Bengaluru

ಜನಪದ ವಿವಿ ಉನ್ನತ ಶಿಕ್ಷಣ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾವಣೆ ಆಗಲಿ; ಗೋವಿಂದ ಕಾರಜೋಳ

ಬೆಂಗಳೂರು: ಹಾವೇರಿಯಲ್ಲಿರುವ ಜನಪದ ವಿಶ್ವವಿದ್ಯಾಲಯವನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಬೇಕು. ಆಗ ಮಾತ್ರ ಅಲ್ಲಿ ಚಟುವಟಿಕೆಗಳು ನಡೆಯುತ್ತವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ಅವರು, ಜನಪದ ವಿಶ್ವವಿದ್ಯಾಲಯ ನನ್ನ ಕಾಲದಲ್ಲಿಯೇ ಪ್ರಾರಂಭ ಆಯ್ತು. ಕರ್ನಾಟಕದ ಮಧ್ಯಭಾಗದಲ್ಲಿ ಇರಬೇಕು ಎಂದು ಹಾವೇರಿಯಲ್ಲಿ ಜಾನಪದ ವಿವಿಯನ್ನು ಪ್ರಾರಂಭಿಸಲಾಯ್ತು. ಕೆಲವರ ತಲೆಯಲ್ಲಿ ಏನಿತ್ತು ಅಂದ್ರೇ ವಿಶ್ವವಿದ್ಯಾಲಯ ಎಂದು ಬಂದುಬಿಟ್ಟರೇ ಉನ್ನತ ಶಿಕ್ಷಣ ಇಲಾಖೆಯಲ್ಲಿಯೇ ಬರಲಿ ಅಂತಾರೆ. ವಿಶ್ವವಿದ್ಯಾಲಯ ಎಲ್ಲ ನನ್ನಿಂದಾನೇ ಪ್ರಾರಂಭ ಆಯ್ತು. ಆದರೆ, ಆದೇಶ ಕೊಡುವಾಗ ಉನ್ನತ ಶಿಕ್ಷಣ ಇಲಾಖೆಯಲ್ಲಿರಲಿ ಅಂತಾ ಹೇಳಿ ಅಲ್ಲಿಗೆ ಸೇರಿಸಿಬಿಟ್ಟರು. ಆದ್ದರಿಂದ ಜನಪದ ವಿವಿಯ ಚಟುವಟಿಕೆಗಳು ಕುಂಠಿತಗೊಂಡಿವೆ ಎಂದು ಹೇಳಿದರು.

ಈ ಜನಪದ ಕಲಾವಿದರು, ಕವಿಗಳು, ಸಾಹಿತಿಗಳು ಎಲ್ಲ ಕೆಳವರ್ಗದಿಂದ ಬಂದಿರುವವರು. ಕೆಳವರ್ಗದವರ ಬದುಕೇ ಜನಪದ ಕಲೆ ಆಗಿದೆ. ಆದ್ದರಿಂದ ನನ್ನ ಬಲಭಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಿದ್ದಾರೆ. ನನ್ನ ಎಡಭಾಗದಲ್ಲಿ ಉನ್ನತ ಶಿಕ್ಷಣ ಸಚಿವರಿದ್ದಾರೆ. ಇಬ್ಬರು ಕುಳಿತು ಮಾತನಾಡಿ ಜಾನಪದ ವಿವಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಿ ಎಂದು ಮನವಿ ಮಾಡಿದರು.

Share Post