EconomyLifestyle

ತಿರುಪತಿ ತಿಮ್ಮಪ್ಪನಿಗೆ ಭರ್ಜರಿ ಆದಾಯ; ಜುಲೈನಲ್ಲಿ 125 ಕೋಟಿ ರೂ. ಹುಂಡಿನ ಹಣ ಸಂಗ್ರಹ

ತಿರುಪತಿ; ತಿರುಪತಿ ತಿರುಮಲ ತಿಮ್ಮಪ್ಪನಿಗೆ ಪ್ರಪಂಚದಾದ್ಯಂತ ಭಕ್ತರಿದ್ದಾರೆ.. ದಿನವೂ ಲಕ್ಷಾಂತರ ಜನ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ.. ಹೀಗಾಗಿ, ತಿಮ್ಮಪ್ಪನಿಗೆ ಕಾಣಿಕೆಗಳು ಭಾರೀ ಪ್ರಮಾಣದಲ್ಲಿ ಬರುತ್ತವೆ.. ಅದ್ರಲ್ಲೂ ಈ ಜುಲೈ ತಿಂಗಳಲ್ಲಿ ತಿರುಮಲ ವೆಂಕಟೇಶ್ವರನಿಗೆ ಕೋಟಿ ಕೋಟಿ ಆದಾಯ ಬಂದಿದೆ.. ಜುಲೈ ತಿಂಗಳಲ್ಲಿ ತಿಮ್ಮಪ್ಪನ ಹುಂಡಿನಲ್ಲಿ ಬರೋಬ್ಬರಿ 125.35 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಈ ವರ್ಷದ ಮೊದಲ ಆರು ತಿಂಗಳಲ್ಲಿ ಒಟ್ಟು 670 ಕೋಟಿ ರೂಪಾಯಿ ಹುಂಡಿಯಲ್ಲಿ ಸಂಗ್ರಹವಾಗಿತ್ತು. ಜನವರಿ ತಿಂಗಳಲ್ಲಿ 116.46 ಕೋಟಿ ರೂಪಾಯಿ, ಫೆಬ್ರವರಿಯಲ್ಲಿ 111.71 ಕೋಟಿ ರೂಪಾಯಿ, ಮಾರ್ಚ್‌ನಲ್ಲಿ 118.49 ಕೋಟಿ ರೂಪಾಯಿ, ಏಪ್ರಿಲ್‌ನಲ್ಲಿ 101.63 ಕೋಟಿ ರೂಪಾಯಿ, ಮೇ ತಿಂಗಳಲ್ಲಿ 108.28 ಕೋಟಿ ರೂಪಾಯಿ ಹಾಗೂ ಜೂನ್‌ನಲ್ಲಿ 113.64 ಕೋಟಿ ರೂಪಾಯಿ ಹುಂಡಿಯಲ್ಲಿ ಕಾಣಿಕೆ ಸಂಗ್ರಹವಾಗಿತ್ತು.. ಆದ್ರೆ ಜುಲೈ ತಿಂಗಳಲ್ಲಿ ದಾಖಲೆ ಎಂಬಂತೆ 125.35 ಕೋಟಿ ರೂಪಾಯಿ ಹುಂಡಿ ಹಣ ಸಂಗ್ರಹವಾಗಿದೆ..

Share Post