CrimeDistricts

ಸ್ನೇಹಿತನ ರುಂಡದೊಂದಿಗೆ ಸ್ವಗ್ರಾಮಕ್ಕೆ ಬಂದ ಯುವಕ; ಏನಾಯ್ತು ಗೊತ್ತಾ..?

ಬೆಳಗಾವಿ; ಸ್ನೇಹಿತನನ್ನು ಕೊಲೆ ಮಾಡಿ ಆತನ ರುಂಡದೊಂದಿಗೆ ಯುವಕನೊಬ್ಬ ಸ್ವಗ್ರಾಮಕ್ಕೆ ಬಂದು ಭೀತಿಗೆ ಕಾರಣನಾಗಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ರಯಾಭಾಗ ತಾಲ್ಲೂಕಿನ ಹಾರೂಗೇರಿ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಅಕ್ಬರ್‌ ಜಮಾದಾರ್‌ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾನೆ. ಆತನ ಸ್ನೇಹಿತ ಮಹಾಂತೇಶ ಪೂಜಾರ್‌ ಆರೋಪಿ.

ಇಬ್ಬರೂ ಬಡಬ್ಯಾಕೂಡ್‌ ಗ್ರಾಮದವರು. ಬಸ್ತವಾಡ ಬಳಿಯ ಅರಣ್ಯದಲ್ಲಿ ಸ್ವೇಹಿತ ಅಹ್ಬರ್‌ ಜಮಾದಾರ್‌ನನ್ನು ಕೊಲೆ ಮಾಡಿರುವ ಮಹಾಂತೇಶ್‌, ಆತನ ರುಂಡದೊಂದಿಗೆ ಗ್ರಾಮಕ್ಕೆ ಬಂದಿದ್ದಾರೆ. ಇದನ್ನು ನೋಡಿ ಗ್ರಾಮಸ್ಥರು ಗಾಬರಿಯಾಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಮಹಾಂತೇಶ್‌ ಹಾಗೂ ಕೊಲೆಯಾದ ಅಕ್ಬರ್‌ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು. ಇಬ್ಬರು ಕಳ್ಳರಾಗಿದ್ದು, ಎಮ್ಮೆಗಳನ್ನು ಕಳ್ಳತನ ಮಾಡಿ ಮಾರುತ್ತಿದ್ದರು. ಇಬ್ಬರ ನಡುವೆ ಹಣದ ವಿಚಾರವಾಗಿ ಗಲಾಟೆ ನಡೆದಿದ್ದು, ಅದು ತಾರಕಕ್ಕೇರಿ ಕೊಲೆ ಮಾಡಲಾಗಿದೆ.

 

Share Post