CrimeDistricts

ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆದ ಮಹಿಳೆ; ಉದ್ವಿಗ್ನ ಪರಿಸ್ಥಿತಿ

ಬಾಗಲಕೋಟೆ; ಮಹಿಳೆಯೊಬ್ಬರು ರಂಭಾಪುರಿ ಸ್ವಾಮೀಜಿ ಕಾರಿನ ಮೇಲೆ ಚಪ್ಪಲಿ ಎಸೆದಿದ್ದು, ಸ್ಥಳದಲ್ಲಿ ಉದ್ವಿಗ್ವ ವಾತಾವರಣ ನಿರ್ಮಾಣವಾಗಿದೆ. ಬಾಗಲಕೋಟೆ ಜಿಲ್ಲೆಯ ಕಲಾದಗಿಯ ರಂಭಾಪುರಿ ಪಂಚಗೃಹ ಗುರುಲಿಂಗೇಶ್ವರ ಮಠದ ಬಳಿ ಈ ಘಟನೆ ನಡೆದಿದೆ. ರಂಭಾಪುರಿ ಶ್ರೀಗಳು ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಈ ವೇಳೆ ಮಹಿಳೆಯೊಬ್ಬರು ಕಾರಿನ ಮೇಲೆ ಚಪ್ಪಲಿ ಎಸೆದಿದ್ದಾರೆ.. ಇದರಿಂದಾಗಿ ಎರಡು ಗುಂಪುಗಳ ನಡುವೆ ಜಗಳವಾಗಿ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ; Bhadrachalam; ಭದ್ರಾಚಲಂ ಶ್ರೀರಾಮನ 6 ಕೆಜಿ ಬೆಳ್ಳಿ ಇಟ್ಟಿಗೆ ನಾಪತ್ತೆ..!

ಮಠದ ಜಾಗದಲ್ಲಿ ಉಳಿಮೆ ಮಾಡಿದ್ದೇವೆ ಜಗಳಕ್ಕೆ ಕಾರಣ;

ಮಠದ ಜಾಗದಲ್ಲಿ ಉಳಿಮೆ ಮಾಡಿದ್ದೇವೆ ಜಗಳಕ್ಕೆ ಕಾರಣ;ರಂಭಾಪುರಿ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಭಕ್ತರು ಹಾಗೂ ಸ್ವಾಮೀಜಿ ನಡುವೆ ಜಗಳವಾಗಿದೆ. ಈ ವಿಚಾರವಾಗಿ ಕೋರ್ಟ್‌ ಮೆಟ್ಟಿಲೇರಲಾಗಿದೆ. ಹೀಗಿರುವಾಗಲೇ ಗಂಗಾಧರ ಸ್ವಾಮೀಜಿ, ಮಠಕ್ಕೆ ಸೇರಿದ ಹೊಲದ ಊಳುಮೆ ಮಾಡಿದ್ದಾರೆ. ಇದರಿಂದಾಗಿ ಮಹಿಳಾ ಭಕ್ತರು ಸೇರಿ ನೂರಾರು ಜನ ಪ್ರತಿಭಟನೆಗಿಳಿದಿದ್ದರು.. ಈ ವೇಳೆ ಮಹಿಳೆಯೊಬ್ಬರು ರೊಚ್ಚಿಗೆದ್ದು, ಚಪ್ಪಲಿಯನ್ನು ರಂಭಾಪುರಿ ಸ್ವಾಮಿಜಿಯ ಕಾರಿನ ಮೇಲೆ ಎಸೆದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ; Vaastu Tips; ತಿಂಗಳ ಮೊದಲ ದಿನ ಈ ವಸ್ತು ಖರೀದಿಸಿ; ಹಣದ ಹೊಳೆಯೇ ಹರಿಯುತ್ತೆ!

ಅಡ್ಡಪಲ್ಲಕ್ಕಿ ಉತ್ಸವಕ್ಕೆ ತೆರಳುತ್ತಿದ್ದ ಶ್ರೀಗಳು;

ಅಡ್ಡಪಲ್ಲಕ್ಕಿ ಉತ್ಸವಕ್ಕೆ ತೆರಳುತ್ತಿದ್ದ ಶ್ರೀಗಳು; ರಂಭಾಪುರಿ ಶ್ರೀಗಳು ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ತೆರಳುತ್ತಿದ್ದರು.. ಅಲ್ಲಿ ಅಡ್ಡಪಲ್ಲಕ್ಕಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಭಕ್ತರು, ರಂಭಾಪುರಿ ಶ್ರೀ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ್ದಾರೆ. ಧಿಕ್ಕಾರ ಕೂಗಿದ್ದಾರೆ. ಇದೇ ವೇಳೆ ಮಹಿಳೆಯೊಬ್ಬರು ಚಪ್ಪಲಿ ಎಸೆದಿದ್ದಾರೆ.

ವಿವಾದ ಕೋರ್ಟ್ ನಲ್ಲಿದೆ. ಹೀಗಿರುವಾಗ ಗಂಗಾಧರ ಸ್ವಾಮೀಜಿ ಮಠದ ದುರಸ್ತಿ, ಮಠದ ಹೊಲದ ಉಳುಮೆ ಮಾಡಿಸಿದ್ದಾರೆ. ಇದಕ್ಕೆ ಭಕ್ತರು ಆಕ್ರೋಶಗೊಂಡಿದ್ದು, ಗಂಗಾಧರ ಸ್ವಾಮೀಜಿ ಅವರನ್ನು ಮಠದೊಳಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮಠದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಇದನ್ನೂ ಓದಿ; Dangal Movie; ದಂಗಲ್‌ ಸಿನಿಮಾದ ಬಾಲನಟಿ ಸುಹಾನಿ ಇನ್ನಿಲ್ಲ!

ಭಕ್ತರು ಮಾಡುವ ಆರೋಪವೇನು..?;

ಭಕ್ತರು ಮಾಡುವ ಆರೋಪವೇನು..?; ಕಲಾದಗಿ ಮಠಕ್ಕೆ 60-70 ಎಕರೆ ಭೂಮಿ ಇದ್ದು, ಒಂದು ಶಿಕ್ಷಣ ಸಂಸ್ಥೆ ಕೂಡಾ ಇದೆ. ಈ ಆಸ್ತಿ ಹೊಡೆಯಲು ರಂಭಾಪುರಿ ಶ್ರೀಗಳು ಹುನ್ನಾರ ಮಾಡಿದ್ದಾರೆ ಎಂದು ಭಕ್ತರೊಬ್ಬರು ಆರೋಪ ಮಾಡಿದ್ದಾರೆ. ಅದಕ್ಕಾಗಿ 2015ರಲ್ಲಿ ಲಿಂಗೈಕ್ಯರಾದ ಚಂದ್ರಶೇಖರ ಸ್ವಾಮೀಜಿ ಅವರ ಅಳಿಯ ಗಂಗಾಧರ ಸ್ವಾಮೀಜಿರನ್ನ ಪೀಠಾಧಿಪತಿಯನ್ನಾಗಿ ನೇಮಕ ಮಾಡಿದ್ದಾರೆ. ಇದಕ್ಕೆ ನಮ್ಮ ವಿರೋಧ ವಿದೆ ಎಂದು ಭಕ್ತರು ಆರೋಪಿಸಿದ್ದಾರೆ.

ರಂಭಾಪುರಿ ಶ್ರೀ ಏನು ಸ್ಪಷ್ಟನೆ ಕೊಟ್ಟಿದ್ದಾರೆ..?;

ರಂಭಾಪುರಿ ಶ್ರೀ ಏನು ಸ್ಪಷ್ಟನೆ ಕೊಟ್ಟಿದ್ದಾರೆ..?; ಈ ಬಗ್ಗೆ ಮಾತನಾಡಿರುವ ರಂಭಾಪುರಿ ಸ್ವಾಮೀಜಿ, ಕಲಾದಗಿಯಲ್ಲಿ ನಮ್ಮ ಕಾರ್ಯಕ್ರಮ‌ ಇಲ್ಲ. ಕಲಾದಗಿಗೆ ನಾವು ಹೋಗುವುದೂ ಇಲ್ಲ ಎಂದಿದ್ದಾರೆ. ನ್ಯಾಯಾಲಯದ ತೀರ್ಪೇ ಅಂತಿಮ ಎಂದಿರುವ ಶ್ರೀಗಳು, ಕೋರ್ಟ್‌ನಲ್ಲಿದೆ ಎಂದು ಮಠದ ಅಭಿವೃದ್ಧಿ ಕುಂಠಿತ ಮಾಡುವುದು ಸರಿಯಲ್ಲ ಎಂದಿದ್ದಾರೆ.

Share Post