ಮದುವೆ ವಾರ್ಷಿಕೋತ್ಸವ ದಿನದಂದೆ ಹೆಣವಾದ ಪತ್ನಿ
ಚಿತ್ರದುರ್ಗ: ಸಾಮಾನ್ಯವಾಗಿ ಹೆಣ್ಣುಮಕ್ಕಳು ಮದುವೆಯಾದ್ಮೇಲೆ ಸಾಕಷ್ಟು ಕನಸು ಕಟ್ಟಿಕೊಂಡಿರುತ್ತಾರೆ. ನನ್ನ ಗಂಡ ಹಾಗೆ ಇರಬೇಕು, ಹೀಗೆ ಇರಬೇಕು ಎಂದು ಅಂದುಕೊಂಡಿರುತ್ತಾರೆ. ಅದರಲ್ಲೂ ಮೊದಲ ಮದುವೆ ವಾರ್ಷಿಕೋತ್ಸವ ದಿನ ಬಂದರೆ ಸಾಕು ಎಲ್ಲಾದ್ರೂ ಗಂಡನ ಜೊತೆ ಹೊರಗೆ ಹೋಗಬೇಕು ಪ್ಲಾನ್ ಮಾಡುತ್ತಾರೆ. ಆದರೆ ಇಲ್ಲೊಂದು ಊರಿನಲ್ಲಿ ಮದುವೆ ವಾರ್ಷಿಕೋತ್ಸವ ದಿನದಂದೆ ಹೆಣವಾಗಿದ್ದಾಳೆ. ಚಿತ್ರದುರ್ಗದ ತಾಲೂಕಿನ ಕೊಣನೂರು ಗ್ರಾಮದಲ್ಲಿ ಕೌಟುಂಬಿಕ ಕಾರಣದಿಂದ ಪತಿಯೇ ಪತ್ನಿಯನ್ನ ಕೊಲೆ ಮಾಡಿರುವ ಘಟನೆ ನಡೆದಿದೆ.
ಸುಮಾ ಕೊಲೆಯಾದ ದುರ್ದೈವಿ. ಈಕೆಯ ಪೋಷಕರು ಸಣ್ಣ ವಯಸ್ಸಿನಲ್ಲಿ ನಾರಪ್ಪ ಎಂಬುವನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಒಂದು ದಿನ ಗಂಡ- ಹೆಂಡತಿ ನಡುವೆ ಗಲಾಟೆಯಾಗಿತ್ತು. ಆ ಜಗಳ ವಿಕೋಪಕ್ಕೆ ಹೋಗಿ ಸಿಟ್ಟಿನಲ್ಲಿ ಗಂಡ ನಾರಪ್ಪ ಪತ್ನಿ ಸುಮಾಳನ್ನ ಕೊಲೆ ಮಾಡಿದ್ದಾನೆ.ನಂತರ ಯಾರಿಗೂ ಗೊತ್ತಾಗದ ಹಾಗೇ ಆಕೆಯ ಶವವನ್ನು ತಮ್ಮ ಮನೆಯ ಬಚ್ಚಲುಮನೆಯಲ್ಲಿ ಹೂತಿಟ್ಟಿದ್ದು, ಪತ್ನಿ ಕಾಣೆಯಾಗಿದ್ದಾಳೆ ಎಂದು ನಾರಪ್ಪ ನಾಟಕವಾಡಿದ್ದಾನೆ.ಈ ಘಟನೆ ಸಂಬಂಧಿಸಿ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ,ತನಿಖೆ ಕೈಗೊಂಡಿದ್ದಾರೆ.