Cinema

ವೂಟ್‌ನಲ್ಲಿ ಬಂದರು ಹಂಬಲ್‌ ಪೊಲಿಟೀಷಿಯನ್‌ ನೊಗರಾಜ್

ಬೆಂಗಳೂರು : ಕನ್ನಡ ಚಿತ್ರರಂಗ ಇನ್ನೇನು ಚೇತರಿಸಿಕೊಳ್ಳುತ್ತಿದೆ ಎಂದಾಗಲೆಲ್ಲಾ ಕೊರೊನಾ ದೊಡ್ಡ ಹೊಡೆತ ನೀಡ್ತಿದೆ. ಈಗ ಮತ್ತೆ ಕೋವಿಡ್‌ ಕಾರಣದಿಂದ 50-50 ನಿಯಮ ಜಾರಿಗೆ ಬಂದಿದೆ. ಸಾಕಷ್ಟು ಬಿಗ ಬಜೆಟ್‌ ಸಿನಿಮಾಗಳು ತಮ್ಮ ರಿಲೀಸ್‌ ಡೇಟ್‌ ಅನ್ನು ಮುಂದೂಡುತ್ತಿವೆ. ಎಲ್ಲಾ ಭಾಷೆಯಲ್ಲಿಯೂ ಇದೇ ಪಡಿಸ್ಥಿತಿ ನಿರ್ಮಾಣವಾಗಿದೆ.

ಈಗ ಜನರು ಹೆಚ್ಚಾಗಿ ಮುಖ ಮಾಡುತ್ತಿರುವುದು ಓಟಿಟಿ ಪ್ಲಾಟ್‌ಫಾರ್ಮ್‌ ಕಡೆ. ಪ್ರತಿಷ್ಟಿತ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಚಂದಾದಾರರನ್ನು ತಮ್ಮತ್ತ ಸೆಳೆಯಲು ಹೊಸ ಹೊಸ ಕಾರ್ಯಕ್ರಮ ಹೊತ್ತು ತರ್ತಾರೆ. ಈಗ ಅಂತದ್ದೇ ಒಂದು ಪ್ರಯತ್ನ ವೂಟ್‌ ಒರಿಜಿನಲ್ಸ್‌ ಮಾಡಿದೆ.

ದಾನಿಶ್‌ ಸೇಠ್‌ ಅಭಿನಯದ ಸಿನಿಮಾ ಹಂಬಲ್‌ ಪೊಲಿಟೀಷಿಯನ್‌ ನೊಗರಾಜ್‌ ಯಾರಿಗೆ ಗೊತ್ತಿಲ್ಲ ಹೇಳಿ. ಸಿನಿಮಾ ಅಂತಹ ಯಶಸ್ಸು ಪಡೆಯದೇ ಇದ್ದರೂ ದಾನಿಶ್‌ ಅವರ ಕಚಗುಳಿಗೆ ಜನ ನಕ್ಕಿದ್ದರು. ಈಗ ಇದೇ ಹೆಸರಿನ ವೆಬ್‌ ಸೀರೀಸ್‌ ಮೂಡಿ ಬರ್ತಿದೆ. ನಿಮ್ಮ ವೂಟ್‌ ಆಪ್‌ನಲ್ಲಿ ಈಗ ಹಂಬಲ್‌ ಪೊಲಿಟೀಷಿಯನ್‌ ನೊಗರಾಜ್‌ ವೆಬ್‌ ಸೀರೀಸ್‌ ನೋಡಬಹುದು.

10 ಎಪಿಸೋಡ್‌ ಒಳಗೊಂಡಿರುವ ಸೀಸನ್‌ ೧ ಈಗಾಗಲೇ ಸ್ಟ್ರೀಮಿಂಗ್‌ ಶುರು ಮಾಡಿದೆ. ಮನೆಯಲ್ಲೇ ಕುಳಿತು ಮನರಂಜನೆ ಬಯಸುವವರಿಗೆ ಹಂಬಲ್‌ ಪೊಲಿಟೀಷಿಯನ್‌ ನೊಗರಾಜ್‌ ಒಂದು ಉತ್ತಮ ಸೀರೀಸ್‌ ಎಂದು ದಾನಿಶ್‌ ಸೇಠ್‌ ಹೇಳಿಕೊಂಡಿದ್ದಾರೆ.

RCB  ತಂಡದ ಜೊತೆ ಪ್ರಮೋಷನಲ್‌ ಪಾರ್ಟ್ನರ್‌ ಆಗಿ ಕೆಲಸ ಮಾಡುವ ದಾನಿಶ್‌ ಸೇಠ್‌ ಅಂದರೆ RCB ತಂಡದ ಎಲ್ಲರಿಗೂ ಅಚ್ಚು ಮೆಚ್ಚು. ಸಾಕಷ್ಟು ಆರ್.ಸಿ.ಬಿ ಆಟಗಾರರು ಮತ್ತು ಸಪೋರ್ಟಿಂಗ್‌ ಸ್ಟಾಫ್‌ ಇವರಿಗೆ ಶುಭ ಕೋರಿದ್ದಾರೆ.

Share Post