BengaluruPolitics

ಇಂದು ರಾಜ್ಯಕ್ಕೆ ಕೆ.ಸಿ.ವೇಣುಗೋಪಾಲ್‌; ಬದಲಾಗ್ತಾರಾ ಸಿಎಂ..?

ಬೆಂಗಳೂರು; ಮುಡಾ ಹಗರಣದ ತನಿಖೆ ನಡೆಯುತ್ತಿದೆ.. ಇಡಿ ಅಧಿಕಾರಿಗಳು ಕೂಡಾ ಇದರಲ್ಲಿ ಇನ್ವಾಲ್ವ್‌ ಆಗುತ್ತಿದ್ದಾರೆ.. ಈ ನಡುವೆ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಬಗ್ಗೆ ಚರ್ಚೆಗಳು ಹುಟ್ಟುಹಾಕಿವೆ.. ಕೆಲ ನಾಯಕರ ನಿರಂತರ ಸಭೆಗಳು ಈ ಚರ್ಚೆಗೆ ನಾಂದಿ ಹಾಡಿವೆ.. ಹೀಗಿರುವಾಗಲೇ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯಕ್ಕೆ ಎಂಟ್ರಿ ಕೊಡುತ್ತಿದೆ..

ಮುಡಾ ವಿಚಾರ ಮುನ್ನೆಲೆಗೆ ಬಂದಾಗಿನಿಂದ ಕಾಂಗ್ರೆಸ್‌ ಹೈಕಮಾಂಡ್‌ ಹೆಚ್ಚಿನದೇನನ್ನೂ ಹೇಳಿರಲಿಲ್ಲ.. ನಾವು ಸಿದ್ದರಾಮಯ್ಯ ಅವರ ಪರವಾಗಿ ಇದ್ದೇವೆ ಎಂದಷ್ಟೇ ಹೇಳಿತ್ತು.. ಈ ನಡುವೆ ದಲಿತ ನಾಯಕರು ಹೈಕಮಾಂಡ್‌ ನಾಯಕರನ್ನು ಭೇಟಿಯಾಗಿದ್ದರು.. ಹಲವಾರು ಬಾರಿ ರಾಜ್ಯದ ಹಲವು ಸ್ಥಳಗಳಲ್ಲಿ ದಲಿತ ನಾಯಕರು ಸಭೆ ಸೇರಿ ಚರ್ಚೆ ನಡೆಸಿದ್ದರು.. ಅವರು ನಾವು ಸಿಎಂ ಸ್ಥಾನದ ಬಗ್ಗೆ ಚರ್ಚೆ ಮಾಡಿಲ್ಲ ಎಂದೇ ಹೇಳಿಕೊಂಡು ಬರುತ್ತಿದ್ದಾರಾದರೂ, ಈ ಬಗ್ಗೆ ರಾಜ್ಯ ರಾಜಕೀಯದಲ್ಲಿ ಗುಸುಗುಸು ಅಂತೂ ಶುರುವಾಗಿದೆ..

ಇತ್ತ ಸಿಎಂ ಸಿದ್ದರಾಮಯ್ಯ ಅವರು ನಾನು ಯಾವ ಕಾರಣಕ್ಕೂ ರಾಜೀನಾಮೆ ಕೊಡೋದಿಲ್ಲ ಎಂದು ಹೇಳುತ್ತಿದ್ದಾರೆ.. ಇನ್ನೊಂದೆಡೆ ಡಿಕೆ ಸಹೋದರರು ಕೂಡಾ ಸಿದ್ದರಾಮಯ್ಯ ಪರವಾಗಿ ಬ್ಯಾಟ್‌ ಬೀಸುತ್ತಿದ್ದಾರೆ.. ಹೀಗಿರುವಾಗಲೇ ಹೈಕಮಾಂಡ್‌ ನಾಯಕರಲ್ಲಿ ಒಬ್ಬರಾದ ಕೆ.ಸಿ.ವೇಣುಗೋಪಾಲ್‌ ಅವರು ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.. ಇಂದು ಸಂಜೆಯೊಳಗೆ ರಾಜ್ಯದ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ..

ಮುಡಾ ಹಗರಣದ ತನಿಖೆ ನಡೆಯುತ್ತಿರುವಾಗಲೇ ಹೈಕಮಾಂಡ್‌ ನಾಯಕ ವೇಣುಗೋಪಾಲ್‌ ರಾಜ್ಯಕ್ಕೆ ಬರುತ್ತಿದ್ದಾರೆ.. ಹರಿಯಾಣ ಚುನಾವಣೆಯಲ್ಲಿ ಮುಡಾ ಹಗರಣವನ್ನು ಬಿಜೆಪಿ ಪ್ರಚಾರಕ್ಕೆ ಬಳಸಿಕೊಂಡಿತ್ತು.. ಈ ಕಾರಣದಿಂದಲೇ ಹರಿಯಾಣ ಕಾಂಗ್ರೆಸ್‌ ಸೋತಿದೆ ಎಂದು ನಮ್ಮ ರಾಜ್ಯದ ಕಾಂಗ್ರೆಸ್‌ ಹಿರಿಯ ನಾಯಕ ಕೋಳಿವಾಡ ಹೇಳಿದ್ದರು..

ಇನ್ನು ಮುಂದೆ ಮಹಾರಾಷ್ಟ್ರ ಚುನಾವಣೆ ಇದೆ.. ಈ ಚುನಾವಣೆಯಲ್ಲೂ ಮುಡಾ ವಿಚಾರವನ್ನು ಬಿಜೆಪಿ ಬಳಸಿಕೊಳ್ಳಬಹುದು.. ಹೀಗಾಗಿ, ಕಾಂಗ್ರೆಸ್‌ ಹೈಕಮಾಂಡ್‌ಗೆ ಮುಜುಗರವಾಗಲಿದೆ ಎಂದು ಹೇಳಲಾಗುತ್ತಿದೆ.. ಆದ್ರೆ, ಸಿದ್ದರಾಮಯ್ಯರಂತಹ ಜನಪ್ರಿಯ ನಾಯಕರನ್ನು ಅಧಿಕಾರದಿಂದ ಕೆಳಗಿಳಿಸುವುದು ಕಾಂಗ್ರೆಸ್‌ ಅಷ್ಟು ಸುಲಭವಲ್ಲ.. ಅವರ ಬೆಂಬಲವಿಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್‌ ಉಳಿಸಿಕೊಳ್ಳುವುದೂ ಕೂಡಾ ಕಷ್ಟದ ಕೆಲಸ.. ಹೀಗಾಗಿ, ಹೈಕಮಾಂಡ್‌ ಯಾವ ನಿರ್ಧಾರಕ್ಕೆ ಬರಲಿದೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ..

Share Post