EconomyLifestyle

ಒಂದು ರೂಪಾಯಿಯೂ ಕಟ್ಟದೆ 7 ಲಕ್ಷ ರೂಪಾಯಿ ಇನ್ಶೂರೆನ್ಸ್‌ ಸಿಗುತ್ತೆ!

ಬೆಂಗಳೂರು; ನಮಗೆ ಇನ್ಶೂರೆನ್ಸ್‌ ಬೇಕಂದ್ರೆ ಪ್ರತಿ ತಿಂಗಳೂ ಅಥವಾ ಆರು ತಿಂಗಳು, ವರ್ಷಕ್ಕೊಮ್ಮೆ ಪ್ರೀಮಿಯಂ ಕಟ್ಟಬೇಕು.. ಆದ್ರೆ ಈ ಪ್ರೀಮಿಯಂ ಗೊಡವೆಯೇ ಇಲ್ಲದೆ ಒಂದು ರೂಪಾಯಿಯೂ ಕಟ್ಟದೇ 7 ಲಕ್ಷ ರೂಪಾಯಿ ಇನ್ಶೂರೆನ್ಸ್‌ ಪಡೆಬಹುದು.. ಅದರ ಮಾಹಿತಿಯನ್ನು ನಾವು ಇಲ್ಲಿ ನೀಡುತ್ತಿದ್ದೇವೆ.. ಭಾರತದಲ್ಲಿ ಕೆಲಸ ಮಾಡುವ ಬಹುತೇಕ ಎಲ್ಲಾ ಉದ್ಯೋಗಿಗಳಿಗೂ ಭವಿಷ್ಯನಿಧಿ ಯೋಜನೆ (ಪಿಎಫ್‌) ಮೂಲಕ ಪ್ರತಿ ತಿಂಗಳು ಪಡೆಯುವ ಸಂಬಳದಲ್ಲಿ ಒಂದಷ್ಟು ಕಡಿತ ಮಾಡಲಾಗುತ್ತದೆ.. ಇದನ್ನು ಉದ್ಯೋಗಿಯ ಪಿಎಫ್‌ ಖಾತೆಗೆ ಜಮೆ ಮಾಡಲಾಗುತ್ತದೆ.. ಈ ಹಣವನ್ನು ಉದ್ಯೋಗಿಗಳು ತಮ್ಮ ಅವಶ್ಯಕತೆಗಳಿಗೆ ಬಳಸಬಹುದು.. ಒಂದು ವೇಳೆ ಉದ್ಯೋಗಿ ನಿವೃತ್ತಿಯಾಗುವ ತನಕ ಪಿಎಫ್‌ ಹಣ ವಾಪಸ್‌ ಪಡೆಯದೇ ಹೋದರೆ ಆತ ಪಿಂಚಣಿ ಕೂಡಾ ಪಡೆಯಬಹುದು..

ಇದನ್ನೂ ಓದಿ; ಹೈದರಾಬಾದ್‌ನಲ್ಲಿ ಪ್ರಿಯತಮೆಯನ್ನು ಕೊಂದ ಬೀದರ್‌ ಯುವಕ!

ಇದರಲ್ಲಿ ಮುಖ್ಯವಾದ ಯೋಜನೆ ಎಂದರೆ ಎಂಪಾಯೀಸ್‌ ಡೆಪಾಸಿಟ್‌ ಲಿಂಕ್ಡ್‌ ಇನ್ಶೂರೆನ್ಸ್‌ ಎಷ್ಟು ವಿಮೆ ಕವರೇಜ್‌ ನೀಡುತ್ತೆ ಗೊತ್ತಾ..? ಈ ಪ್ಲ್ಯಾನ್‌ ವಿಶೇಷತೆ ಏನು..? ಇದರ ವಿವರಗಳನ್ನು ನೋಡುತ್ತಾ ಹೋಗೋಣ.. ಉದ್ಯೋಗಿಗಳ ಭವಿಷ್ಯನಿಧಿ ಯೋಜನೆಯಲ್ಲಿ ಸುಮಾರು 7 ಲಕ್ಷ ರೂಪಾಯಿಯವರೆಗೂ ವಿಮೆ ಪಡೆಯಬಹುದು.. ಇದರ ಪ್ರಕಾರ ಪಿಎಫ್‌ ಸದಸ್ಯರು ಯಾವುದೇ ಪ್ರೀಮಿಯಂ ಕಟ್ಟಬೇಕಾದ ಅವಶ್ಯಕತೆ ಬರೋದಿಲ್ಲ.. ಪ್ರಾಥಮಿಕ ವೇತನ 15000 ಸಾವಿರಕ್ಕೂ ಹೆಚ್ಚು ಇರುವ ಉದ್ಯೋಗಿಗಳು ಗರಿಷ್ಠ 6 ಲಕ್ಷ ರೂಪಾಯಿಯವರೆಗೂ ಉಚಿತ ವಿಮೆ ಪಡೆಯಬಹುದು.. ಪಿಎಫ್‌ ಸದಸ್ಯರ ಕಳೆದ 12 ತಿಂಗಳ ವೇತನದ 35 ಪಟ್ಟನ್ನು ವಿಮೆಯಾಗಿ ಪಡೆಯುವುದಕ್ಕೆ ಇಲ್ಲಿ ಅವಕಾಶವಿದೆ.. ಅಂದರೆ ಗರಿಷ್ಠ 7 ಲಕ್ಷ ರೂಪಾಯಿಯವರೆಗೂ ವಿಮೆ ಪಡೆಯಬಹುದು.. ಈ ಯೋಜನೆಯಲ್ಲಿ 1,15,000 ಬೋನಸ್‌ ಮೊತ್ತವನ್ನು ಕಳೆದ ಏಪ್ರಿಲ್‌ನಲ್ಲಿ 1,75,000ಕ್ಕೆ ಹೆಚ್ಚಿಸಲಾಗಿದೆ..

ಇದನ್ನೂ ಓದಿ; ಅಸಭ್ಯವಾಗಿ ವರ್ತಿಸಿದ ಖ್ಯಾತ ನಟನ ಕಪಾಳಕ್ಕೆ ಬಾರಿಸಿದ ನಟಿ!

 

Share Post