CinemaNational

ಸಲ್ಮಾನ್‌ ಮದುವೆಗೂ ರಾಖಿಗೂ ಏನು ಸಂಬಂಧ; ರಾಖಿ ಸಾವಂತ್‌ ಚಪ್ಪಲಿ ಹಾಕಲ್ಲ ಎಂದಿದ್ದೇಕೆ..?

ಬೆಂಗಳೂರು; ಬಾಲಿವುಡ್‌ ಖ್ಯಾತ ನಟ ಸಲ್ಮಾನ್‌ ಖಾನ್‌ ವಯಸ್ಸು ಐವತ್ತು ದಾಟಿದೆ. ಆದ್ರೆ ಅವರಿಗೆ ಇನ್ನೂ ಮದುವೆಯಾಗಿಲ್ಲ. ಯಾವಾಗ ಮದುವೆ ಅನ್ನೋ ಕುತೂಹಲ ಅಂತೂ ಅಭಿಮಾನಿಗಳಲ್ಲಿ ಇದ್ದೇ ಇದೆ. ಈ ನಡುವೆ ನಟಿ ರಾಖಿ ಸಾವಂತ್‌ ಶಪಥವೊಂದು ಮಾಡಿದ್ದು, ಚರ್ಚೆಗೆ ಕಾರಣವಾಗಿದೆ. ಸಲ್ಮಾನ್‌ ಖಾನ್‌ ಮದುವೆ ಆಗೋವರೆಗೂ ತಾನು ಚಪ್ಪಲಿ ಧರಿಸೋದಿಲ್ಲ ಅನ್ನೋದು ರಾಖಿ ಸಾವಂತ್‌ ಶಪಥ.

ಮುಂಬೈ ವಿಮಾನ ನಿಲ್ದಾಣಕ್ಕೆ ರಾಖಿ ಸಾವಂತ್‌ ಬರಿಗಾಲಲ್ಲೇ ನಡೆದುಬಂದಿದ್ದರು. ಈ ವೇಳೆ ಯಾಕೆ ಚಪ್ಪಲಿ ಏನಾಯ್ತು ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರ ಕೊಟ್ಟಿರುವ ರಾಖಿ ಸಾವಂತ್‌, ನಾನು ಸಲ್ಮಾನ್‌ ಖಾನ್‌ ಮದುವೆ ಆಗೋವರೆಗೂ ಚಪ್ಪಲಿ ಹಾಕದಿರಲು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದಾರೆ.

Share Post