ಈ ಊರಲ್ಲಿ ದಿನ ಬಿಟ್ಟು ದಿನ ನಡೆಯುತ್ತಿದೆ ಕಳ್ಳತನ!; ಕಂಗಾಲಾದ ಗ್ರಾಮಸ್ಥರು!
ಚಾಮರಾಜನಗರ; ಆ ಊರಿನಲ್ಲಿ ದಿನ ಬಿಟ್ಟು ದಿನ ಕಳ್ಳತನವಾಗುತ್ತಿದೆ.. ಪ್ರತಿ ಸಾರಿ ಮನೆಯೊಂದಕ್ಕೆ ಕನ್ನ ಹಾಕಿ ಚಿನ್ನ, ನಗದು ಕಳವು ಮಾಡಿಕೊಂಡು ಹೋಗುತ್ತಿದ್ದಾರೆ.. ಇದರಿಂದ ಗ್ರಾಮಸ್ಥರು ಕಂಗಾಲಾಗಿದ್ದು, ಕಳ್ಳರನ್ನು ಪತ್ತೆಹಚ್ಚಿ ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ..
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದಲ್ಲಿ ಈ ಘಟನೆ ನಡೆದಿದೆ.. ಎರಡು ದಿನಗಳ ಹಿಂದೆ ಒಂದು ಕಳ್ಳತನ ನಡೆದಿತ್ತು.. ಇದೀಗ ಮತ್ತೊಂದು ಕಳವು ಪ್ರಕರಣ ವರದಿಯಾಗಿದೆ.. ಗುಂಡ್ಲುಪೇಟೆ ಪಟ್ಟಣದ 12ನೇ ವಾರ್ಡ್‌ನ ವರದರಾಜು ಎಂಬುವವರ ಮನೆಯಲ್ಲಿ ಕಳವು ಮಾಡಲಾಗಿದೆ.. ಮನೆಯ ಬೀಗ ಒಡೆದಿರುವ ಕಳ್ಳರು, ಮನೆಯ ಬೀರುವಿನಲ್ಲಿದ್ದ 97 ಸಾವಿರ ರೂಪಾಯಿ ನಗದು ಹಾಗೂ 10 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ..
ಮನೆಯ ಸದಸ್ಯರೆಲ್ಲಾ ದಸರಾ ಹಬ್ಬದ ಹಿನ್ನೆಲೆಯಲ್ಲಿ ಮನೆಯ ಬಾಗಿಲು ಹಾಕಿಕೊಂಡು ಕೆಆರ್ ನಗರದ ಸಂಬಂಧಿಕರ ಮನೆಗೆ ಹೋಗಿದ್ದರು.. ಮನೆಗೆ ಬೀಗ ಹಾಕಿದ್ದನ್ನು ಖಚಿತಪಡಿಸಿಕೊಂಡಿರುವ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.. ಇನ್ನು ಸೋಮವಾರ ಮಧ್ಯಾಹ್ನ ವರದರಾಜು ಅವರು ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಪತ್ತೆಯಾಗಿದೆ..
ಇದಕ್ಕೂ ಮುನ್ನ ಎರಡು ದಿನಗಳ ಹಿಂದೆ ಆಟೋ ಚಾಲಕನೊಬ್ಬ ಮನೆಯಲ್ಲಿ ಕಳವು ಮಾಡಲಾಗಿತ್ತು.. ಮನೆ ಬಾಗಿಲು ಮೀಟಿ ನಗದು, ಚಿನ್ನಾಭರಣ ಕದ್ದೊಯ್ದಿದ್ದರು.. ಹೀಗೆ ಇದೇ ಇದೇ ಕಳ್ಳತನ ನಡೆಯುತ್ತಿರುವುದರಿಂದ ಜನರು ಕಂಗಾಲಾಗಿದ್ದಾರೆ.. ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ.. ಭದ್ರತೆ ಒದಗಿಸುವಂತೆ ಮನವಿ ಮಾಡುತ್ತಿದ್ದಾರೆ..