LifestyleNational

ಯುದ್ಧದಿಂದ ದೂರವಾದ ಪ್ರೇಯಸಿ; ಮದುವೆಯಾಗದೆ ಉಳಿದ ಟಾಟಾ!

ಮುಂಬೈ; ರತನ್‌ ಟಾಟಾ ಅವರು ಮದುವೆಯಾಗದೆಯೇ ಉಳಿದಿದ್ದರು.. ಇದಕ್ಕೆ ಕಾರಣ ಮಾತ್ರ ನಿಗೂಢವಾಗಿಯೇ ಇತ್ತು.. ಆದ್ರೆ, ಸಂದರ್ಶನವೊಂದರಲ್ಲಿ ಮದುವೆಯಾಗದೇ ಉಳಿದಿದ್ದಕ್ಕೆ ರತನ್‌ ಟಾಟಾ ಕಾರಣ ತಿಳಿಸಿದ್ದರು.. ತನ್ನ ಪ್ರೇಮ ಕತೆಯನ್ನು ಹೇಳಿದ್ದರು ರತನ್‌ ಟಾಟಾ ಅವರು 1960ರ ಸಂದರ್ಭದಲ್ಲಿ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.. ಈ ವೇಳೆ ಯುವತಿಯೊಬ್ಬಳನ್ನು ಪ್ರೀತಿ ಮಾಡಿದ್ದರು.. ಅವರಿಬ್ಬರೂ ಪರಸ್ಪರ ಮದುವೆಯಾಗಲು ನಿರ್ಧಾರ ಮಾಡಿದ್ದರು.. ರತನ್‌ ಟಾಟಾ ಅವರು ಪ್ರೀತಿಸಿ ಯುವತಿಯನ್ನು ಮದುವೆಯಾಗಿ ಅಮೆರಿಕದಲ್ಲಿ ಉಳಿಯಲು ನಿರ್ಧಾರ ಕೂಡಾ ಮಾಡಿದ್ದರು.. ಆದ್ರೆ ಭಾರತ-ಚೀನಾ ಯುದ್ಧ ಅವರನ್ನು ದೂರ ಮಾಡಿತು.
ಅಮೆರಿಕ ಯುವತಿಯೊಂದಿಗೆ ಪ್ರೀತಿಯಲ್ಲಿದ್ದಾಗಲೇ ರತನ್‌ ಟಾಟಾ ಅವರಿಗೆ ಆರೋಗ್ಯ ಹದಗೆಟ್ಟಿತ್ತು.. ಹೀಗಾಗಿ ರೆಸ್ಟ್‌ ತೆಗೆದುಕೊಳ್ಳಲೆಂದು ಅವರು ಭಾರತಕ್ಕೆ ಬಂದಿದ್ದರು.. ತನ್ನ ಗೆಳತಿ ಕೂಡಾ ಭಾರತಕ್ಕೆ ಬರುತ್ತಾಳೆ ಎಂದು ಅವರು ಕಾದಿದ್ದರು.. ಆದ್ರೆ ಅದೇ ಸಮಯದಲ್ಲಿ ಅಂದರೆ 1962ರಲ್ಲಿ ಭಾರತ ಹಾಗೂ ಚೀನಾ ಯುದ್ಧ ಪ್ರಾರಂಭವಾಯಿತು.. ಇದರಿಂದಾಗಿ ತನ್ನ ಗೆಳತಿಯ ಕುಟುಂಬದವರು ಭಾರತಕ್ಕೆ ತಮ್ಮ ಮಗಳನ್ನು ಕಳುಹಿಸೋದಕ್ಕೆ ನಿರಾಕರಣೆ ಮಾಡಿದರು.. ಇದರಿಂದಾಗಿ ಅವರ ಪ್ರೇಮ ಅಂತ್ಯವಾಯಿತು.. ಆದರೂ ಕೂಡಾ ರತನ್‌ ಟಾಟಾ ಅವರು ಮದುವೆಯಾಗದೇ ಹಾಗೆಯೇ ಉಳಿದರು..
ನಂತರ ಅವರು ಅವರ ಸಂಪೂರ್ಣ ಬದುಕನ್ನು ಉದ್ಯಮಗಳನ್ನು ಬೆಳೆಸುವುದು, ದಾನ ಧರ್ಮಗಳನ್ನು ಮಾಡುವುದು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಕಳೆದರು.. ಪದ್ಮವಿಭೂಷಣ ಗೌರವ ಪಡೆಯುವುದರ ತನಕ ಅವರು ಬೆಳೆದು ನಿಂತರು.. ಟಾಟಾ ಎಂಬ ದೈತ್ಯ ಉದ್ಯಮವನ್ನು ಅವರು ಬೆಳೆಸಿದರು..

Share Post