ಸಾಲದ ಸುಳಿಯಲ್ಲಿ ಸಿಲುಕಿದ್ದೀರಾ..?; ಹೀಗೆ ಮಾಡಿ ಸಂಕಷ್ಟದಿಂದ ಹೊರಬನ್ನಿ..!
ತುಂಬಾ ಜನ ಅನಗತ್ಯ ಖರ್ಚುಗಳ ಕಾರಣದಿಂದಾಗಿ ಸಾಲದ ಸುಳಿಯಲ್ಲಿ ಸಿಲುಕಿರುತ್ತಾರೆ… ಹೆಚ್ಚಿನ ಬಡ್ಡಿಗೆ ಸಾಲ ತಂದು ಖರ್ಚು ಮಾಡುವ ಅನಿವಾರ್ಯತೆ ಎದುರಾಗಿರುತ್ತದೆ.. ತಮ್ಮ ಯೋಗ್ಯತೆ ಮೀರಿ ಖರ್ಚುಗಳ ಹೆಚ್ಚು ಮಾಡಿಕೊಳ್ಳುವುದರಿಂದ ಸಾಲಗಳು ಹೆಚ್ಚಾಗುತ್ತವೆ.. ಅದು ಒಂದು ದಿನ ದೊಡ್ಡ ಮಟ್ಟದ ಕಷ್ಟಕ್ಕೆ ತಂದು ನಿಲ್ಲಿಸುತ್ತದೆ.. ಹೀಗಾಗಿ ಸಾಲಗಳನ್ನು ತೀರಿಸಲು ನಿಶ್ಚಿಂತೆಯಿಂದ ಬದುಕಲು ನಾವು ಇಲ್ಲಿ ಒಂದಷ್ಟು ಸಲಹೆಗಳನ್ನು ನೀಡಿದ್ದೇವೆ..
ಹಣಕಾಸಿನ ಸಮಸ್ಯೆಗಳನ್ನು ನಿವಾರಿಸಲು ನೀವು ತೆಗೆದುಕೊಳ್ಳಬಹುದಾದ ಕೆಲವು ಹಂತಗಳು ಇಲ್ಲಿವೆ:
1. ಬಜೆಟ್ ಸಿದ್ಧಪಡಿಸಿಕೊಳ್ಳಿ:
ನಿಮ್ಮ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ನೋಡಲು ನಿಮ್ಮ ಎಲ್ಲಾ ಆದಾಯ ಮತ್ತು ವೆಚ್ಚಗಳ ಪಟ್ಟಿಯನ್ನು ಮಾಡಿ. ನೀವು ಕಡಿತಗೊಳಿಸಬಹುದಾದ ಪ್ರದೇಶಗಳನ್ನು ಗುರುತಿಸಲು ಮತ್ತು ನಿಮ್ಮ ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯೋಜಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
2. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ:
ನಿಮ್ಮ ಮಾಸಿಕ ಖರ್ಚುಗಳನ್ನು ಕಡಿಮೆ ಮಾಡುವ ಮಾರ್ಗಗಳಿಗಾಗಿ ನೋಡಿ, ಉದಾಹರಣೆಗೆ ಹೊರಗೆ ತಿನ್ನುವುದು, ಮನರಂಜನೆ ಮತ್ತು ಶಾಪಿಂಗ್ ಅನ್ನು ಕಡಿತಗೊಳಿಸಿ. ಎಷ್ಟು ಅನಿವಾರ್ಯವೋ ಅಷ್ಟನ್ನು ಮಾತ್ರ ಖರೀದಿ ಮಾಡಿ.. ಅನಗತ್ಯ ವೆಚ್ಚಗಳಿಗೆ ಕೆಲ ತಿಂಗಳು ಬ್ರೇಕ್ ಹಾಕಿ
3. ಆದಾಯವನ್ನು ಹೆಚ್ಚಿಸುವ ಮಾರ್ಗ ಹುಡುಕಿ;
ನಿಮಗೆ ಬರುತ್ತಿರುವ ಆದಾಯ ಹಾಗೂ ಆಗುತ್ತಿರುವ ಖರ್ಚು ತಾಳೆ ಹಾಕಿ.. ಅನಗತ್ಯ ಖರ್ಚುಗಳನ್ನು ತೆಗೆದರೂ ಬರುತ್ತಿರುವ ಆದಾಯ ಸಾಲದಿದ್ದರೆ ಆದಾಯ ಹೆಚ್ಚಿಸಿಕೊಳ್ಳುವ ಮಾರ್ಗ ಹುಡುಕಬೇಕು.. ಹೆಚ್ಚು ಸಂಬಳ ಇರುವ ಕೆಲಸ ಹುಡುಕಿಕೊಳ್ಳಬೇಕು.. ಇಲ್ಲದಿದ್ದರೆ ಕೆಲಸದ ಜೊತೆಗೆ ಪಾರ್ಟ್ ಟೈಮ್ ಏನಾದರೂ ಮಾಡಲು ಪ್ರಯತ್ನಿಸಬೇಕು..
4. ಮೊದಲು ಸಾಲವನ್ನು ಪಾವತಿಸಿ;
ನೀವು ಅನಿವಾರ್ಯವಾಗಿ ಹಲವು ಸಾಲಗಳನ್ನು ಮಾಡಿದ್ದೀರಿ ಎಂದಿಟ್ಟುಕೊಳ್ಳಿ.. ಅದರಲ್ಲಿ ಹೆಚ್ಚಿನ ಬಡ್ಡಿಯ ಸಾಲಗಳು ಯಾವುವು ಎಂದು ಪಟ್ಟಿ ಮಾಡಿ.. ಅವುಗಳನ್ನು ಮೊದಲು ತೀರಿಸಲು ಪ್ರಯತ್ನಿಸಿ.. ಆದಷ್ಟು ಸಂಬಳ ಬರುತ್ತಿದ್ದಂತೆ ಸಾಲದ ಕಂತುಗಳನ್ನು ಮೊದಲು ಕಟ್ಟಿಬಿಡಿ.. ಉಳಿದ ಹಣದಲ್ಲಿ ಜೀವನ ನಡೆಸಲು ಪ್ರಯತ್ನಿಸಿ..
5. ತುರ್ತು ಪರಿಸ್ಥಿತಿಗಳಿಗಾಗಿ ಉಳಿಸಿ;
ಸಂಪಾದಿಸಿದ್ದೆಲ್ಲಾ ಖರ್ಚು ಮಾಡದೇ ತುರ್ತು ಪರಿಸ್ಥಿತಿಗಳಿಗಾಗಿ ಒಂದಷ್ಟು ಹಣದ ಉಳಿತಾಯ ಮಾಡುವುದು ಒಳ್ಳೆಯದು.. ಮನೆಯಲ್ಲಿ ಯಾರಿಗೋ ಅನಾರೋಗ್ಯವಾದರೆ ಆಸ್ಪತ್ರೆ ಖರ್ಚಿಗಾದರೂ ಹಣ ಉಳಿತಾಯ ಮಾಡಿಕೊಂಡಿರಬಹುದು.. ಇಲ್ಲದಿದ್ದರೆ ತುರ್ತು ಸಂದರ್ಭದಲ್ಲಿ ಸಂಕಷ್ಟ ಅನುಭವಿಸಬೇಕಾಗುತ್ತದೆ.. ಹೀಗಾಗಿ ಅನಿರೀಕ್ಷತ ಬರುವ ವೆಚ್ಚಗಳು ಹಾಗೂ ತುರ್ತು ಪರಿಸ್ಥಿತಿಗಳಿಗೆ ಒಂದು ಹಣವನ್ನು ಎತ್ತಿಡಬೇಕು.. ಇನ್ನು ಮನೆಯವರಿಗೆಲ್ಲಾ ಹೆಲ್ತ್ ಇನ್ಶೂರೆನ್ಸ್ ಮಾಡಿಸಿದರೆ ಒಳ್ಳೆಯದು..
6. ವೃತ್ತಿಪರ ಸಹಾಯವನ್ನು ಪಡೆಯಿರಿ;
ನಿಮ್ಮ ಹಣಕಾಸಿನ ಸಮಸ್ಯೆಗಳು ಜಟಿಲವಾಗಿದ್ದರೆ, ಹಣಕಾಸು ಸಲಹೆಗಾರ ಅಥವಾ ಕ್ರೆಡಿಟ್ ಸಲಹೆಗಾರರ ಸಹಾಯವನ್ನು ಪಡೆದುಕೊಳ್ಳಿ.. ನೆನಪಿಡಿ, ಹಣಕಾಸಿನ ಸಮಸ್ಯೆಗಳನ್ನು ನಿವಾರಿಸಲು ಸಮಯ ಮತ್ತು ಶಿಸ್ತು ತುಂಬಾನೇ ಮುಖ್ಯ.. ಆದರೆ ಈ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಯೋಜನೆಗೆ ಅಂಟಿಕೊಳ್ಳುವ ಮೂಲಕ, ನಿಮ್ಮ ಹಣಕಾಸಿನ ನಿಯಂತ್ರಣವನ್ನು ನೀವು ಮರಳಿ ಪಡೆಯಬಹುದು.