ರಮ ಪಡೆಬೇಕೋ ಅದನ್ನು ಮಾಡಿದರು. ಹೀಗಾಗಿ ಬಿಲಿಯನೇರ್‌ಗಳಾಗಿದ್ದಾರೆ.
ಆದ್ರೆ ಬಹುತೇಕರು ನಿಮ್ಮಲ್ಲಿ ದೊಡ್ಡದಾಗಿ ಬೆಳೆಯುವ ಶಕ್ತಿ ಇದೆ ಎಂದರೂ ನಂಬೋದಿಲ್ಲ. ನಾವೆಲ್ಲಿ ದೊಡ್ಡವರಾಗುತ್ತೇವೆ. ನಮ್ಮ ಮನೆಯಲ್ಲಿ ತಿನ್ನೋದಕ್ಕೇ ಇಲ್ಲ. ಇನ್ನು ಬಿಲಿಯನೇರ್ ಹೇಗಾಗುತ್ತೇನೆ. ಹೇಗೆ ಸ್ವಂತ ಉದ್ಯಮ ಸ್ಥಾಪಿಸುತ್ತೇನೆ ಎಂದು ಕೇಳುತ್ತಿರುತ್ತಾರೆ. ಅಂದರೆ ಅವರಿಗೆ ಗುರಿ ಅನ್ನೋದೇ ಇರೋದಿಲ್ಲ. ತಮ್ಮನ್ನು ತಾವು ನಂಬೋದೇ ಇಲ್ಲ. ಹೀಗಿರುವಾಗ ಬೇರೆಯವರು ಕೂಡಾ ಅವರನ್ನು ನಂಬೋದಿಲ್ಲ. ಈ ಕಾರಣದಿಂದಾಗಿ ಬಹುತೇಕರು ಬಡವರಾಗಿಯೇ ಉಳಿದುಬಿಡುತ್ತಾರೆ. ಮೊದಲು ನಿಮ್ಮ ಶಕ್ತಿಯನ್ನು ನೀವು ನಂಬಿ.. ಮತ್ತೆ ನಿಮ್ಮ ಬೆಳವಣಿಗೆ ಹೇಗಿರುತ್ತೆ ಅನ್ನೋದನ್ನ ನೋಡಿ.
ಇದನ್ನೂ ಓದಿ; Financial Freedom; ದೇಶದ ಶೇ.90ರಷ್ಟು ಜನ 25 ಸಾವಿರಕ್ಕಿಂತ ಹೆಚ್ಚು ದುಡಿಯುತ್ತಿಲ್ಲ!
ಮಾಡುವ ಹಾರ್ಡ್ ವರ್ಕ್ ಸರಿಯಾದ ಮಾರ್ಗದಲ್ಲಿರಬೇಕು;
ಮಾಡುವ ಹಾರ್ಡ್ ವರ್ಕ್ ಸರಿಯಾದ ಮಾರ್ಗದಲ್ಲಿರಬೇಕು; ಗೆಲುವಿಗೆ ಹಾರ್ಡ್ ವರ್ಕ್ ಅವಶ್ಯಕತೆಯೇ ಇಲ್ಲ. ಸ್ಮಾರ್ಟ್ ವರ್ಕ್ ಮಾಡಬೇಕು ಎಂದು ಎಲ್ಲರೂ ಹೇಳುತ್ತಿರುತ್ತಾರೆ. ಆದ್ರೆ ದೊಡ್ಡ (Millionaires Mindset) ಮಟ್ಟದ ಬೆಳವಣಿಗೆ ಸ್ಮಾರ್ಟ್ ವರ್ಕ್ ಯಾವಾಗಲೂ ಕೆಲಸ ಮಾಡೋದಿಲ್ಲ. ಸ್ಮಾರ್ಟ್ ವರ್ಕ್ ಮಾಡುವವರು ಯಾವಾಗಲೂ ಬೇರೆಯವರನ್ನು ಅವಲಂಬಿಸಿರುತ್ತಾರೆ.. ಅಂದರೆ ಅವರ ಸ್ಮಾರ್ಟ್ ಆಲೋಚನೆಗಳ ಮೂಲಕ ಬೇರೆಯವರಿಂದ ಕೆಲಸ ಮಾಡಿಸಿ ಅವರು ಬೆಳೆಯುತ್ತಿರುತ್ತಾರೆ. ಆದ್ರೆ ಸ್ಮಾರ್ಟ್ ವರ್ಕ್ ಮೂಲಕ ಯಾವಾಗಲೂ ಬೆಳೆಯೋದಕ್ಕೆ ಸಾಧ್ಯವಿಲ್ಲ. ನಿಮ್ಮ ಸ್ಮಾರ್ಟ್ ಆಲೋಚನೆಗಳನ್ನು ನಂಬಿ ಕೆಲಸ ಮಾಡಿ ನಿಮಗೆ ಲಾಭ ತಂದುಕೊಡುತ್ತಿದ್ದವರು ನಿಮಗೆ ಕೈಕೊಟ್ಟರೆ ನೀವು ಸಂಕಷ್ಟಕ್ಕೆ ಸಿಲುಕುತ್ತೀರಿ. ಹೀಗಾಗಿ, ನೀವು ದೊಡ್ಡ ಮಟ್ಟದಲ್ಲಿ ಬೆಳೆಯಬೇಕಾದರೆ ಹಾರ್ಡ್ ವರ್ಕ್ ಕೂಡಾ ಇರಬೇಕು. ಅದು ಸರಿಯಾದ ಮಾರ್ಗದಲ್ಲಿರಬೇಕು.
ಸ್ಮಾರ್ಟ್ ವರ್ಕ್ ಇರಬೇಕು. ಆದ್ರೆ ಹಾರ್ಡ್ ವರ್ಕ್‌ಗೆ ಪರ್ಯಾಯ ಸ್ಮಾರ್ಟ್ ಅಲ್ಲವೇ ಅಲ್ಲ. ಹಾರ್ಡ್ ವರ್ಕ್‌ನ್ನು ಸರಿಯಾದ ರೀತಿಯಲ್ಲಿ ಮಾಡೋದಕ್ಕಾಗಿ ಸ್ಮಾರ್ಟ್ ವರ್ಕ್ ಮಾಡಬೇಕು. ಬರೀ ಸ್ಮಾರ್ಟ್ ವರ್ಕ್‌ನಿಂದ ಏನೂ ಸಾಧಿಸೋದಕ್ಕೆ ಆಗೋದಿಲ್ಲ. ಸಾಧಿಸಿದರೂ ಕೂಡಾ ಅದು ಹೆಚ್ಚು ದಿನ ಉಳಿಯೋದಿಲ್ಲ.
ಇದನ್ನೂ ಓದಿ; Money Mindset; 15-15-15 ರೂಲ್ ಅನುಸರಿಸಿದರೆ ನೀವೂ ಕೋಟ್ಯಧೀಶರಾಗಬಹುದು!
ಬಿಲಿಯನೇರ್‌ಗಳು ಅಪ್‌ಡೇಟ್ ಆಗುತ್ತಿರುತ್ತಾರೆ;
ಬಿಲಿಯನೇರ್‌ಗಳು ಅಪ್‌ಡೇಟ್ ಆಗುತ್ತಿರುತ್ತಾರೆ; ತುಂಬಾ ಜನ ಅಪ್‌ಡೇಟ್ ಆಗೋದಿಲ್ಲ. ಈ ಕಾರಣದಿಂದ ಬೆಳೆಯೋದಕ್ಕೆ ಆಗೋದಿಲ್ಲ. ಆದ್ರೆ ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗುತ್ತಾ ಹೋದರೆ ಮಾತ್ರ ಬೆಳೆಯೋದಕ್ಕೆ ಸಾಧ್ಯ. ಈಗ AI ಟೆಕ್ನಾಲಜಿ ಬಂದಿದೆ. ಇದರಿಂದ ಎಷ್ಟೋ ಕೆಲಸಗಳು ಸುಲಭವಾಗುತ್ತವೆ. ಇದನ್ನು ನೋಡಿ ನಾವೂ ಕೂಡಾ ನಮ್ಮ ಕೆಲಸದಲ್ಲಿ ಅಪ್‌ಡೇಟ್ ಆಗಬೇಕು. ಇಲ್ಲ ನಾವು ಸಂಪ್ರದಾಯಿಕವಾಗಿ ಕೆಲಸ ಮಾಡುತ್ತಿದ್ದೇವೆ. ಹಳೆಯದನ್ನೇ ಮುಂದುವರೆಸುತ್ತೇವೆ ಎಂದರೆ, ನಿಮ್ಮ ವ್ಯವಹಾರ ಹೆಚ್ಚು ದಿನ ನಡೆಯೋದಿಲ್ಲ.
ಮೊದಲು ಕೈಯಲ್ಲೇ ಎಲ್ಲಾ ಲೆಕ್ಕ ಹಾಕುತ್ತಿದ್ದರು. ಈಗ ಕ್ಯಾಲ್ಕುಲೇಟರ್‌ಗಳು ಬಂದಿವೆ. ಇನ್ನೂ ಏನೇನೋ ಟೆಕ್ನಾಲಜಿಗಳು ಬಂದಿವೆ. ಬದಲಾವಣೆ ನಮಗೆ ಬೇಡ, ನಾನು ಈಗಲೂ ಕೈಯಲ್ಲೇ ಲೆಕ್ಕ ಹಾಕುತ್ತೇನೆ ಎಂದು ಕೂತರೆ ಆಗುತ್ತದಾ..?. ಅವನ್ಯಾರೋ ಹೊಸ ಟೆಕ್ನಾಲಜಿ ತಂದು ನಮ್ಮ ಕೆಲಸ ಕಿತ್ತುಕೊಂಡ ಎಂದು ತಲೆ ಮೇಲೆ ಕೈಹೊತ್ತು ಕುಳಿತರೆ ಜೀವನ ನಡೆಯೋದಿಲ್ಲ. ಮೊದಲ ಕುದುರೆ ಜಟಕಾದಲ್ಲಿ ಎಲ್ಲರೂ ಓಡಾಡುತ್ತಿದ್ದರು. ಅನಂತರ ಸೈಕಲ್, ಕಾರು, ಬಸ್ಸು, ರೈಲು, ವಿಮಾನ ಹೀಗೆ ಏನೇನೋ ಬಂದವು. ನಾವು ಅವುಗಳನ್ನು ಒಪ್ಪಿಕೊಳ್ಳುತ್ತಾ ಬಂದೆವು. ಇಲ್ಲ ನಾನು ಜಟಕಾ ಓಡಿಸಿಕೊಂಡಿದ್ದೆ, ಅವನು ಯಾರೋ ಕಾರು ಪರಿಚಯಿಸಿ ನನ್ನ ಕೆಲಸ ಹಾಳು ಮಾಡಿದ ಎಂದು ತಲೆ ಮೇಲೆ ಕೈಹೊತ್ತುಕೊಂಡು ಕೂತರೆ ಹೇಗೆ..?. ಹೀಗಾಗಿ, ಬಿಲಿಯನೇರ್ಸ್ ಬದಲಾವಣೆಗೆ ಒಗ್ಗಿಕೊಳ್ಳುತ್ತಾರೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತಾರೆ.
ಯಾರೋ ಹೊಸಬರು ಬರುತ್ತಿದ್ದಾರೆ. ನಮ್ಮ ಕೆಲಸ ಕಿತ್ತುಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿಕೊಂಡು ಕೂರೋದಿಲ್ಲ. ಬದಲಾಗಿ ಮಿಲೊಯನೇರ್ಸ್ ಬದಲಾವಣೆ ಹೊಂದುತ್ತಾರೆ. ಹೀಗಾಗಿ ಎಲ್ಲರೂ ನಿರಂತರವಾಗಿ ಕಲಿಯುತ್ತಾ ಹೋಗಬೇಕು. ನಂಬಬೇಕು, ಬೆಳೆಯಬೇಕು, ಕೊಡಬೇಕು, ತೆಗೆದುಕೊಳ್ಳಬೇಕು. ಒಂದೇ ಕಡೆ ಇರಬಾರದು… ಬದಲಾಗುತ್ತಾ ಹೋಗಬೇಕು…