ಪಿಂಚಣಿ ಹಣ ಕೊಡದಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಂದ ಕುಡುಕ ಮಗ!
ಮೇದಕ್(ತೆಲಂಗಾಣ); ಮದ್ಯ ಸೇವನೆ ಮಾಡೋದಕ್ಕೆ ಪಿಂಚಣಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮಗನೊಬ್ಬ ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾನೆ. ತೆಲಂಗಾಣದ ಮೇದಕ್ ಜಿಲ್ಲೆಯ ನಿಜಾಂಪೇಟ್‌ನಲ್ಲಿ ಈ ಘಟನೆ ನಡೆದಿದೆ.. ದುರ್ಗವ್ವ ಎಂಬಾಕೆಯೇ ಹೆತ್ತ ಮಗನಿಂದ ಕೊಲೆಯಾದ ದುರ್ದೈವಿಯಾಗಿದ್ದಾಳೆ.. ಆಕೆಯ ಕುತ್ತಿಗೆಗೆ ನೇಣು ಬಿಗಿದು ಕೊಲೆ ಮಾಡಿರುವ ಆರೋಪಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ..
ಇದನ್ನೂ ಓದಿ; ಈ ಪೋಲಿ ಮುಖ್ಯ ಶಿಕ್ಷಕನಿಗೆ ಶಿಕ್ಷಕಿಯ ಸಿಹಿಮುತ್ತು ಬೇಕಂತೆ!
ಕುಡಿಯುವುದೇ ಚಟ ಮಾಡಿಕೊಂಡಿದ್ದ ಮಗ ರಾಮಚಂದ್ರ ದಿನವೂ ತಾಯಿ ಬಳಿ ಹಣ ಕೇಳುತ್ತಿದ್ದ.. ತಾಯಿ ಹಲವಾರು ಬಾರಿ ಕೊಟ್ಟಿದ್ದಾಳೆ.. ಆದ್ರೆ ಕುಡಿದು ಹಾಳಾಗುತ್ತಿದ್ದ ಮಗನನ್ನು ನೋಡಲಾಗದೆ ಹಣ ಕೊಡೋದಿಲ್ಲ ಎಂದು ಹೇಳಿದ್ದಾಳೆ.. ಆದ್ರೆ ಮಧ್ಯರಾತ್ರಿ ಮನೆಗೆ ಬಂದ ಆರೋಪಿ ಪಿಂಚಿಣಿ ಹಣ ಬಂದಿದೆ ಕೊಡು ಎಂದು ಪೀಡಿಸಿದ್ದಾನೆ… ಆದ್ರೆ ತಾಯಿ ಹಣ ಕೊಡೋದಿಲ್ಲ ಎಂದು ಹೇಳಿದ್ದಾಳೆ.. ಇದರಿಂದ ಆಕ್ರೋಶಗೊಂಡ ಆರೋಪಿ ತಾಯಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.. ಬೆಳಗ್ಗೆ ಎಷ್ಟು ಹೊತ್ತಾದರೂ ಮನೆಯ ಬಾಗಿಲು ತೆರೆಯದ್ದನ್ನು ನೋಡಿದ್ದ ಅಕ್ಕಮಕ್ಕದವರು ಹೋಗಿ ನೋಡಿದ್ದಾರೆ.. ಆಗ ಅಸ್ತವ್ಯಸ್ತವಾಗಿ ದುರ್ಗವ್ವ ಬಿದ್ದಿರುವುದು ಕಂಡುಬಂದಿದೆ..
ಇದನ್ನೂ ಓದಿ; ಮೆಟ್ರೋ ಫ್ಲೈಓವರ್ ಮೇಲಿಂದ ಹಾರಿ ವ್ಯಕ್ತಿ ಆತ್ಮಹತ್ಯೆ!
ಕೂಡಲೇ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.. ಆರೋಪಿ ರಾಮಚಂದ್ರ ತಲೆಮರೆಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..