Lifestyle

ಕೋಪ ಕಂಟ್ರೋಲ್‌ ಮಾಡಿಕೊಳ್ಳೋಕೆ ಆಗ್ತಿಲ್ವಾ..?; ಹಾಗಾದ್ರೆ ಹೀಗೆ ಮಾಡಿ ನೋಡಿ..

ಮನುಷ್ಯನಿಗೆ ಹಲವಾರು ಜನ ಶತ್ರುಗಳಿರಬಹುದು.. ಅದೆಲ್ಲಕ್ಕಿಂತ ಡೇಂಜರ್‌ ಶತ್ರು ಅಂದ್ರೆ ಅದು ಕೋಪ.. ಕೋಪ ಬಂದರೆ ಮನುಷ್ಯ ಏನು ಮಾಡುತ್ತಾನೋ ಅವನಿಗೇ ಗೊತ್ತಿರೋದಿಲ್ಲ.. ಕೋಪದ ಕೈಗೆ ಬುದ್ಧಿ ಕೊಟ್ಟರೆ ನಂತರ ಸಂಕಷ್ಟ ಅನುಭವಿಸೋದು ಗ್ಯಾರೆಂಟಿ..  ಹೀಗಾಗಿ ಕೋಪವನ್ನು ಹತೋಟಿಯಲ್ಲಿಟ್ಟುಕೊಂಡರೆ ಮಾತ್ರ ನೆಮ್ಮದಿ ಕಾಣಲು ಸಾಧ್ಯೆ.. ಕೋಪವನ್ನು ನಿಯಂತ್ರಿಸಿಕೊಳ್ಳೋದು ಹೇಗೆ ಅನ್ನೋದನ್ನು ನೋಡೋಣ..

ಇದನ್ನೂ ಓದಿ; ರಾಜ್ಯದ ಹಲವೆಡೆ ವರುಣನ ಸಿಂಚನ; ಗಾಳಿ ಸಹಿತ ಮಳೆಯ ಅಬ್ಬರ!

ಉಸಿರಾಟದ ವ್ಯಾಯಾಮ ಮಾಡಿ;
ಕೋಪ ಬಂದಾಗ ಕೊಂಚ ಆ ಪರಿಸ್ಥಿತಿಯಿಂದ ದೂರವಿರಬೇಕು. ಕೋಪವನ್ನು ನಿಯಂತ್ರಿಸಿ ಮನಸ್ಸನ್ನು ಶಾಂತಗೊಳಿಸಲು  ಉಸಿರಾಟದ ವ್ಯಾಯಾಮಗಳನ್ನು ಸತತವಾಗಿ ಮಾಡಬೇಕು.. ಇದರಿಂದ ಕೋಪವನ್ನು ಹತೋಟಿಗೆ ತರಬಹುದು.

ವಿಷಯಾಂತರವಾಗುವುದು ಒಳ್ಳೆಯದು;

ಕೋಪ ಬಂದಾಗ, ಆ ವಿಷಯ ಬಿಟ್ಟು ಬೇರೆ ವಿಷಯದ ಕಡೆ ಯೋಚನೆ ಮಾಡಬೇಕು.. ಜೊತೆಗೆ ದೇಹಕ್ಕೆ ವಿಶ್ರಾಂತಿ ನೀಡಬೇಕು.. ಕೋಪ ಬಂದಾಗ ಅದನ್ನು ಯಾರ ಮೇಲೂ ತೋರಿಸಿಕೊಳ್ಳದೆ, ಆದಷ್ಟು ಆ ವಿಷಯ ಮರೆತು ಬೇರೆ ಕಡೆ ಗಮನ ಕೊಡಬೇಕು.. ಜೊತೆಗೆ ಸ್ವಲ್ಪ ಮಲಗುವುದು ಅಥವಾ ಸಂಗೀತ ಕೇಳುವುದು ಮಾಡಬೇಕು. ಕೋಪಕ್ಕೆ ಕಾರಣ ಅಥವಾ ಸನ್ನಿವೇಶವನ್ನು ಸ್ವಲ್ಪ ಹೊತ್ತು ಮರೆಯಬೇಕು..

ಇದನ್ನೂ ಓದಿ; ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರ; ನರೇಂದ್ರ ಮೋದಿ

ಕೋಪ ಬಂದಾಗ ಯೋಚಿಸಿ ಮಾತನಾಡಿ;

ಕೋಪದಲ್ಲಿ ಮಾತನಾಡುವ ವಿಷಯಗಳು ನಂತರ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ, ಯಾವುದೇ ಕೆಲಸವನ್ನು ಮಾಡುವ ಮೊದಲು ಯೋಚಿಸಿ ಮತ್ತು ನಿರ್ಧಾರ ತೆಗೆದುಕೊಳ್ಳಿ. ತಪ್ಪುಗಳನ್ನು ಮಾಡುವುದನ್ನು ಮತ್ತು ಕೋಪದಿಂದ ಮಾತನಾಡುವುದನ್ನು ನಿಯಂತ್ರಣ ಮಾಡಿಕೊಳ್ಳಿ.. ಕೋಪದ ನಂತರ ಬರುವ ಸಮಸ್ಯೆಗಳ ಬಗ್ಗೆ ಯೋಚಿಸಿದರೆ, ನೀವು ಕೋಪಗೊಳ್ಳುವುದೇ ಇಲ್ಲ..

ಯೋಚಿಸಿ ನೋವು ವ್ಯಕ್ತಪಡಿಸಿ;

ಸಮಸ್ಯೆ ಅನಿಸಿದಾಗ ಒಮ್ಮೆಲೆ ಕೋಪ ಮಾಡಿಕೊಳ್ಳುವ ಬದಲು, ಅದರಿಂದ ಮುಂದೆ ಏನಾಗಬಹುದು ಎಂಬುದನ್ನು ಮೊದಲೇ ಯೋಚನೆ ಮಾಡಿ. ಅನಂತರವೇ ನೀವು ನಿಮ್ಮ ನೋವನ್ನು ವ್ಯಕ್ತಪಡಿಸಿ.  ಇದರಿಂದ ಇತರರಿಗೆ ಆಗುವ ಹಾನಿಯನ್ನು ತಡೆಯಬಹುದು. ಆದ್ದರಿಂದ, ನಿಮ್ಮ ನೋವನ್ನು ಮುಂಚಿತವಾಗಿ ತೋರ್ಪಡಿಸಲು ಹೋಗಬೇಡಿ..

ಇದನ್ನೂ ಓದಿ; ಸಾಲ ಪಡೆಯಲು ಚಿಕ್ಕಪ್ಪನ‌ ಹೆಣ ಬ್ಯಾಂಕಿಗೆ ತಂದ ಮಹಿಳೆ

ಶಪಿಸುತ್ತಾ ಸಂಬಂಧಗಳನ್ನು ಕಳೆದುಕೊಳ್ಳಬೇಡಿ;
ಕೋಪದಲ್ಲಿ, ಅನೇಕ ಜನರು ಇತರರನ್ನು ಶಪಿಸುತ್ತಾರೆ ಮತ್ತು ಅಸಂಬದ್ಧವಾಗಿ ಮಾತನಾಡುತ್ತಾರೆ. ಹಾಗೆ ಮಾಡುವುದರಿಂದ ಆ ಮಾತುಗಳು ನಂತರ ತುಂಬಾ ನೋಯಿಸುತ್ತವೆ. ಬದಲಾಗಿ ನಿಮಗೆ ಅನಿಸಿದ್ದನ್ನು ಹೇಳಲು ಪ್ರಯತ್ನಿಸಿ. ಅದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಶಾಂತಚಿತ್ತದಿಂದ ವಿವರಿಸಿ ಮತ್ತು ಎದುರಿನವರು ಕೇಳದಿದ್ದಾಗ ಆದಷ್ಟು ಮೌನ ವಹಿಸಿ.

ಹಾಸ್ಯ ನಮ್ಮ ನೋವನ್ನು ಕರೆಸುತ್ತದೆ;
ನಮಗೆ ನೋವು ಮತ್ತು ಕಿರಿಕಿರಿಯನ್ನು ಉಂಟುಮಾಡುವ ವಿಷಯಗಳು ನಮ್ಮನ್ನು ಕೋಪಗೊಳ್ಳುವಂತೆ ಮಾಡುತ್ತದೆ. ಆದ್ದರಿಂದ, ಹಾಸ್ಯದಿಂದ ಅವುಗಳನ್ನು ತೊಡೆದು ಹಾಕಿ.. ಆದಷ್ಟು ನಗುತ್ತಲೇ ಇರಿ. ಹಾಸ್ಯ ಭರಿತವೀಡಿಯೊಗಳನ್ನು ವೀಕ್ಷಿಸಿ. “ಆಲ್ ಗುಡ್” ಮತ್ತು “ಟೇಕ್ ಇಟ್ ಈಸಿ” ನಂತಹ ಪದಗಳನ್ನು ಕೋಪ ಬಂದಾಗ ಮನಸ್ಸಿನಲ್ಲಿ ಹೇಳಿಕೊಳ್ಳಿ.  ಮೌನವಾಗಿ ಕುಳಿತು ಹಾಡುಗಳನ್ನು ಕೇಳಿ ಆನಂದಿಸಿ. ಇದರಿಂದ ಮನಸ್ಸು ತುಂಬಾ ನಿರಾಳವಾಗುತ್ತದೆ.

ಪರಿಣಿತರ ಸಲಹೆ ಪಡೆಯಿರಿ;
ನಾವು ಎಷ್ಟೇ ಪ್ರಯತ್ನಿಸಿದರೂ ನಮ್ಮ ಕೋಪವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ, ತಜ್ಞರ ಸಲಹೆಯನ್ನು ಖಂಡಿತವಾಗಿ ತೆಗೆದುಕೊಳ್ಳಿ. ಅವರು ಹೇಳುವುದನ್ನು ಅನುಸರಿಸಿ.

ಇದನ್ನೂ ಓದಿ; ಮೃತ ನೇಹಾ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Share Post