ಇದು ಸರ್ವಸ್ಪರ್ಶಿ ಬಜೆಟ್-ಮಧ್ಯಮ ವರ್ಗದವರಿಗೆ ಪೂರಕ; ಸಚಿವ ಸುಧಾಕರ್
ಬೆಂಗಳೂರು; ಕೇಂದ್ರ ಬಜೆಟ್ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಖುಷಿ ವ್ಯಕ್ತಪಡಿಸಿದ್ದಾರೆ. ಇದು ಎಲ್ಲಾ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾಗಿದೆ. ಅದ್ರಲ್ಲೂ ಮಧ್ಯಮ ವರ್ಗಗಳಿಗೆ ಅನುಕೂಲವಾಗಿದೆ. ಇದು ಸರ್ವಸ್ಪರ್ಶಿ ಬಜೆಟ್ ಎಂದು ಅವರು ಹೇಳಿದ್ದಾರೆ.
ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ದೊರೆತಿದೆ ಎಂದಿರುವ ಸುಧಾಕರ್, ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎಂಬ ಘೋಷಣೆಯಂತೆ ಕೇಂದ್ರ ಸರ್ಕಾರ ಎಲ್ಲರ ಪ್ರಗತಿಯಾಗಿ ಉತ್ತಮ ಬಜೆಟ್ ಘೋಷಿಸಿದೆ ಎಂದು ಹೇಳಿದ್ದಾರೆ. 2019ನೇ ಆರ್ಥಿಕ ವರ್ಷದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒಟ್ಟು ಬಜೆಟ್‌ನಲ್ಲಿ ಶೇ.1.4 ರಷ್ಟು ಅನುದಾನ ಮೀಸಲಿಡಲಾಗಿತ್ತು. ಆದ್ರೆ 2023 ನೇ ಸಾಲಿನಲ್ಲಿ ಶೇ.2.1 ರಷ್ಟು ಮೀಸಲಿಡಲಾಗಿದೆ. ಈ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಇನ್ನಷ್ಟು ಆದ್ಯತೆ ನೀಡಲಾಗಿದೆ ಎಂದು ಸುಧಾಕರ್ ಸಂತಸ ವ್ಯಕ್ತಪಡಿಸಿದ್ದಾರೆ.