ವರ್ಗಾವಣೆಯಾಗಿದ್ದ ಪಿಎಸ್‌ಐ ಪರಶುರಾಮ್ ಮೃತಪಟ್ಟಿದ್ದು ಹೇಗೆ..?; ಶಾಸಕನ ಮೇಲೆ ಆರೋಪ ಏನು..?
ಯಾದಗಿರಿ; ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ, ಇತ್ತೀಚೆಗಷ್ಟೇ ಸೈಬರ್ ಕ್ರೈಮ್ ಪಿಎಸ್‌ಐ ಆಗಿ ವರ್ಗಾವಣೆಗೊಂಡಿದ್ದ ಪರಶುರಾಮ್ ಅವರು ಹಠಾತ್ ನಿಧನರಾಗಿದ್ದಾರೆ.. ನಿನ್ನೆ ಸಂಜೆ ಯಾದಗಿರಿ ಪೊಲೀಸ್ ಕ್ವಾಟರ್ಸ್‌ನ ತಮ್ಮ ನಿವಾಸದಲ್ಲಿದ್ದಾಗ ಹಠಾತ್ ಹೃದಯಾಘಾತವಾಗಿದ್ದು, ಅವರು ಸಾವನ್ನಪ್ಪಿದ್ದಾರೆ.. ಮೊನ್ನೆಯಷ್ಟೇ ಅವರಿಗೆ ವರ್ಗಾವಣೆಯಾಗಿದ್ದರಿಂದ ನಗರ ಠಾಣೆಯಲ್ಲಿ ಬೀಳ್ಕೊಡುಗೆ ನೀಡಲಾಗಿತ್ತು..
ಇದನ್ನೂ ಓದಿ; ತಿರುಪತಿ ತಿಮ್ಮಪ್ಪನಿಗೆ ಭರ್ಜರಿ ಆದಾಯ; ಜುಲೈನಲ್ಲಿ 125 ಕೋಟಿ ರೂ. ಹುಂಡಿನ ಹಣ ಸಂಗ್ರಹ
ಪರಶುರಾಮ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರೂ, ಅವರ ಸಾವಿನ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.. ಪರುಶುರಾಂ ಸಾವಿಗೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿವೆ.. ಸ್ವತಃ ಪರಶುರಾಮ್ ಅವರ ಪತ್ನಿ ಶ್ವೇತಾ, ಶಾಸಕ ಎಲ್ಲಿ ಕರೆಯಿರಿ..? ಎಂದು ಆಕ್ರೋಶದಿಂದ ಕೇಳಿದ್ದಾರೆ.. ನನ್ನ ಮಗ ಅಪ್ಪ ಎಲ್ಲಿ ಅಂತ ಕೇಳಿದರೆ ನಾನು ಏನು ಉತ್ತರ ಕೊಡೋದು ಅಂತ ಶ್ವೇತಾ ಅವರು ಪ್ರಶ್ನೆ ಮಾಡಿದ್ದಾರೆ..
ಇದನ್ನೂ ಓದಿ; ವಯನಾಡು ದುರಂತ; ಒಂದೇ ಕುಟುಂಬದ ನಾಲ್ವರು ಜೀವಂತವಾಗಿ ಪತ್ತೆ!
ವರ್ಗಾವಣೆಗೆ ಲಕ್ಷ ಲಕ್ಷ ಹಣ ಕೇಳುತ್ತಾರೆ.. ನಂತರ ದಿಢೀರ್ ವರ್ಗಾವಣೆ ಮಾಡುತ್ತಾರೆ.. ಇದರಿಂದಾಗಿ ಪಿಎಸ್‌ಐ ಪರಶುರಾಮ್ ಅವರು ಸಾಲ ಮಾಡಿಕೊಂಡಿದ್ದರು.. ಈಗ ದಿಢೀರ್ ವರ್ಗಾವಣೆ ಮಾಡಿದ್ದರಿಂದ ಸಾಕಷ್ಟು ಒತ್ತಡಕ್ಕೊಳಗಾಗಿದ್ದರು. ಈ ಕಾರಣಕ್ಕಾಗಿಯೇ ಹೃದಯಾಘಾತ ಆಗಿದೆ ಎಂಬ ಆರೋಪ ಕೇಳಿಬಂದಿದೆ.. ವಿವಿಧ ಸಂಘಟನೆಗಳ ಕಾರ್ಯಕರ್ತರು ಆಂಬುಲೆನ್ಸ್ ತಡೆದು ನ್ಯಾಯಕ್ಕಾಗಿ ಆಗ್ರಹ ಮಾಡಿದ್ದಾರೆ..