ರಕ್ಷಣಾ ವ್ಯವಸ್ಥೆಯಲ್ಲಿ ಆತ್ಮ ನಿರ್ಭರ ಭಾರತಕ್ಕೆ ಒತ್ತು, ಸ್ಥಳೀಯ ಮಟ್ಟದಲ್ಲಿ ವಸ್ತುಗಳ ಖರೀದಿ
ದೆಹಲಿ: ಮಿಲಿಟರಿ ರಕ್ಷಣಾ ಸೇವೆಗಳಿಗೆ ಸಂಬಂಧಿಸಿದಂತೆ ಈ ಬಾರಿ ಸ್ಥಳೀಯ ಮಟ್ಟಕ್ಕೆ ಹೆಚ್ಚಿನ ಪ್ರಾಶಸ್ತ್ಯವನನು ನೀಡಲಾಗಿದೆ. ಈ ಬಾರಿ ಬಜೆಟ್‌ನಲ್ಲಿ ರಕ್ಷನಾ ವಸ್ತುಗಳ ಆಮುದು ಪ್ರಮಾಣ ಕ್ರಮೇನ ಇಳಿಕೆ ಮಾಡಿದೆ. ಮೇಕ್ ಇನ್ ಇಂಡಿಯಾ ಯೋಜನೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಅಗತ್ಯ ಇರುವ ಎಲ್ಲಾ ರಕ್ಷಣಾ ಉಪಕರಣಗಳನ್ನು ದೇಶೀಯ ಕಂಪನಿಗಳಿಂದ ಖರೀದಿಗೆ ಅವಕಾಶ ನೀಡಲಾಗಿದೆ. ಶೇಕಡಾ 68ರಷ್ಟು ವಸ್ತುಗಳ ಸ್ಥಲೀಯ ಮಟ್ಟದಲ್ಲಿ ಖರೀದಿ ಮಾಡುವಂತೆ ಸೂಚನೆ ನೀಡಲಾಗಿದೆ. 2025 ರವೇಳೆಗೆ ಎಲ್ಲಾ ಹಳ್ಳಿಗಳಲ್ಲಿ ರಕ್ಷಣಾ ವಲಯಕ್ಕೆ 25ರಷ್ಟು ಅನುದಾನ ನೀಡಲಾಗುವುದೆಂದು ಘೋಷಣೆ ಮಾಡಲಾಗಿದೆ.
ರಕ್ಷಣಾ ವ್ಯವಸ್ಥೆಯಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಒತ್ತು ನೀಡಲಾಗಿದೆ. ಡಿಆರ್‌ಡಿಓ ಜೊತೆ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಅಗತ್ಯವಿರುವ ಉತ್ಪಾದನೆ ಮಾಡುವಂತೆ ಹಾಗೂ ಸಂಶೋಧನೆ ನಡೆಸುವಂತೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಭದ್ರತೆಗೆ ಅಗತ್ಯವಿರುವ ಯುದ್ಧೋಪಕರಣಗಳೂ ಸೇರಿದಂತೆ ಎಲ್ಲ ಬಗೆಯ ಆಯುಧಗಳ ದೇಶೀ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದ್ದಾರೆ.