Districts

ಹೆಜ್ಜೇನು ದಾಳಿ: ಸ್ಟಡ್ ಫಾರಂನಲ್ಲಿ ಕುದುರೆಗಳ ಸಾವು

ತುಮಕೂರು; ಸ್ಟಡ್ ಫಾರಂನಲ್ಲಿ ಹೆಜ್ಜೆನು ದಾಳಿಯಿಂದ ದುಬಾರಿ ಬೆಲೆಯ ಎರಡು ಕುದುರೆಗಳು ಸಾವನ್ನಪ್ಪಿವೆ. ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿರುವ ಸ್ಟಡ್ ಫಾರಂನಲ್ಲಿ ಘಟನೆ ನಡೆದಿದೆ. ಐರ್ಲ್ಯಾಂಡ್ ದೇಶದ 10 ವರ್ಷದ ಸನಸ್ ಅಕ್ಟಮ್ ಅನ್ನೋ ಹೆಸರಿನ ಕುದುರೆ, ಹಾಗೂ ಅಮೇರಿಕಾದ 15 ವರ್ಷದ ಏರ್ ಸಪೋರ್ಟ್ ಮೃತಪಟ್ಟ ಕುದುರೆಗಳು.

ಈ ಎರಡು ಕುದುರೆಗಳನ್ನ ಐರ್ಲ್ಯಾಂಡ್ ಹಾಗೂ ಅಮೇರಿಕಾ ದೇಶದಿಂದ ತಳಿ ಉತ್ಪಾದನೆಗೆ ಈ ಕುದುರೆಗಳನ್ನ ತರಿಸಲಾಗಿತ್ತು. ಬುಧವಾರ ಬೆಳಗ್ಗೆ ಸ್ಟಡ್ ಫಾರಂ ನಲ್ಲಿ ಎಂದಿನಂತೆ ಮೇಯಲು‌ ಬಿಡಲಾಗಿತ್ತು, ಮದ್ಯಾಹ್ನ ಒಂದು ಗಂಟೆ ಸುಮಾರಿಗೆ ಎರಡು ಕುದುರೆಗಳ ಮೇಲೆ ಹೆಜ್ಜೆನು ದಿಡೀರ್ ದಾಳಿ ನಡೆಸಿದೆ.ಜೇನು ಹುಳಗಳ ದಾಳಿಯಿಂದ ಕಿರುಚಿಕೊಂಡು ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದ ಕುದುರೆಗಳನ್ನ ಸಿಬ್ಬಂದಿಗಳ ಗಮನಿಸಿ ತಕ್ಷಣ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ವೈದ್ಯರು ಗಾಯಗೊಂಡ ಕುದುರೆಗಳಿಗೆ ಸ್ಟಡ್ ಫಾರಂ ನಲ್ಲಿಯೇ ಚಿಕಿತ್ಸೆ ನೀಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಎರಡು ಕುದುರೆಗಳು ಸಾವನ್ನಪ್ಪಿವೆ.

ಈ ಕುದುರೆಗಳು ಸುಮಾರು ಕೊಟ್ಯಾಂತರ ಬೆಲೆಬಾಳುವ ಮೌಲ್ಯವನ್ನ ಹೊಂದಿವೆ ಎನ್ನಲಾಗಿದೆ. ಒಂದೊಂದು ಕುದುರೆಗಳನ್ನ ಒಂದು ಕೋಟಿ ರೂಗೆ ತರಿಸಲಾಗಿತ್ತು ಎನ್ನಲಾಗಿದೆ‌. ಕುದುರೆಗಳ ಸಾವಿನಿಂದ ಸ್ಟಡ್ ಫಾರಂ ಕೊಟ್ಯಾಂತರ ನಷ್ಟ ಅನುಭವಿಸಿದೆ.

Share Post