ಗಡಿಯಲ್ಲಿ AK-47 ರೈಫಲ್ಸ್, ಹೆರಾಯಿನ್ ವಶ
ಜಮ್ಮು: ಗಡಿ ಭ್ರದತಾ ಪಡೆ ಸಿಬ್ಬಂದಿ ಜಮ್ಮು ಪ್ರದೇಶದ ಸಾಂಬಾ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿದ್ದು, ದುಷ್ಕರ್ಮಿಗಳು ಸಾಗಿಸುತ್ತಿದ್ದ ಮಾರಕ ಆಯುಧಗಳು ಹಾಗೂ ಹೆರಾಯಿನ್ ಡ್ರಗ್‌ನ್ನು ವಶಪಡಿಸಿಕೊಂಡಿದ್ದಾರೆ. ಸಾಂಬಾ ಜಿಲ್ಲೆಯ ಚಾಂಬಿಯಾಲ್ ಎಂಬ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಮಾಹಿತಿಯೊಂದರ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ, ಮೂರು Ak-47 ರೈಫಲ್‌ಗಳು, ನಾಲ್ಕು ಪಿಸ್ತೂಲ್‌ಗಳು ಹಾಗೂ ಐದು ಕೆಜಿ ಹೆರಾಯಿನ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಗಡಿ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಕೆಲ ತಿಂಗಳುಗಳಿಂದ ಮಾರಕ ಆಯುಧಗಳು ಹಾಗೂ ಡ್ರಗ್ಸ್‌ನ್ನು ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾದಿಂದ ಭಾರತಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಕಳೆದ ಎರಡು ತಿಂಗಳಿಂದ ಹಲವಾರು ಕಡೆ ಇಂತಹ ಪ್ರಕರಣಗಳು ಕಂಡು ಬಂದಿದ್ದು, ಹತ್ತಾರು ಕೆಜಿ ಮಾದಕ ವಸ್ತುಗಳನ್ನು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.