ವಯನಾಡು ದುರಂತ; ಒಂದೇ ಕುಟುಂಬದ ನಾಲ್ವರು ಜೀವಂತವಾಗಿ ಪತ್ತೆ!
ವಯನಾಡು; ಕೇರಳದ ವಯನಾಡಿನಲ್ಲಿ ಭೂಕುಸಿತ ಹಾಗೂ ಪ್ರವಾಹದಿಂದಾಗಿ ಭಾರೀ ನಷ್ಟ ಸಂಭವಿಸಿದೆ.. ನೂರಾರು ಜನ ಸಾವನ್ನಪ್ಪಿದ್ದಾರೆ.. ಮೂರು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.. ದಿನವೂ ಮೃತದೇಹಗಳು ಪತ್ತೆಯಾಗುತ್ತಲೇ ಇವೆ.. ಈ ನಡುವೆ ನಾಲ್ಕು ದಿನಗಳ ನಂತರ ಒಂದೇ ಕುಟುಂಬದ ನಾಲ್ವರು ಜೀವಂತವಾಗಿ ಪತ್ತೆಯಾಗಿದ್ದಾರೆ..
ಚುರಲ್‌ಮಲಾ ಬಳಿ ನಾಲ್ಕನೇ ದಿನದ ಶೋಧ ಕಾರ್ಯಾಚರಣೆಯಲ್ಲಿ ಪಡವೆಟ್ಟಿಕುನ್ನುವಿನ ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಪತ್ತೆಯಾಗಿದ್ದಾರೆ. ನಾಲ್ವರಿಗೂ ಗಾಯಗಳಾಗಿದ್ದರೂ ಅವರು ಜೀವಂತವಾಗಿದ್ದು, ಅವರನ್ನು ರಕ್ಷಣೆ ಮಾಡಲಾಗಿದೆ.. ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರಿದ್ದು, ಇದರಲ್ಲಿ ಒಬ್ಬ ಮಹಿಳೆಯ ಕಾಲಿಗೆ ಗಾಯವಾಗಿದೆ.. ಸಂತ್ರಸ್ತೆಯ ಕುಟುಂಬವನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ವಿಮಾನದಲ್ಲಿ ಸಾಗಿಸಲು ಸೇನೆಯು ವ್ಯವಸ್ಥೆ ಮಾಡುತ್ತಿದೆ.
ಪಡವೆಟ್ಟಿಕುನ್ನು ಚುರಲ್ಮಲಾದಿಂದ ಮೂರು ಕಿಲೋಮೀಟರ್ ದೂರದಲ್ಲಿದೆ. ನಾಲ್ವರು ಜೀವಂತವಾಗಿದ್ದಾರೆ ಎಂಬ ಸುದ್ದಿ ಸ್ಥಳೀಯ ನಿವಾಸಿಗಳು ಮತ್ತು ರಕ್ಷಣಾ ಕಾರ್ಯಕರ್ತರಿಗೆ ನಿರಾಳರನ್ನಾಗಿಸಿದೆ. ಕುಟುಂಬದ ಒಬ್ಬರನ್ನು ಜಾನಿ ಎಂದು ಗುರುತಿಸಲಾಗಿದೆ ಎಂದು ಮೆಪ್ಪಾಡಿ ಪಂಚಾಯತ್‌ನ ಸಾರ್ವಜನಿಕ ಪ್ರತಿನಿಧಿಗಳು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ತೋಟವಿದೆ. ಜಾನಿ ತನ್ನ ಕುಟುಂಬದೊಂದಿಗೆ ಮನೆಯಲ್ಲಿದ್ದರು.