ಮದುವೆ ಭಾಗ್ಯ ಕರುಣಿಸುವಂತೆ ಯುವಕನಿಂದ ಸರ್ಕಾರಕ್ಕೆ ಮನವಿ
ಗದಗ; ಗದಗ ಜಿಲ್ಲೆಯ ಯುವಕನೊಬ್ಬ ಮದುವೆಯಾಗಲು ಕನ್ಯೆ ಹುಡುಕಿ ಹುಡುಕಿ ಸುಸ್ತಾಗಿದ್ದಾನೆ. ಹೀಗಾಗಿ ಕನ್ಯೆ ಹುಡುಕಲು ಸರ್ಕಾರದ ಮೊರೆ ಹೋಗಿದ್ದಾರೆ. ಗ್ರಾಮ ಪಂಚಾಯತ್ ಮೂಲಕ ಸರ್ಕಾರದ ಗಮನ ಸೆಳೆದಿದ್ದಾನೆ.
ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮುತ್ತು ಹೂಗಾರ ಎಂಬ ಯುವಕನಿಗೆ 28 ವರ್ಷ ವಯಸ್ಸಾಗಿದೆ. ಮದುವೆಯಾಗಲು ಕನ್ಯೆ ಹುಡುಕಿ ಹುಡುಕಿ ಸಾಕಾಗಿದ್ದಾನೆ. ಆದ್ರೆ ಇನ್ನೂ ಕನ್ಯೆ ಸಿಕ್ಕಿಲ್ಲ. ಹೀಗಾಗಿ ನನಗೆ ಕನ್ಯೆ ಹುಡುಕಿ ಕೊಡಿ ಎಂದು ಡಂಬಳ ಗ್ರಾಮ ಪMಚಾಯತ್ ಪಿಡಿಇ ಹಾಗೂ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾನೆ.
ಈ ವಿಚಾರ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.