CrimeDistricts

ದಿಢೀರ್‌ ಅಡ್ಡ ಬಂದ ಆಕಳು; ಕಾರು ಪಲ್ಟಿಯಾಗಿ ಮಹಿಳೆ ಸಾವು..!

ರಾಯಚೂರು; ನಗರದ ಬೈಪಾಸ್ ಬಳಿ ಕಾರೊಂದು ಪಲ್ಟಿಯಾಗಿದ್ದು, ಘಟನೆಯಲ್ಲಿ  ಓರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮಹಿಳೆ ಕಾರಿನಲ್ಲಿ ಹೋಗುತ್ತಿದ್ದಾಗ ಸಡನ್‌ ಆಗಿ ಆಕಳು ಅಡ್ಡ ಬಂದಿದೆ. ಅದನ್ನು ತಪ್ಪಿಸಲು ಹೋದಾಗ ಕಾರು ಪಲ್ಟಿಯಾಗಿದೆ.

ಮೃತ ಮಹಿಳೆಯನ್ನು ಶೈಲಜಾ ಮಲ್ಲಿಕಾರ್ಜುನ (38) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ 13 ವರ್ಷದ ಮಗಳು ಲಕ್ಷ್ಮಿಗೆ ಗಂಭೀರ ಗಾಯಗಳಾಗಿವೆ. ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಶೈಲಜಾ ಅವರು ಹೈದರಾಬಾದ್‍ನಿಂದ ಕೊಪ್ಪಳದ ಚೆನ್ನಳ್ಳಿ ಕ್ಯಾಂಪ್‍ಗೆ ಹೊರಟಿದ್ದರು. ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post