ಊರಿಗೆ ನುಗ್ಗಿದ ಒಂಟಿ ಸಲಗ; ಬೂದುನೂರು ಜನರಲ್ಲಿ ಆತಂಕ
ಮೈಸೂರು; ಇತ್ತೀಚೆಗೆ ಕಾಡಾನೆಗಳು ಕಾಡಿನಲ್ಲಿ ಆಹಾರ ಸಿಗದೇ ನಾಡಿನತ್ತ ಹೆಜ್ಜೆ ಇಡುತ್ತಿವೆ. ಮೈಸೂರು ಭಾಗದಲ್ಲಿ ಈ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ಹೆಚ್.ಡಿ.ಕೋಟೆ ತಾಲ್ಲೂಕಿನ ಬೂದನೂರು ಗ್ರಾಮಕ್ಕೆ ಒಂಟಿ ಸಲಗವೊಂದು ನುಗ್ಗಿ ಆತಂಕ ಸೃಷ್ಟಿಸಿದೆ.
ನಾಗರಹೊಳೆ ಅಭಯಾರಣ್ಯದಿಂದ ಆಹಾರ ಅರಸಿ ಕಳೆದ ರಾತ್ರಿ ನಾಡಿಗೆ ಬಂದ ಒಂಟಿ ಸಲಗ, ಇಂದು ಬೆಳಗ್ಗೆ ಬೂದನೂರು ಗ್ರಾಮಕ್ಕೆ ನುಗ್ಗಿದೆ. ಆನೆಯನ್ನು ಕಂಡ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಆನೆಗೆ ಕಲ್ಲುಗಳನ್ನು ಎಸೆದು ಅದನ್ನು ಬೆದರಿಸಿ ಕಾಡಿಗಟ್ಟಲು ಪ್ರಯತ್ನ ಮಾಡಿದ್ದಾರೆ. ಆದ್ರೆ ಇದ್ರಿಂದ ಆಕ್ರೋಶಗೊಂಡಿರೋ ಆನೆ ಮನೆಯೊಂದನ್ನು ಧ್ವಂಸ ಮಾಡಿದೆ. ಜೊತೆಗೆ ಎತ್ತಿನಬಂಡಿಯನ್ನು ಸಂಪೂರ್ಣ ಧ್ವಂಸ ಮಾಡಿದೆ.
ಮಧ್ಯಾಹ್ನವಾದರೂ ಆನೆ ಗ್ರಾಮದಲ್ಲೇ ಓಡಾಡುತ್ತಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದಾರೆ. ಪಟಾಕಿ ಸಿಡಿಸಿ ಒಂಟಿ ಸಲಗವನ್ನು ಕಾಡಿಗಟ್ಟುವ ಪ್ರಯತ್ನ ಮಾಡಲಾಗುತ್ತಿದೆ.