Bengaluru

SSLC ಮುಖ್ಯ ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ: ಹಿಜಾಬ್‌ಗೆ ನೋ ಎಂಟ್ರಿ-ಶಿಕ್ಷಣ ಇಲಾಖೆಯಿಂದ ಆದೇಶ

ಬೆಂಗಳೂರು: ರಾಜ್ಯದಲ್ಲಿ ಸಮವಸ್ತ್ರದ ಕಿಚ್ಚು ಜೋರಾಗೇ ಇದೆ. ಹಿಜಾಬ್‌ ಧರಿಸಿ ಬಂದ್ರೆ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ಎಂಟ್ರಿ ಇಲ್ಲ. ಈ ಬಗೆ ಸಾಋವಜನಿಕ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಹೈಕೋರ್ಟ್‌ ನೀಡಿರುವ ತೀರ್ಪಿನಂತೆ ಶಾಲೆಗಳಲ್ಲಿ ಸಮವಸ್ತ್ರ ಹೊರತುಪಡಿಸಿ ಯಾವುದೇ ಬೇರೆ ವಸ್ತ್ರ ಧರಿಸಲು ಅನುಮತಿ ಇಲ್ಲ.  ಒಂದು ವೇಳೆ ಪರೀಕ್ಷೆಗೆ ಹಿಜಾಬ್‌ ಧಿರಿಸಿ ಬರುವುದೇ ಆದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯಲು ಅನುವು ಮಾಡಿಕೊಂಡದಂತೆ ಸುತ್ತೋಲೆಯಲ್ಲಿ ಉಲ್ಲೇಖವಾಗಿದೆ.

ಹಿಜಾಬ್‌ ಧರಿಸಿ ಬಂದ್ರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅವಕಾಶವಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಖಾಸಗಿ ಶಾಲೆಗಳಲ್ಲಿ ಆಯಾ ಶಾಲಾ ಆಡಳಿತ ಮಂಡಳಿ ನಿರ್ಧಾರ ಮಾಡಿರುವ ಸಮವಸ್ತ್ರ ಧರಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಎಂಬ ಆದೇಶವನ್ನು ಜಾರಿ ಮಾಡಿದೆ. ಒಂದು ವೇಳೆ ಆದೇಶವನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಸುತ್ತೋಲೆ ಹೊರಡಿಸಿದೆ.

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಈ ಆದೇಸವನ್ನು ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಬಾರಿ ಪರೀಕ್ಷೆಗೆ ತಪ್ಪಿಸಿಕೊಂಡರೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಉಲ್ಲೇಖ ಮಾಡಲಾಗಿದೆ. ಮಾರ್ಚ್‌ 28ರಿಂದ ಏಪ್ರಿಲ್  11ರವರೆಗೆ SSLCಪರೀಕ್ಷೆ ನಡೆಯಲಿದೆ.

Share Post