DistrictsPolitics

ಫೆ.6ಕ್ಕೆ ರಾಜ್ಯಕ್ಕೆ ಪ್ರಧಾನಿ ಆಗಮನ; ತುಮಕೂರಿನಲ್ಲಿ ಆರಗ ಪರಿಶೀಲನೆ

ತುಮಕೂರು: ಫೆಬ್ರವರಿ ‌ 6 ರಂದು ‌ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.  ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನೂತನವಾಗಿ, ನಿರ್ಮಿಸಲಾಗಿರುವ, ಹೆಚ್ ಏ ಎಲ್ ನ, ಪ್ರತಿಷ್ಠಿತ ಲಘು ಪ್ರಮಾಣದ, ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಗೊಳಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರಗ ಜ್ಞಾನೇಂದ್ರ ಇಂದು ಉತ್ಪಾದನಾ ಘಟಕ ಆವರಣದಲ್ಲಿ ಸಿದ್ದತಾ ಪರಿಶೀಲನೆ ನಡೆಸಿದರು.

ಹೆಚ್‌ಎಎಲ್‌ ಅವರಣದಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯವ್ಯಕ್ತಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಬರುವ ನಿರೀಕ್ಷೆ ಇರುವುದರಿಂದ ವಾಹನ ನಿಲುಗಡೆಗಾಗಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡುವ ಬಗ್ಗೆ ಅಧಿಕಾರಿಗಳು ಚರ್ಚಿಸಿದರು . ಹೆಚ್‌ಎಎಲ್ ಘಟಕದ ಪ್ರವೇಶದ್ವಾರದ ಮುಂದಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು . ಕಾರ್ಯಕ್ರಮ ಸ್ಥಳಕ್ಕೆ ಗಣ್ಯವ್ಯಕ್ತಿಗಳು , ಸಾರ್ವಜನಿರರಿಗೆ ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನಕ್ಕೆ ವ್ಯವಸ್ಥೆ ಕಲ್ಪಿಸಬೇಕು . ಉಳಿದಂತೆ ಹೆಲಿಪ್ಯಾಡ್ , ವೇದಿಕೆ ಸಜ್ಜು , ಅಸನ ವ್ಯವಸ್ಥೆ , ಭದ್ರತಾ ವ್ಯವಸ್ಥೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು . ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷವಾಗದಂತೆ ಯಶಸ್ವಿಯಾಗಿ ನಡೆಯುವಂತೆ ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು .

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಬಸವರಾಜ್, ಜಿಲ್ಲಾಧಿಕಾರಿ ಶ್ರೀ ವೈ ಎಸ್ ಪಾಟೀಲ್, ವಿಧಾನ ಸಭಾ ಸದಸ್ಯ ಶ್ರೀ ಜ್ಯೋತಿ ಗಣೇಶ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೇಶವ ಪ್ರಸಾದ್ ಮತ್ತು ಶ್ರೀ ಚಿದಾನಂದ ಗೌಡ, ಜಿಲ್ಲಾ ರಕ್ಷಣಾಧಿಕಾರಿ ಶ್ರೀ ರಾಹುಲ್, HAL ನ ಹಿರಿಯ ಅಧಿಕಾರಿಗಳು, ಉಪಸ್ಥಿತರಿದ್ದರು.

Share Post