Health

ಸಚಿವ ಆರ್‌ ಅಶೋಕ್‌ಗೆ ಕೊರೊನಾ ಸೋಂಕು

ಬೆಂಗಳೂರು : ಸಚಿವ ಆರ್‌ ಅಶೋಕ್‌ ಅವರಿಗೆ ಕೋವಿಡ್‌ ಸೋಂಕು ತಗುಲಿದೆ. ಗುರುವಾರ ನಡೆದ ಬಿಜೆಪಿ ಕ್ಯಾಬಿನೆಟ್‌ಗೆ ಸಚಿವ ಆರ್‌ ಅಶೋಕ್‌ ಗೈರಾಗಿದ್ದರು. ಈಗ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೌಮ್ಯ ಗುಣಲಕ್ಷಣಗಳು ಇರುವ ಕಾರಣ, ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎರಡು ದಿನಗಳ ಹಿಂದೆ ಸರ್ಕಾರ ವಿಧಿಸಿದ ನೈಟ್‌ ಕರ್ಫ್ಯೂ, ವೀಕೆಂಡ್‌ ಲಾಕ್‌ ಡೌನ್‌ ಬಗ್ಗೆ ಸವಿವರವಾಗಿ ವಿವರಿಸಿದ್ದ ಅಶೋಕ್‌ ಅವರು ಸಾಕಷ್ಟು ಜನರ ಜೊತೆಗೆ ಸಂಪರ್ಕ ಹೊಂದಿದ್ದರು. ಮುಖ್ಯಮಂತ್ರಿಯೊಂದಿಗೂ ಅಶೋಕ್‌ ಸಂಪರ್ಕದಲ್ಲಿದ್ದರು. ರಾಜ್ಯ ಸರ್ಕಾರದ ನಿಯಮದ ಪ್ರಕಾರ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಿಗೆ ಏಳು ದಿನ ಕ್ವಾರಂಟೈನ್‌ ಆಗಬೇಕಿದೆ. ಈ ರೂಲ್‌ ಪ್ರಕಾರ ಈಗ ಮಾನ್ಯ ಮುಖ್ಯಮಂತ್ರಿಗಳು , ಸಚಿವ ಡಾ ಕೆ ಸುಧಾಕರ್‌ ಸೇರಿದಂತೆ ಇನ್ನು ಹಲವು ಸಚಿವರು ಕ್ವಾರಂಟೈನ್‌ ಆಗಬೇಕಿದೆ.

ವೀಕೆಂಡ್‌ ಲಾಕ್‌ಡೌನ್, ನೈಟ್‌ ಕರ್ಫ್ಯೂ ನಂತಹ ಕಠಿಣ ಕ್ರಮಗಳನ್ನು ಜರುಗಿಸಿದ್ದರೂ ಕೊರೊನಾ ಆರ್ಭಟ ಹೆಚ್ಚುತ್ತಲೇ ಇದೆ ಹೊರತು ಕಡಿಯಾಮಗುತ್ತಿಲ್ಲ. ಮೂರನೇ ಅಲೆ ಬಹು ದೊಡ್ಡ ಕಂಟಕದಂತೆ ಗೋಚರಿಸುತ್ತಿದೆ.

Share Post