EconomyNational

LIVE UPDATES: ಬಜೆಟ್‌ ಅಧಿವೇಶನ; ನಿರ್ಮಲಾ ಸೀತಾರಾಮನ್‌ ಬಜೆಟ್‌ ಭಾಷಣ

ನಿರ್ಮಲಾ ಸೀತಾರಾಮನ್‌ ಬಜೆಟ್‌ ಭಾಷಣ ಶುರು ಮಾಡಿದ್ದಾರೆ. ಮೊದಲಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣಕ್ಕೆ ಪ್ರತಿಪಕ್ಷಗಳ ಸದಸ್ಯರಿಂದ ಅಡ್ಡಿಪಡಿಸುವ ಪ್ರಯತ್ನ ನಡೆಯಿತು. ಭಾರತ್ ಜೋಡೋ ಎಂದು ಕೆಲವರು ಘೋಷಣೆಗಳನ್ನು ಕೂಗಿದರು.

ಬಜೆಟ್‌ ಭಾಷಣದ ವಿವರ;

* ಹಳೆಯ ಅಥವಾ ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳುವ ಯಾವುದೇ ಭಾರತೀಯ ವರ್ಷಕ್ಕೆ 7 ಲಕ್ಷ ಆದಾಯ ಪಡೆಯುತ್ತಿದ್ದರೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ

* ಶೇ 7.5 ಬಡ್ಡಿಯೊಂದಿಗೆ ಗರಿಷ್ಠ 2 ಲಕ್ಷ ರೂ.ವರೆಗೆ ಠೇವಣಿ ಮಾಡಲು ಮಹಿಳಾ ಸಮ್ಮಾನ್‌ ಅಡಿ ಅವಕಾಶ
* ಮೊಬೈಲ್‌ ಬಿಡಿಭಾಗಗಳ ಮೇಲಿನ ತೆರಿಗೆ ಕಡಿತ
* ಅಡುಗೆಮನೆಯ ಎಲೆಕ್ಟ್ರಿಕ್ ಚಿಮಣಿ ಮೇಲಿನ ಕಸ್ಟಮ್ಸ್ ಸುಂಕ ಶೇ 7.5 ರಿಂದ ಶೇ 15ಕ್ಕೆ ಏರಿಕೆ
* ಮೊಬೈಲ್ ಫೋನ್ ಉತ್ಪಾದನೆಯು 2014-15ರಲ್ಲಿ 5.8 ಕೋಟಿ ಯುನಿಟ್‌ಗಳಿಂದ ಕಳೆದ ಹಣಕಾಸು ವರ್ಷದಲ್ಲಿ 31 ಕೋಟಿ ಯೂನಿಟ್‌ಗಳಿಗೆ ಏರಿಕೆಯಾಗಿದೆ
* ಟಿವಿ ಪ್ಯಾನಲ್‌ಗಳ ತೆರೆದ ಸೆಲ್‌ಗಳ ಭಾಗಗಳ ಮೇಲಿನ ಕಸ್ಟಮ್ಸ್ ಸುಂಕ ಶೇ. 2.5ಕ್ಕೆ ಇಳಿಕೆ.
* ಮೊಬೈಲ್ ಫೋನ್ ತಯಾರಿಕೆಗೆ ಬೇಕಾದ ವಸ್ತುಗಳ ಮೇಲಿನ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲು ತೀರ್ಮಾನ
* ‘ಇವಿ’ಗಳನ್ನು ಪ್ರೋತ್ಸಾಹಿಸಲು ಹೆಚ್ಚಿಸಲು ಪರೋಕ್ಷ ತೆರಿಗೆಯನ್ನು ಪ್ರಸ್ತಾಪ
* ಮುಂದಿನ ಹಣಕಾಸು ವರ್ಷಕ್ಕೆ 23.3 ಲಕ್ಷ ಕೋಟಿ ರೂಪಾಯಿ ತೆರಿಗೆ ಸ್ವೀಕೃತಿ ಲೆಕ್ಕಾಚಾರ

* ಅಂಚೆ ಕಚೇರಿಗಳ ಮೂಲಕ ನಿರ್ವಹಿಸುವ ಮಾಸಿಕ ಆದಾಯ ಯೋಜನೆಯ ಹೂಡಿಕೆ ಮಿತಿಯನ್ನು 4.5ಲಕ್ಷದಿಂದ 9 ಲಕ್ಷಕ್ಕೆ ಹೆಚ್ಚಳ
* ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆ ಪ್ರಕಟ
* 2 ವರ್ಷಗಳ ಅವಧಿಯ ಈ ಯೋಜನೆಗೆ ಶೇ7.5 ಬಡ್ಡಿ ನಿಗದಿ
* ಯಾವುದು ದುಬಾರಿ?: ಸಿಗರೇಟ್, ಆಮದು ಮಾಡಿಕೊಂಡ ರಬ್ಬರ್, ಚಿನ್ನ, ಬೆಳ್ಳಿ, ಬ್ರಾಂಡೆಡ್ ಬಟ್ಟೆಗಳು, ಪ್ಲಾಟಿನಮ್, ವಜ್ರ
* ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ರೈತರಿಗೆ 2 ಲಕ್ಷದಷ್ಟು ಸಾಲವನ್ನು ನಗದು ರೂಪದಲ್ಲಿ ನೀಡಲು, ಕಟ್ಟಿಸಿಕೊಳ್ಳಲು ಅವಕಾಶ

* ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರವು ‘ದೇಖೋ ಅಪ್ನಾ ದೇಶ್’ ಉಪಕ್ರಮವನ್ನು ಪ್ರಾರಂಭ
* ಎಂಎಸ್‌ಎಂಇಗಳಿಗೆ ಪರಿಷ್ಕೃತ ಸಾಲ ಖಾತ್ರಿ ಯೋಜನೆಯನ್ನು ಏಪ್ರಿಲ್ 1 ರಿಂದ ಪ್ರಾರಂಭ
* ʻಒಂದು ಜಿಲ್ಲೆ ಒಂದು ಉತ್ಪನ್ನ’ ವಸ್ತುಗಳು ಮತ್ತು ಜಿಐ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕಾಗಿ ಯೂನಿಟಿ ಮಾಲ್ ಸ್ಥಾಪಿಸಲು ರಾಜ್ಯ ಸರ್ಕಾರಗಳಿಗೆ ಉತ್ತೇಜನ
* ಯುವಕರ ಕೌಶಲ್ಯ ತರಬೇತಿಗಾಗಿ ‘ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0’ ಅನ್ನು ಪ್ರಾರಂಭಿಸಲಾಗುವುದು
* ಪ್ರವಾಸೋದ್ಯಮವನ್ನು ಉತ್ತೇಜಿಸಲು ‘ಚಾಲೆಂಜ್ ಮೋಡ್’ ಮೂಲಕ 50 ಸ್ಥಳಗಳನ್ನು ಆಯ್ಕೆ ಮಾಡಲು ಸರ್ಕಾರ ನಿರ್ಧಾರ

* 2026ರ ಹೊತ್ತಿಗೆ ವಿತ್ತೀಯ ಕೊರತೆಯನ್ನು ಶೇ.3.5ಕ್ಕೆ ಇಳಿಸಲು ಅಗತ್ಯ ಕ್ರಮ
* ಪ್ರಸಕ್ತ ವರ್ಷದ (2022-23) ವಿತ್ತೀಯ ಕೊರತೆ ಶೇ.6.4ರಷ್ಟಿದೆ. ಮುಂದಿನ ಆರ್ಥಿಕ ವರ್ಷದಲ್ಲಿ (2023-24) ವಿತ್ತೀಯ ಕೊರತೆಯನ್ನು ಶೇ 5.9ಕ್ಕೆ ಮಿತಗೊಳಿಸಲಾಗುವುದು

* ಪರ್ಯಾಯ ರಸಗೊಬ್ಬರ ಬಳಸುವಂತೆ ರಾಜ್ಯಗಳನ್ನು ಉತ್ತೇಜಿಸಲು PM-PRANAM ಎಂಬ ಕಾರ್ಯಕ್ರಮ ಜಾರಿ
* ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಲು 1 ಕೋಟಿ ರೈತರಿಗೆ ಸರ್ಕಾರ ನೆರವು
* ಕರಾವಳಿಯುದ್ದಕ್ಕೂ ಮ್ಯಾಂಗ್ರೋವ್ ಕಾಡುಗಳನ್ನು ಬೆಳೆಸಲು ಸರ್ಕಾರ ಪ್ರೋತ್ಸಾಹ

* ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಿರಿಯ ನಾಗರಿಕರ ಹೂಡಿಕೆಗೆ ಇದ್ದ 15 ಲಕ್ಷದ ಮಿತಿಯನ್ನು ಈ ಬಾರಿಯಿಂದ 30 ಲಕ್ಷಕ್ಕೆ ಹೆಚ್ಚಳ

* ಪರಿಸರ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ‘ಗ್ರೀನ್‌ ಕ್ರೆಡಿಟ್‌’ ಎಂಬ ಕಾರ್ಯಕ್ರಮವನ್ನು ಜಾರಿ
* ಕಂಪನಿಗಳಿಂದ ಪರಿಸರ ಸಂರಕ್ಷಣೆ ಕ್ರಮಗಳನ್ನು ಉತ್ತೇಜಿಸಲು ಈ ಯೋಜನೆ ಕಾರ್ಯಗತ

* ಎಲ್ಲಾ ನಗರ ಮತ್ತು ಪಟ್ಟಣಗಳು ಸಂಪೂರ್ಣವಾಗಿ ತೆರೆದ ಚರಂಡಿಗಳು ಹಾಗೂ ಮಲಗುಂಡಿಗಳಿಂದ ಮುಕ್ತವಾಗಬೇಕು
* ಮ್ಯಾನ್​ಹೋಲ್ ಮತ್ತು ಮಿಷನ್ ಹೋಲ್​ ಮಾದರಿಗೆ ಬರಬೇಕು. ಇದಕ್ಕಾಗಿ ವಿಶೇಷ ಯೋಜನೆ ರೂಪಿಸಲಾಗುವುದು

* ವಾಣಿಜ್ಯ ವಿವಾದಗಳ ಇತ್ಯರ್ಥಕ್ಕೆ ‘ವಿವಾದ್ ಸೆ ವಿಶ್ವಾಸ-2’ ಅಡಿಯಲ್ಲಿ ಮತ್ತೊಂದು ‘ವಿವಾದ ಪರಿಹಾರ ಕಾರ್ಯಕ್ರಮ’ ಜಾರಿ

* ಸಾರಿಗೆ ಮೂಲಸೌಕರ್ಯಕ್ಕೆ ಸಂಬಂಧಿಸಿದ 100 ನಿರ್ಣಾಯಕ ಯೋಜನೆಗಳನ್ನು ಅನುಷ್ಠಾನಕ್ಕಾಗಿ ಗುರುತು

* ಹೆಚ್ಚಿನ ಮಾಲಿನ್ಯವನ್ನುಂಟು ಮಾಡುವ ಹಳೇ ಸರ್ಕಾರಿ ವಾಹನಗಳ ಬದಲಾವಣೆಗೆ ಅಗತ್ಯ ಕ್ರಮ
* ರಾಜ್ಯ ಸರ್ಕಾರಗಳ ಸುಪರ್ದಿಯಲ್ಲಿರುವ ಹಳೇ ವಾಹನಗಳು ಮತ್ತು ಆಂಬುಲೆನ್ಸ್​ಗಳ ಬದಲಾವಣೆಗೆ ನೆರವು

* ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿಯನ್ನು ರಚಿಸಲು ನಿರ್ಧಾರ
* ನಿರ್ದಿಷ್ಟಪಡಿಸಿದ ಸರ್ಕಾರಿ ಏಜೆನ್ಸಿಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ ಸಾಮಾನ್ಯ ಗುರುತು ಚೀಟಿಯಾಗಿ ಪ್ಯಾನ್‌ ಬಳಕೆ

* ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ ಒದಗಿಸಲಾಗುತ್ತದೆ
* ರಾಜ್ಯಗಳ ಬಂಡವಾಳ ವೆಚ್ಚದ ಮಿತಿಯನ್ನು1.3 ಲಕ್ಷ ಕೋಟಿಗೆ ಹೆಚ್ಚಳ

* ಮುಂದಿನ ಹಣಕಾಸು ವರ್ಷದಲ್ಲಿ ರೈಲ್ವೆ ಇಲಾಖೆಯಲ್ಲಿ 2.40 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ

* ಪಿಎಂ ಮತ್ಸ್ಯ ಸಂಪದ ಯೋಜನೆಯಡಿ 6,000 ಕೋಟಿ ರೂಪಾಯಿ ಮೊತ್ತದ ಅನುದಾನವನ್ನು ಮೀನುಗಾರಿಕೆಯ ಉತ್ತೇಜನಕ್ಕೆ ಮೀಸಲು
* ಪಿಎಂ ವಿಶ್ವಕರ್ಮ ಕೌಶಲ ಸನ್ಮಾನ್ ಯೋಜನೆಯಡಿ ಪಾರಂಪರಿಕ ಕರಕುಶಲಕರ್ಮಿಗಳಿಗೆ ನೆರವಾಗಲು ಕಾರ್ಯಕ್ರಮ
* ಸಣ್ಣ ಉದ್ದಿಮೆಗಳ ಅಭಿವೃದ್ಧಿಗೆ ರೂಪಿಸಿರುವ ಕಾರ್ಯಕ್ರಮಗಳೊಂದಿಗೆ ಇವರನ್ನು ಜೋಡಿಸಿ, ಕುಶಲಕರ್ಮಿಗಳ ಅರ್ಥಿಕ ಸ್ಥಿತಿಗತಿ ಸುಧಾರಿಸಲು ಕ್ರಮ

* ಎಲ್ಲಾ ನಾಗರಿಕರಿಗೆ ಉತ್ತಮ ಗುಣಮಟ್ಟದ ಮತ್ತು ಘನತೆಯ ಬದುಕನ್ನು ಖಾತ್ರಿಪಡಿಸಲು 2014 ರಿಂದ ಸರ್ಕಾರದ ಪ್ರಯತ್ನ
* ತಲಾ ಆದಾಯವು ದುಪ್ಪಟ್ಟಾಗಿದೆ. 1.97 ಲಕ್ಷಕ್ಕೆ ತಲಾದಾಯ ಏರಿಕೆಯಾಗಿದೆ. ಈ 9 ವರ್ಷಗಳಲ್ಲಿ, ಭಾರತದ ಆರ್ಥಿಕತ 10 ರಿಂದ 5ನೇ ಸ್ಥಾನಕ್ಕೇರಿಕೆ
* 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿರುವ 740 ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಮೂರು ವರ್ಷಗಳಲ್ಲಿ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿ ನೇಮಕ
* ಪ್ರಧಾನಮಂತ್ರಿ ಆವಾಸ್ ಯೋಜನೆಯ ವೆಚ್ಚವನ್ನು ಶೇ 66ಕ್ಕೆ ಅಂದರೆ 79,000 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ

* ಮಕ್ಕಳು ಮತ್ತು ಹದಿಹರೆಯದವರಿಗೆ ಉತ್ತಮ ಪುಸ್ತಕಗಳು ಸುಲಭವಾಗಿ ಸಿಗುವಂತೆ ಮಾಡುವ ಉದ್ದೇಶ
* ರಾಷ್ಟ್ರೀಯ ಡಿಜಿಟಲ್ ಲೈಬ್ರೆರಿ ಯೋಜನೆ ಆರಂಭಿಸಲಾಗುವುದು

* ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು
* 2014ರ ನಂತರ ಆರಂಭವಾಗಿರುವ 157 ವೈದ್ಯಕೀಯ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜು ಆರಂಭಿಸಲಾಗುವುದು
* ಬರಪೀಡಿತ ಪ್ರದೇಶಗಳಲ್ಲಿ ಸುಸ್ಥಿರ ಸೂಕ್ಷ್ಮ ನೀರಾವರಿ ಒದಗಿಸುವ ಗುರಿ
* ಭದ್ರಾ ಮೇಲ್ಡಂಡೆ ಯೋಜನೆಗೆ 5,300 ಕೋಟಿ ರೂಪಾಯಿಗಳ ಕೇಂದ್ರ ನೆರವು

* ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಳ ಹಾಗೂ ಬೆಳೆಪದ್ಧತಿ ಸುಧಾರಣೆಗಾಗಿ ‘ಶುದ್ಧ ಸಸಿ ಕಾರ್ಯಕ್ರಮ’

* ರಾಗಿ ಸೇರಿದಂತೆ ಸಿರಿಧಾನ್ಯಗಳ ಬೆಳೆ ಪದ್ಧತಿ ಸುಧಾರಣೆಗೆ ಸಂಶೋಧನೆ
* ಉತ್ತಮ ಬೆಳೆ ಪದ್ಧತಿಯ ದಾಖಲಾತಿಗಾಗಿ ‘ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಮಿಲೆಟ್ ರೀಸರ್ಚ್’ ಸಂಸ್ಥೆಗೆ ಅಗತ್ಯ ನೆರವು

* ಅಮೃತ ಕಾಲದಲ್ಲಿ ನಾವು ತಂತ್ರಜ್ಞಾನದಿಂದ ಮುನ್ನಡೆಯುವ, ಜ್ಞಾನ ಆಧರಿತ ಆರ್ಥಿಕತೆ ನಿರ್ಮಿಸಲು ಕ್ರಮ
* ಸಾರ್ವಜನಿಕ ಹಣಕಾಸು ನಿರ್ವಹಣೆ ಮತ್ತು ಹಣಕಾಸು ಕ್ಷೇತ್ರದಲ್ಲಿ ಸುಧಾರಣೆಗೆ ಕ್ರಮ
* ಮಹಿಳಾ ಸ್ವಸಹಾಯ ಸಂಘಗಳಿಗೆ ಹಲವು ರೀತಿಯಲ್ಲಿ ನೆರವಾಗಲು ಕ್ರಮ
* ಕಚ್ಚಾವಸ್ತುಗಳ ಪೂರೈಕೆ, ಬ್ರಾಂಡಿಂಗ್ ಮತ್ತು ಸಿದ್ಧವಸ್ತುಗಳಿಗೆ ಮಾರುಕಟ್ಟೆ ರೂಪಿಸಲು ಸರ್ಕಾರ ನೆರವು

*ಕೇಂದ್ರ ಬಜೆಟ್​ಗೆ 7 ಅದ್ಯತೆಗಳಿವೆ. 1. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, 2. ಅಂಚಿನಲ್ಲಿರುವವರಿಗೆ ಸವಲತ್ತು, 3. ಮೂಲಸೌಕರ್ಯ, 4. ಸಾಮರ್ಥ್ಯದ ಸದ್ಬಳಕೆ, 5. ಪರಿಸರ ಸ್ನೇಹಿ ಅಭಿವೃದ್ಧಿ, 6. ಯುವಶಕ್ತಿಗೆ ಉತ್ತೇಜನ, 7.ಆರ್ಥಿಕ ಸುಧಾರಣೆ

* ಕೃಷಿ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಪರಿಚಯಿಸಲಾಗುತ್ತಿದೆ. ಉತ್ಪಾದನೆ ಹೆಚ್ಚಳ, ಹತ್ತಿ ಬೆಳೆಯ ಇಳುವರಿ ವೃದ್ಧಿ ಸೇರಿದಂತೆ ಕೃಷಿ ಜಗತ್ತಿನ ಪ್ರಗತಿಗೆ ಪೂರಕವಾಗಿ ವಿಶೇಷ ಕೃಷಿ ಪ್ರಗತಿನಿಧಿ ಆರಂಭಿಸಲಾಗುವುದು

* ದೇಶದ ಆರ್ಥಿಕತೆ ದೊಡ್ಡಮಟ್ಟದಲ್ಲಿ ಪ್ರಗತಿ ಕಂಡಿದೆ. 9 ವರ್ಷಗಳಲ್ಲಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ನಾವು ಜಿಗಿದಿದ್ದೇವೆ.
* ಕೋವಿಡ್‌ ಸಮಯದಲ್ಲಿ ಎಂಬತ್ತು ಕೋಟಿ ಜನರಿಗೆ ಆಹಾರ ಧಾನ್ಯಗಳನ್ನು ಪೂರೈಸಲಾಯಿತು

*  ಹಲವು ಸವಾಲುಗಳ ನಡುವೆ ಭಾರತ ಉಜ್ವಲ ಭವಿಷ್ಯದತ್ತ ಹೆಜ್ಜೆ ಹಾಕುತ್ತಿದೆ. ಇದನ್ನು ವಿಶ್ವಮಟ್ಟದ ಹಲವು ಸಂಸ್ಥೆಗಳು ಗುರುತಿಸಿವೆ

* ಜಾಗತಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಭಾರತಕ್ಕೆ ಜಿ-20 ನಾಯಕತ್ವ ಸಿಕ್ಕಿದೆ. ವಸುಧೈವ ಕುಟುಂಬಕಂ ಮಂತ್ರದ ಆಶಯ ಸಾಕಾರಗೊಳಿಸಲು ಶ್ರಮಿಸುತ್ತಿದ್ದೇವೆ.

* ಅಂತ್ಯೋದಯ ಯೋಜನೆಯಡಿ ಡಿಸೆಂಬರ್ 2023ರವರೆಗೆ ಉಚಿತ ಆಹಾರ ಧಾನ್ಯಗಳ ವಿತರಣೆಯನ್ನು ಮುಂದುವರಿಕೆ

* ಜಾಗತಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಭಾರತಕ್ಕೆ ಜಿ-20 ನಾಯಕತ್ವ ಲಭಿಸಿದೆ. ವಸುಧೈವ ಕುಟುಂಬಕಂ ಮಂತ್ರದ ಆಶಯ ಸಾಕಾರಗೊಳಿಸಲು ನಾವು ಶ್ರಮಿಸುತ್ತಿದ್ದೇವೆ.

Share Post