ಹಿಜಾಬ್ ಪರ ಸಿದ್ದರಾಮಯ್ಯ ಬ್ಯಾಟಿಂಗ್: ಈಶ್ವರಪ್ಪ ಹೇಳಿದ್ದೇನು..?
ಬೆಂಗಳೂರು: ಇನ್ನೂ ಹಿಜಾಬ್ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಬ್ಯಾಟ್ ಬೀಸಿದ್ದಾರೆ. ಇದು ಸಂವಿಧಾನದ ಹಕ್ಕನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ವಿದ್ಯಾರ್ಥಿನಿಯರು ಇವತ್ತಿನಿಂದ ಅಲ್ಲ, ಹಲವಾರು ದಶಕಗಳಿಂದ ಹಿಜಾಬ್ ಧರಿಸುತ್ತಿದ್ದಾರೆ. ಅವರ ಧರ್ಮವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಇಷ್ಟು ವರ್ಷದಿಂದ ಇಲ್ಲದ ರೂಲ್ಸ್ ಇದ್ದಕ್ಕಿದ್ದಂತೆ ಯಾಕೆ ಮಾಡಿದ್ದಾರೆ ಗೊತ್ತಿಲ್ಲ. ಇದು ತುಂಬಾ ದೊಡ್ಡ ತಪ್ಪು ನನ್ನ ವೈಯಕ್ತಿಕ ಅಭಿಪ್ರಾಯದಿಂದ ಹೇಳ್ತಿದ್ದೇನೆ, ನಾಗರೀಕನ ಸಂವಿಧಾನಿಕ ಹಕ್ಕನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ.
ಇಷ್ಟು ವರ್ಷದಿಂದ ಇಲ್ಲದ ನಿಯಮಗಳು ಈಗ ಏಕೆ. ವಿದ್ಯಾರ್ಥಿನಿಯರು ಕೇವಲ ಒಂದು ಸ್ಕಾರ್ಪ್ ಧರಿಸುತ್ತಾರೆ ಇದು ಅನೇಕ ದಶಕಗಳಿಂದ ರೂಢಿಯಲ್ಲಿರವ ಪದ್ಧತಿ. ಆದರೆ ಹುಡುಗರು ಯಾವತ್ತಾದ್ರೂ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದಾರಾ..?ಇದೆಲ್ಲಾ ಕುಟಿಲ ಪ್ರಯತ್ನ ಸಂವಿಧಾನಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಇದು ಅಮಾನವೀಯ ನಡವಳಿಕೆ. ಇದರಿಂದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸದಿಂದ ವಂಚಿತರಾಗಬೇಕಾ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಈ ತಿಂಗಳ 8ರಂದು ನಡೆಯಲಿದೆ. ನ್ಯಾಯಾಲಯದ ತೀರ್ಪು ಏನು ಹೇಳುತ್ತೋ ನೋಡೋಣ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಈಶ್ವರಪ್ಪ ಹೇಳಿದ್ದೇನು..?
ಇನ್ನೂ ಈ ಬಗ್ಗೆ ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಶಾಲೆಯಲ್ಲಿ ಧರ್ಮವನ್ನು ತರುವ ಪ್ರಯತ್ನ ಮಾಡಬಾರದು. ವಿದ್ಯಾ ದೇಗುಲದಲ್ಲಿ ಎಲ್ಲರೂ ಒಂದೇ. ಕೆಲವರು ರಾಜಕಾರಣಕ್ಕಾಗಿ ಈ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ. ಶಾಲೆಯಲ್ಲಿ ಜಾತಿ-ಧರ್ಮ ಬಂದರೆ ಮಕ್ಕಳಿಗೇ ಸಮಸ್ಯೆ ಆಗುತ್ತದೆ. ಸಮವಸ್ತ್ರ ಇದ್ದರೆ ಯಾವ ಸಮಸ್ಯೆಯೂ ಆಗುವುದಿಲ್ಲ ಎಂದಿದ್ದಾರೆ. ಎಲ್ಲಾ ಮಕ್ಕಳು ಒಂದೇ ರೀತಿ ಇದ್ದರೆ ಯಾವುದೇ ಸಮಸ್ಯೆ ತಲೆದೋರುವುದಿಲ್ಲ ಶಾಲೆಯಲ್ಲಿ ಎಲ್ಲರೂ ಸೋದರ-ಸೋದರಿಯರಂತೆ ಇರಬೇಕು ಎಂಬುದೇ ನಮ್ಮ ಉದ್ದೇಶ. ಇದನ್ನು ವಿನಾಕಾರಣ ವಿವಾದಕ್ಕೀಡು ಮಾಡಿದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ವಾರ್ನಿಂಗ್ ಮಾಡಿದ್ದಾರೆ.