Economy

ನದಿಗಳ ಜೋಡಣೆಗೆ ಬಜೆಟ್‌ನಲ್ಲಿ ಅನುಮೋದನೆ; ಯಾವ ನದಿಗಳು ಜೋಡಣೆಯಾಗುತ್ತೆ..?

ನವದೆಹಲಿ: ಕೇಂದ್ರ ಬಿಜೆಪಿ ಸರ್ಕಾರದ ಬಹುದಿನಗಳ ಕನಸು ಈಗ ನನಸು ಮಾಡುವ ಹಂತಕ್ಕೆ ಬಂದಿದೆ. ಬಿಜೆಪಿ ದೇಶದಲ್ಲಿ ನದಿಗಳ ಜೋಡಣೆ ಮಾಡುವ ಮೂಲಕ ಅನಗತ್ಯವಾಗಿ ನೀರು ಸಮುದ್ರಕ್ಕೆ ಹರಿದುಹೋಗುವುದನ್ನು ತಪ್ಪಿಸುವುದಾಗಿ ಹೇಳಿತ್ತು. ಅದರಂತೆ ಈ ಬಾರಿಯ ಬಜೆಟ್‌ನಲ್ಲಿ ನದಿಗಳ ಜೋಡಣೆಗೆ ಒತ್ತು ನೀಡಿದೆ. ಹಲವು ನದಿಗಳ ಜೋಡಣೆಗೆ ಈ ಬಾರಿಯ ಬಜೆಟ್‌ನಲ್ಲಿ ಯೋಜನೆ ರೂಪಿಸಲಾಗಿದೆ. ಕಾವೇರಿ–ಪೆನ್ನಾರ್‌, ಪೆನ್ನಾರ್‌–ಕೃಷ್ಣಾ, ಗೋದಾವರಿ–ಕೃಷ್ಣ ಸೇರಿದಂತೆ ನದಿ ಜೋಡಣೆಯ ಐದು ಯೋಜನೆಗಳಿಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಸಮ್ಮತಿ ಸೂಚಿಸಿದೆ.

ಯಾವ ನದಿಗಳು ಜೋಡಣೆಯಾಗಿತ್ತವೆ..?

೧. ಧಮನ್‌ ಗಂಗಾ – ಪಿಂಜಾಲ್‌
೨. ಪರ್‌ ತಾಪಿ–ನರ್ಮದಾ
೩. ಗೋದಾವರಿ – ಕೃಷ್ಣಾ
೪. ಕೃಷ್ಣಾ – ಪೆನ್ನಾರ್‌
೫. ಕಾವೇರಿ – ಪೆನ್ನಾರ್‌

ಇದರ ಜೊತೆಗೆ ಮಧ್ಯಪ್ರದೇಶದ ಕೆನ್‌-ಬಾತ್ವಾ ನದಿಗಳ ಜೋಡಣೆಗೂ ಗ್ರೀನ್‌ ಸಿಗ್ನಲ್‌ ನೀಡಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 44,605 ಕೋಟಿ ರೂಪಾಯಿಯನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದೆ.

Share Post