Health

ಕಬ್ಬಿನ ಜ್ಯೂಸ್‌ ನಲ್ಲಿ ಅಡಗಿದೆ ಹಲವು ಪ್ರಯೋಜನೆಗಳು

ಪ್ರತಿಯೊಬ್ಬರಿಗೂ ನೀರಿನ ದಾಹ ಆಗುತ್ತದೆ. ಆಗಾ ಏನಾದ್ರೂ ಜ್ಯೂಸ್‌ ಕುಡಿಯಬೇಕು ಅನಿಸುತ್ತದೆ. ರೋಡ್‌ ಸೈಡ್‌ ಗೆ ಕಬ್ಬಿನ ಜ್ಯೂಸ್‌ ಸಿಗುತ್ತದೆ.
ಅದರಲ್ಲಿ ಹೇರಳವಾಗಿ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮೆಗ್ನೇಶಿಯಂ, ಕಬ್ಬಿಣದ ಅಂಶ, ಅಮಿನೋ ಆಮ್ಲ ಸಮೃದ್ದವಾಗಿ ಸಿಗುತ್ತದೆ. ಬೇಸಿಗೆಯಲ್ಲಿ ಕಬ್ಬಿನ ಹಾಲು ಕುಡಿದರೆ ದೇಹ ತಣಿದು, ಆರೋಗ್ಯ ಸಮಸ್ಥಿತಿಗೆ ಬರುತ್ತದೆ. ಕಬ್ಬಿನ ಹಾಲು ಕುಡಿದರೆ ಲಾಭ ಏನು ತಿಳಿದುಕೊಳ್ಳೊಣ
ದೇಹಕ್ಕೆ ಶಕ್ತಿ ನೀಡುತ್ತದೆ.
ಕಬ್ಬಿನಲ್ಲಿ ನೈಸರ್ಗಿಕ ಸುಕ್ರೋಸ್ ಇರುತ್ತದೆ. ಸುಕ್ರೋಸ್ ದೇಹಕ್ಕೆ ತತ್ ಕ್ಷಣದಲ್ಲಿ ಎನರ್ಜಿ ನೀಡುತ್ತದೆ. ಬಿಸಲ ತಾಪಕ್ಕೆ ನೀರು ಕುಡಿಯುವ ಬದಲು ಕಬ್ಬಿನ ಹಾಲು ಕುಡಿದರೆ , ತಕ್ಷಣ ದೇಹಕ್ಕೆ ಶಕ್ತಿ ಸಿಗುತ್ತದೆ.
ಲಿವರ್ ಆರೋಗ್ಯಕ್ಕೆ ರಾಮಬಾಣ
ನಿಮಗೆ ಗೊತ್ತಿರಬಹುದು. ಅರಸಿನ ಕಾಮಲೆ ರೋಗ ಬಂದಾಗ ಕಬ್ಬಿನ ಹಾಲು ಕುಡಿಸಿ ಎಂದು ಆಯುರ್ವೇದ ಹೇಳುತ್ತದೆ. ಇದಕ್ಕೆ ಕಾರಣ ಇಷ್ಟೇ. ಕಬ್ಬಿನ ಹಾಲು ಲಿವರ್ ನ್ನು ಸ್ಟ್ರಾಂಗ್ ಆಗಿಡುತ್ತದೆ. ಕಬ್ಬಿನ ಸಾಕಷ್ಟು ಆಂಟಿಆಕ್ಸಿಡೆಂಟ್ಸ್ ಇರುತ್ತವೆ. ಇವು ಲಿವರ್ ಗೆ ಸೋಂಕು ಉಂಟಾಗದಂತೆ ತಡೆಯುತ್ತದೆ.
ಕಿಡ್ನಿಯಲ್ಲಿ ಸ್ಟೋನ್ ಉಂಟಾಗುವುದಿಲ್ಲ.
ಯುರಿನರಿ ಟ್ರಾಕ್ ಇನ್ಪೆಕ್ಷನ್ ಅಥವಾ ಮೂತ್ರನಾಳದ ಸೋಂಕು ತಡೆಗಟ್ಟುತ್ತದೆ ಕಬ್ಬಿನ ಹಾಲು. ಮೂತ್ರ ಮಾಡುವಾಗ ಉರಿಯುತ್ತಿದ್ದರೆ, ಖಂಡಿತಾ ಕಬ್ಬಿನ ಹಾಲು ಕುಡಿಯಿರಿ. ಕಿಡ್ನಿ ಸ್ಟೋನ್ ಆಗುವುದನ್ನೂ ತಡೆ ಗಟ್ಟುತ್ತದೆ

Share Post